ತೆಲುಗು 'ಲವ್ ಮಾಕ್ಟೈಲ್' ಜೋಡಿಗೆ ಮದುವೆ ಆಮಂತ್ರಣ ನೀಡಿದ ಕೃಷ್ಣ-ಮಿಲನ

ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್ ಜೋಡಿ ತಮ್ಮ ವಿವಾಹಕ್ಕೆ ಎಲ್ಲ ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಸೆಲೆಬ್ರಿಟಿಗಳಿಗೆ ಮದುವೆ ಆಮಂತ್ರಣ ನೀಡಲು ಶುರು ಮಾಡಿರುವ ಲವ್ ಮಾಕ್ಟೈಲ್ ಜೋಡಿ, ಕಿಚ್ಚ ಸುದೀಪ್, ಅಮೂಲ್ಯ, ದೀಪಕಾ ದಾಸ್ ಸೇರಿದಂತೆ ಹಲವರನ್ನು ಭೇಟಿ ಆಹ್ವಾನಿಸಿದ್ದಾರೆ.

ಈಗ ಲವ್ ಮಾಕ್ಟೈಲ್ ತೆಲುಗು ರೀಮೇಕ್ ಮಾಡುತ್ತಿರುವ ಚಿತ್ರತಂಡಕ್ಕೆ ಕೃಷ್ಣ-ಮಿಲನ ಮದುವೆಯ ಕರೆಯೋಲೆ ನೀಡಿದ್ದಾರೆ. ಖುದ್ದು ಲವ್ ಮಾಕ್ಟೈಲ್ ಚಿತ್ರೀಕರಣ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿ ಕಲಾವಿದರನ್ನು ಆಹ್ವಾನಿಸಿದ್ದಾರೆ.

ತೆಲುಗು ಲವ್ ಮಾಕ್ಟೈಲ್ ಚಿತ್ರದಲ್ಲಿ ತಮನ್ನಾ ಭಾಟಿಯಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಸತ್ಯದೇವ್ ನಾಯಕರಾಗಿದ್ದಾರೆ. ಈ ಇಬ್ಬರನ್ನು ಕೃಷ್ಣ ಮತ್ತು ಮಿಲನ ಭೇಟಿ ಮಾಡಿ ಮದುವೆಗೆ ಆಹ್ವಾನಿಸಿದ್ದಾರೆ.

Krishna and Milana Nagaraj invited Telugu Lockmoctail Movie Cast to their Wedding

ತೆಲುಗಿನಲ್ಲಿ ಲವ್ ಮಾಕ್ಟೈಲ್ ಚಿತ್ರಕ್ಕೆ ನಾಗಶೇಖರ್ ಆಕ್ಷನ್ ಕಟ್ ಹೇಳಿದ್ದು, ಶೂಟಿಂಗ್ ಸಹ ನಡೆಯುತ್ತಿದೆ. ಇನ್ನು ನಾಗಶೇಖರ್ ಮೂವೀಸ್ ಬ್ಯಾನರ್‌ನಲ್ಲಿ ಚಿತ್ರ ನಿರ್ಮಾಣವಾಗಲಿದೆ. ಕಾಲ ಭೈರವ ಸಂಗೀತ ನೀಡಲಿದ್ದಾರೆ. ಸತ್ಯ ಹೆಗ್ಡೆ ಛಾಯಾಗ್ರಹಣ ಇರಲಿದೆ. ಕನ್ನಡದಲ್ಲಿ ರಘು ದೀಕ್ಷಿತ್ ಸಂಗೀತ ಒಳಗೊಂಡಿದೆ.

ಅಂದ್ಹಾಗೆ, ಮಿಲನ ಮತ್ತು ಕೃಷ್ಣ ಅವರ ಮದುವೆ ಫೆಬ್ರವರಿ 14, 2021 ರಂದು ಬೆಂಗಳೂರಿನಲ್ಲಿ ನಡೆಯಲಿದೆ. ಇತ್ತೀಚಿಗಷ್ಟೆ ಕೃಷ್ಣ ಮತ್ತು ಮಿಲನ ಜೋಡಿ ಬ್ಯಾಚಿಲ್ಲೋರೆಟ್ ಪಾರ್ಟಿ ಮಾಡಿದ್ದರು. ಸ್ನೇಹಿತರು ಆಯೋಜಿಸಿದ್ದ ಪಾರ್ಟಿಯಲ್ಲಿ ಮಿಲನ ಮತ್ತು ಕೃಷ್ಣ ಮಿಂಚಿದ್ದರು. ಈ ಫೋಟೋಗಳು ಅಭಿಮಾನಿಗಳ ಕಣ್ಮನ ಸೆಳೆದಿತ್ತು.

More from Filmibeat

English summary
Darling Krishna and Milana Nagaraj invited telugu Lock moctail Movie cast to their Wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X