ಕೃಷ್ಣ ಮತ್ತು ಮಿಲನಾ ನಾಗರಾಜ್ ಮದುವೆ ದಿನವೇ ಅಭಿಮಾನಿಗಳಿಗೆ ಕಾದಿದೆ ಬಿಗ್ ಸರ್ಪ್ರೈಸ್

ಸ್ಯಾಂಡಲ್ ವುಡ್ ನ ಕ್ಯೂಟ್ ಜೋಡಿಗಳಲ್ಲಿ ನಟ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿ ಕೂಡ ಒಂದು. ಲವ್ ಮಾಕ್ ಟೇಲ್ ಮೂಲಕ ಕನ್ನಡ ಚಿತ್ರಾಭಿಮಾನಿಗಳ ಹೃದಯ ಗೆದ್ದಿರುವ ಈ ಸುಂದರ ಜೋಡಿ ಸದ್ಯದಲ್ಲೇ ಹಸೆಮಣೆ ಏರುವ ತಯಾರಿಯಲ್ಲಿದ್ದಾರೆ. ಇಬ್ಬರೂ ಫೆಬ್ರವರಿ 14ರಂದು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ.

ಈಗಾಗಲೇ ಮದುವೆ ತಯಾರಿಯಲ್ಲಿ ಬ್ಯುಸಿ ಇರುವ ಮಿಲನಾ ಮತ್ತು ಡಾರ್ಲಿಂಗ್ ಕೃಷ್ಣ ಜೋಡಿ, ಬಹುನಿರೀಕ್ಷೆಯ ಲವ್ ಮಾಕ್ ಟೇಲ್-2 ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದಾರೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ಸಿನಿಮಾತಂಡ ಕೊನೆಯ ಹಂತದ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.

ಮದುವೆ ದಿನವೇ ಲವ್ ಮಾಕ್ ಟೇಲ್-2 ಹಾಡು ರಿಲೀಸ್

ಮದುವೆ ದಿನವೇ ಲವ್ ಮಾಕ್ ಟೇಲ್-2 ಹಾಡು ರಿಲೀಸ್

ಇದೀಗ ಮಿಲನಾ ಮತ್ತು ಕೃಷ್ಣ ಕಡೆಯಿಂದ ಮತ್ತೊಂದು ಸುದ್ದಿ ಕೇಳಿಬಂದಿದೆ. ಇಬ್ಬರ ಮದುವೆ ದಿನವೇ ಲವ್ ಮಾಕ್ ಟೇಲ್ ಸಿನಿಮಾದ ಹಾಡನ್ನು ರಿಲೀಸ್ ಮಾಡಲು ಕೃಷ್ಣ ಆಂಡ್ ಟೀಂ ಪ್ಲಾನ್ ಮಾಡಿದೆಯಂತೆ. ಪಾರ್ಟ್-1 ಮೂಲಕ ಸಂಚಲನ ಮೂಡಿಸಿದ್ದ ಲವ್ ಮಾಕ್ ಟೇಲ್ ಸಿನಿಮಾ ಇದೀಗ ಎರಡನೇ ಭಾಗದ ಮೊದಲ ಹಾಡನ್ನು ರಿಲೀಸ್ ಮಾಡುತ್ತಿರುವುದು ನಿರೀಕ್ಷೆ ಹೆಚ್ಚಿಸಿದೆ.

ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ

ನಕುಲ್ ಅಭ್ಯಂಕರ್ ಸಂಗೀತ ಸಂಯೋಜನೆ

ಫೆಬ್ರವರಿ 14ರಂದು ರಿಲೀಸ್ ಆಗುತ್ತಿರುವ ನಿರ್ದಿಷ್ಟ ಹಾಡಿನ ಮೇಲೆ ಈಗಾಗಲೇ ನಿರ್ದೇಶಕ ಕೃಷ್ಣ ಸಂಗೀತ ನಿರ್ದೇಶಕ ನಕುಲ್ ಅಭ್ಯಂಕರ್ ಅವರ ಜೊತೆ ಕೆಲಸ ಮಾಡುತ್ತಿದ್ದಾರೆ. ಲವ್ ಮಾಕ್ ಟೇಲ್ ಮೊದಲ ಭಾಗದ ಹಾಡುಗಳಿಗೆ ಖ್ಯಾತ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಗೀತ ಸಂಯೋಜನೆ ಮಾಡಿದ್ದರು. ಆದರೆ ಪಾರ್ಟ್-2ನಲ್ಲಿ ಕೆಲವು ಕಾರಣಗಳಿಂದ ಸಿನಿಮಾದಿಂದ ಹೊರನಡೆದಿದ್ದಾರೆ.

ಬ್ಯಾಚಿಲ್ಲೋರೆಟ್ ಪಾರ್ಟಿಯಲ್ಲಿ ಮಿಂಚಿದ ಕೃಷ್ಣ-ಮಿಲನ ನಾಗರಾಜ್

ಭಾರಿ ನಿರೀಕ್ಷೆಯೊಂದಿಗೆ ಬರ್ತಿದೆ ಹಾಡು

ಭಾರಿ ನಿರೀಕ್ಷೆಯೊಂದಿಗೆ ಬರ್ತಿದೆ ಹಾಡು

ಲವ್ ಮಾಕ್ ಟೇಲ್ ಮೊದಲ ಭಾಗದಿಂದ ಸಂಚಲನ ಸೃಷ್ಟಿ ಮಾಡಿದ್ದ ಕೃಷ್ಣ ಮತ್ತು ಮಿಲನಾ ಜೋಡಿ ಪಾರ್ಟ್-2 ಮೂಲಕ ಹೇಗೆ ಮೋಡಿ ಮಾಡಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ರೊಮ್ಯಾಂಟಿಕ್ ಸಿನಿಮಾದಿಂದ ಬರ್ತಿರುವ ಮೊದಲ ಹಾಡು ಭಾರಿ ನಿರೀಕ್ಷೆ ಮೂಡಿಸಿದೆ. ವಿಶೇಷವಾಗಿ ಮದುವೆ ದಿನವೇ ರಿಲೀಸ್ ಆಗುತ್ತಿರುವುದು ಮತ್ತಷ್ಟು ಕುತೂಹಲ ಹೆಚ್ಚಿಸಿದೆ.

ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ

ಚಿತ್ರದಲ್ಲಿ ಯಾರೆಲ್ಲ ನಟಿಸುತ್ತಿದ್ದಾರೆ

ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯರಾಗಿ ರಾಚೆಲ್ ಡೇವಿಡ್ ಕಾಣಿಸಿಕೊಳ್ಳುತ್ತಿದ್ದಾರೆ. ರಾಚೆಲ್ ಅವರಿಗೆ ಇದು ಮೊದಲ ಕನ್ನಡದ ಸಿನಿಮಾ. ಇನ್ನು ಸುಶ್ಮಿತಾ, ಅಭಿಲಾಷ್ ಮತ್ತು ಖುಷಿ ಆಚಾರ್ ಸಹ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಅಂದಹಾಗೆ ಪಾರ್ಟಿ-2ನಲ್ಲಿ ನಿಧಿಮಾ ಪಾತ್ರ ಇಲ್ಲ. ಅಂದ್ಮೇಲೆ ಮಿಲನಾ ನಾಗರಾಜ್ ಕಾಣಿಸಿಕೊಳ್ಳುತ್ತಿಲ್ಲ.

Recommended Video

ಕೋಟಿ ಬೆಲೆಯ ಕಾರು ಖರೀದಿ ಮಾಡಿದ ರಶ್ಮಿಕಾ ಮಂದಣ್ಣ | Filmibeat Kannada
ಬೇರೆ ಬೇರೆ ಸಿನಿಮಾಗಳಲ್ಲಿ ಕೃಷ್ಣ-ಮಿಲನಾ ಬ್ಯುಸಿ

ಬೇರೆ ಬೇರೆ ಸಿನಿಮಾಗಳಲ್ಲಿ ಕೃಷ್ಣ-ಮಿಲನಾ ಬ್ಯುಸಿ

ಲವ್ ಮಾಕ್ ಟೇಲ್-2 ಸಿನಿಮಾ ಜೊತೆಗೆ ಕೃಷ್ಣ ಬೇರೆ ಬೇರೆ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ನಾಗಶೇಖರ್ ನಿರ್ದೇಶನದ ಶ್ರೀಕೃಷ್ಣ2ಜಿಮೇಲ್.ಕಾಮ್, Mr. ಬ್ಯಾಚುಲರ್, ಶುಗರ್ ಫ್ಯಾಕ್ಟರಿ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ನಟಿ ಮಿಲನಾ ನಾಗರಾಜ್ ಸಹ ಬೇರೆ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರೆ. ಸದ್ಯ ಮಿಲನಾ ದಿಯಾ ಖ್ಯಾತಿಯ ನಾಯಕ ಪೃಥ್ವಿ ಅಂಬರ್ ನಾಯಕನಾಗಿ ಕಾಣಿಸಿಕೊಳ್ಳುತ್ತಿರುವ 'ಫಾರ್ Regn' ಸಿನಿಮಾದಲ್ಲಿ ಮಿಲನಾ ನಾಯಕಿಯಾಗಿ ಬಣ್ಣಹಚ್ಚಿದ್ದಾರೆ.

More from Filmibeat

English summary
Darling Krishna And Milana Nagaraj Love Mocktail 2 song to be released on February 14th, wedding day of Krishna and Milana Nagaraj.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X