Krishna Janmashtami 2023: ಬಾಲಗೋಪಾಲನಾಗಿ ಮಿಂಚಿದ ನಟ ನಿಖಿಲ್ ಕುಮಾರ್ ಪುತ್ರ ಅವ್ಯಾನ್ ದೇವ್

ಸ್ಯಾಂಡಲ್​ವುಡ್ ನಟ ನಿಖಿಲ್ ಕುಮಾರಸ್ವಾಮಿ ಮನೆಯಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗಿದೆ. ಜನ್ಮಾಷ್ಟಮಿ ಪ್ರಯುಕ್ತ ತಮ್ಮ ಮಗ ಅವ್ಯಾನ್ ದೇವ್‌ಗೆ ಕೃಷ್ಣನ ಅಲಂಕಾರ ಮಾಡಿದ್ದಾರೆ. ಬಾಲಗೋಪಾಲನಂತೆ ಕಾಣುವ ಮುದ್ದು ಕಂದ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮೊಮ್ಮಗ ಬಾಲಕೃಷ್ಣನಾಗಿ ಕಾಣಿಸಿಕೊಂಡಿದ್ದು, ಬೆಣ್ಣೆ ಬಟ್ಟಲಿನ ಮುಂದೆ ಕುಳಿತು ಥೇಟ್ ಕೃಷ್ಣನಂತೆ ಕಾಣುತ್ತಿದ್ದಾರೆ. ಕುಟುಂಬದ ಜೊತೆಗೆ ಮಗನನ್ನು ಕೂರಿಸಿ ಫೋಟೋ ತೆಗೆಯಲಾಗಿದೆ. ಮಗುವಿನ ಫೋಟೋಸ್ ಮತ್ತು ಕುಟುಂಬದವ ಜೊತೆಗಿನ ವಿಡಿಯೋವನ್ನು ನಿಖಿಲ್ ಶೇರ್ ಮಾಡಿದ್ದಾರೆ.

actor-nikhil-kumaraswamy-celebrates-janmashtami

ಫೋಟೋಗಳ ಜೊತೆಗೆ ನಾಡಿನ ಜನತೆಗೆ ಕೃಷ್ಣ ಜನ್ಮಾಷ್ಟಮಿಯ ಶುಭಾಶಯ ಕೋರಿದ್ದಾರೆ. "ಕೃಷ್ಣಂ ವಂದೇ ಜಗದ್ಗುರುಂ. ನಾಡಿನ ಸಮಸ್ತ ಜನತೆಗೆ ಶ್ರೀ ಕೃಷ್ಣ ಜನ್ಮಾಷ್ಟಮಿ ಹಬ್ಬದ ಹಾರ್ದಿಕ ಶುಭಾಶಯಗಳು. ಆ ಕೃಷ್ಣ ಪರಮಾತ್ಮನು ಎಲ್ಲರಿಗೂ ಸುಖ ಶಾಂತಿ, ನೆಮ್ಮದಿ, ಸಮೃದ್ಧಿ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಹಾರೈಸಿದ್ದಾರೆ.

ನಿಖಿಲ್ ಕುಮಾರಸ್ವಾಮಿ ಹಂಚಿಕೊಂಡಿರುವ ಫೋಟೋಗಳಲ್ಲಿ ಮುದ್ದು ಕಂದ ಅವ್ಯಾನ್ ದೇವ್, ಶ್ರೀ ಕೃಷ್ಣ ಮತ್ತು ಹಸುಗಳಿರುವ ವಿಗ್ರಹದ ಮುಂದೆ ಕುಳಿತು ಕ್ಯಾಮರಾಗೆ ಹಲವು ಭಂಗಿಯಲ್ಲಿ ಪೋಸ್ ಕೊಟ್ಟಿದ್ದಾನೆ. ಕರುವಿನ ವಿಗ್ರಹವನ್ನು ಹಿಡಿದುಕೊಂಡಿರುವ ಅವ್ಯಾನ್ ಮುಂದೆ ಸಣ್ಣ ಬಟ್ಟಲಿನಲ್ಲಿ ಕೃಷ್ಣನಿಗೆ ಪ್ರಿಯವಾದ ಬೆಣ್ಣೆಯನ್ನೂ ತುಂಬಿ ಇಡಲಾಗಿತ್ತು.

actor-nikhil-kumaraswamy-celebrates-janmashtami

ಅವ್ಯಾನ್ ದೇವ್‌ಗೆ ಗೋಲ್ಡನ್ ಬಾರ್ಡರ್ ಇರುವ ಬಿಳಿ ಪಂಜೆಯನ್ನು ಉಡಿಸಿ ಚಂದದ ಆಭರಣಗಳನ್ನು ಹಾಕಲಾಗಿದೆ. ತಲೆಗೆ ಶಾಲೆ ಸುತ್ತಿ ಅದಕ್ಕೆ ಸುಂದರ ನವಿಲುಗರಿ ಸಿಕ್ಕಿಸಲಾಗಿದೆ. ಹಣೆಗೆ ಕೆಂಪು ಚಿತ್ತಾರ, ಕಣ್ಣುಗಳ ಪಕ್ಕದಲ್ಲಿನ ಅಲಂಕಾರದಲ್ಲಿ ಅವ್ಯಾನ್ ಮುದ್ದು ಮುದ್ದಾಗಿ ಫೋಸ್ ನೀಡಿದ್ದಾರೆ.

ಸಾಮಾಜಿಕ ಮಾಧ್ಯಮಗಳಲ್ಲಿ ಎಚ್ ಡಿ ಕುಮಾರಸ್ವಾಮಿ ಮೊಮ್ಮಗ ಅವ್ಯಾನ್ ದೇವ್ ಬಾಲಗೋಪಾಲನ ಲುಕ್ ನೋಡಿ ನಿಖ್ ಅಭಿಮಾನಿಗಳು ಖುಷ್ ಆಗಿದ್ದಾರೆ. ಫೋಟೋಗೆ ಈಗಾಗಲೇ ಮುದ್ದು ಕೃಷ್ಣ, ಮರಿ ದೇವೇಗೌಡರು, ಕ್ಯೂಟ್ ಎಂಬಂತಹ ಕಾಮೆಂಟ್‌ಗಳ ಜೊತೆಗೆ ಹಲವರು ಆಶೀರ್ವಾದ ಮಾಡಿದ್ದಾರೆ. " ತುಂಬಾ ಮುದ್ದಾಗಿ ಕಾಣುತ್ತಾರೆ.. ದೇವರು ಅವರಿಗೆ ಉತ್ತಮ ಆರೋಗ್ಯ ಮತ್ತು ಸಮೃದ್ಧಿಯನ್ನು ನೀಡಲಿ" ಎಂದು ಹಲವರು ಕಾಮೆಂಟ್ ಮಾಡುತ್ತಿದ್ದು, ಹಾರ್ಟ್ ಸಿಂಬಲ್‌ಗಳ ಸುರಿಮಳೆಯಾಗಿದೆ.

ನಟ ನಿಖಿಲ್ ಹಂಚಿಕೊಂಡಿರುವ ವಿಡಿಯೋದಲ್ಲಿ ಮೊಮ್ಮಗನ ಜೊತೆ ಮಾಜಿ ಸಿಎಂ ಕುಮಾರಸ್ವಾಮಿ ದಂಪತಿ ಕೃಷ್ಣ ಜನ್ಮಾಷ್ಟಮಿ ಸಂಭ್ರಮಿಸಿರುವುದು ಕಾಣಿಸುತ್ತಿದೆ. ಮೊಮ್ಮಗನ ಜೊತೆಯಲ್ಲಿ, ಮಗ, ಸೊಸೆಯ ಜೊತೆಯಲ್ಲಿ ಕುಳಿತು ಫೋಟೋಗೆ ಫೋಸ್ ನೀಡಿದ್ದಾರೆ. ಬಳಿಕ ಅನಿತಾ ಕುಮಾರಸ್ವಾಮಿ ಕೂಡ ಮೊಮ್ಮಗನ ಜೊತೆಗೆ ಸಿಂಗಲ್ ಫೋಟೋಸ್ ತೆಗೆಸುಕೊಂಡಿದ್ದಾರೆ. ನಿಖಿಲ್ ಪತ್ನಿ ರೇವತಿ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

ಇತ್ತೀಚೆಗೆ ನಟ ತಮ್ಮ ಕುಟುಂಬದ ಜೊತೆಗೆ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದರು. ಪತ್ನಿ ರೇವತಿ , ಮಗ ಅವ್ಯಾನ್‌ ದೇವ್‌ ಹಾಗೂ ಕುಟುಂಬದ ಜೊತೆ ನಿಖಿಲ್ ಕುಮಾರಸ್ವಾಮಿ ವರಮಹಾಲಕ್ಷ್ಮಿ ಹಬ್ಬ ಆಚರಿಸಿದ್ದರು. ಸಾಂಪ್ರದಾಯಿಕ ಉಡುಗೆಯಲ್ಲಿ ಅಪ್ಪ ಮಗ ಮಿಂಚಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ನಟ ನಿಖಿಲ್ ಕುಮಾರಸ್ವಾಮಿ ಸಾಮಾಜಿಕ ಜಾಲತಾಣಗಳಲ್ಲಿ ಆಕ್ಟಿವ್ ಆಗಿರುತ್ತಾರೆ. ಆಗ್ಗಾಗೆ ತಮ್ಮ ಮನೆಯಲ್ಲಿ ನಡೆಯುವ ಹಬ್ಬ, ಕಾರ್ಯಕ್ರಮಗಳ ಫೋಟೋಗಳನ್ನು ಅಭಿಮಾನಿಗಳಿಗಾಗಿ ಹಂಚಿಕೊಳ್ಳುತ್ತಾರೆ.

More from Filmibeat

English summary
Actor Nikhil Kumaraswamy celebrates Janmashtami, shares avyaan photos.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X