»   » ಆಸ್ಕರ್ ಕೃಷ್ಣ ಲೀಲೆಗಳು ಜೋರು.. ನೀವಾಗಲ್ಲ ಪಾರು..

ಆಸ್ಕರ್ ಕೃಷ್ಣ ಲೀಲೆಗಳು ಜೋರು.. ನೀವಾಗಲ್ಲ ಪಾರು..

Posted By: ಜೀವನರಸಿಕ
Subscribe to Filmibeat Kannada

ಆಸ್ಕರ್ ಕೃಷ್ಣ ಅಂದ್ರೆ ಯಾರು ಅಂತ ನಿಮ್ಗೆ ಹೇಳೋದಾದ್ರೆ. ಈ ಹಿಂದೆ ಮಿಸ್ ಮಲ್ಲಿಗೆ ಅನ್ನೋ ಸಿನಿಮಾ ಮಾಡಿದ್ದ ನಿರ್ದೇಶಕ. ಕಳೆದವರ್ಷ ತೆರೆಕಂಡ ಮಿಸ್ ಮಲ್ಲಿಗೆ ಚಿತ್ರ ಅಷ್ಟೇನೂ ಸಕ್ಸಸ್ ಪಡ್ಕೊಳ್ಳಲಿಲ್ಲ. ಚಿತ್ರದಲ್ಲಿ `ಅದೂ ಇದು' ಬಿಟ್ರೆ ಬೇರೇನೂ ಇರಲಿಲ್ಲ.

ಈಗ ಮತ್ತೊಮ್ಮೆ ವಿವಾದದಿಂದ ಸುದ್ದಿಯಾಗ್ತಿರೋ ಆಸ್ಕರ್ ಕೃಷ್ಣ ನಿರ್ದೇಶನದ ಮಿಸ್ ಮಲ್ಲಿಗೆ ಚಿತ್ರ ಕೂಡ 2013-2014ರ ಸ್ಯಾಂಡಲ್ವುಡ್ನ ವಿವಾದಾತ್ಮಕ ಚಿತ್ರ. ಆರಂಭದಲ್ಲಿ ಇಟ್ಟ ಚಿತ್ರದ ಟೈಟಲ್ ಮೈಸೂರು ಮಲ್ಲಿಗೆಗೆ ಖ್ಯಾತ ನಿರ್ದೇಶಕ ನಾಗಾಭರಣರಿಂದ ವಿರೋಧ ವ್ಯಕ್ತವಾದ ನಂತ್ರ ಮಿಸ್ ಮಲ್ಲಿಗೆ ಅಂತ ಬದಲಾಗಿತ್ತು.

ನಟಿ ರೂಪಾ ನಟರಾಜ್ ಪಡ್ಡೆಗಳ ಕಣ್ಣು ಕುಕ್ಕಿದ್ದ ಚಿತ್ರ ಭರ್ಜರಿ ಪ್ರಚಾರ ಪಡ್ಕೊಂಡ್ರೂ ಆಸ್ಕರ್ ಕೃಷ್ಣ ಅವ್ರ ಕೈಯಿಂದ ಅದ್ಭುತವಾಗೇನೂ ಮೂಡಿ ಬರದೆ ನಿರಾಸೆ ಮೂಡಿಸಿತ್ತು. ಅದಾದ ನಂತ್ರ ಈಗ ಹೊಸದೊಂದು ಚಿತ್ರ ಮಾಡೋಕೆ ಹೊರಟಿರೋ ಆಸ್ಕರ್ ಕೃಷ್ಣ ನವ ನಟಿಯೊಬ್ಬರಿಗೆ ಲೈಂಗಿಕ ಕಿರುಕುಳ ಕೊಡ್ತಿದ್ದಾರಂತೆ.

ಮೋಹಿನಿ ಈಸ್ ಬ್ಯಾಕ್

ಆಸ್ಕರ್ ಕೃಷ್ಣ ಈಗ ಮೋಹಿನಿ ಈಸ್ ಬ್ಯಾಕ್ ಅನ್ನೋ ಸಿನಿಮಾ ಶುರುಮಾಡ್ತಿದ್ದಾರಂತೆ. ಈ ಚಿತ್ರಕ್ಕೆ ಏಂಜೆಲಾ ಅನ್ನೋ ಅಪ್ಸರೆಯಂತಹಾ ಸುಂದರ ಹುಡುಗಿಯನ್ನೂ ಸೆಲೆಕ್ಟ್ ಮಾಡಿದ್ರು. ತಮಿಳುನಾಡು ಮೂಲದ ಈ ನಟಿಗೆ ಕನ್ನಡ ಬರೋದಿಲ್ಲ. ಏಂಜೆಲಾ ಈಗ ಆಸ್ಕರ್ ಕೃಷ್ಣ ಸಿನಿಮಾದಲ್ಲಿ ನಟಿಸೋಕೆ ಒಪ್ಪಂದವನ್ನೂ ಮಾಡಿಕೊಂಡಿದ್ದಾರೆ.

ಟೂ ಪೀಸ್ನಲ್ಲಿ ನಿಂತ್ಕೋ ಅಂತಾರೆ

ಈ ಹಿಂದೆ ಮಿಸ್ ಮಲ್ಲಿಗೆಯಲ್ಲಿ ರೂಪಾ ನಟರಾಜ್ ಬಿಂದಾಸ್ ಆಗಿ ಹಾಟ್ ಹಾಟಾಗಿ ಕಾಣಿಸಿಕೊಂಡಿದ್ರು. ಅದರಂತೆ ಇಲ್ಲೂ ಏಂಜೆಲಾರಿಂದ ಪಾತ್ರ ಮಾಡಿಸೋ ಪ್ಲಾನ್ನಲ್ಲಿರೋ ನಿರ್ದೇಶಕರು ಮಾಡ್ತಿರೋದೇನು ಗೊತ್ತಾ? ಹೊಸ ನಾಯಕಿಯನ್ನ ಟೂ ಪೀಸ್ನಲ್ಲಿ ನಿಂತ್ಕೋ ಫೋಟೋಶೂಟ್ನಲ್ಲಿ ಹೇಗೆ ಕಾಣಿಸ್ತೀಯಾ ನಾನು ನೋಡ್ಬೇಕು ಅಂತಿದ್ದಾರಂತೆೇ!

ಒಪ್ಪಂದದಿಂದ ಒದ್ದಾಟ

ಕನ್ನಡ ಬಾರದ ಹೊಸ ಹುಡುಗಿ ಏಂಜೆಲಾ ಅಗ್ರೀಮೆಂಟ್ಗೆ ಸಹಿ ಹಾಕಿದ್ದಾರೆ. ನಿರ್ದೇಶಕರು ಟೂ ಪೀಸ್ನಲ್ಲಿ ನಿಲ್ಲೋಕೆ ಹೇಳ್ತಿರೋದು ನೋಡಿ ಏಂಜೆಲಾ ಆಗೋದಿಲ್ಲ ಅಂತ ವಿರೋಧಿಸಿದ್ರೆ. ಅಗ್ರೀಮೆಂಟ್ ಆಗಿದೆ ಕಂಪ್ಲೇಂಟ್ ಕೊಡ್ತೀನಿ ಅಂತ ಹೆದರಿಸ್ತಿದ್ದಾರಂತೆ ನಿರ್ದೇಶಕರು. ರಾಮ ರಾಮಾ!

ಅಪ್ಪ ಇಲ್ಲ ಅಮ್ಮ ದುಬೈ

ನಟಿ ಏಂಜೆಲಾ ಚಿತ್ರರಂಗದಲ್ಲಿ ಬೆಳೀಬೇಕು ಅನ್ನೋ ಕನಸು ಇಟ್ಕೊಂಡು ಬೆಂಗಳೂರಿಗೆ ಕಾಲಿಟ್ಟಿದ್ದಾರೆ. ತಂದೆ ಇಲ್ಲದ ಈ ನಟಿಯ ತಾಯಿ ದುಬೈನಲ್ಲಿದ್ದಾರೆ. ಬೆಂಗಳೂರಲ್ಲಿ ತೀರಾ ಹತ್ತಿರದವ್ರು ಯಾರೂ ಇಲ್ಲ. ಕನ್ನಡ ಭಾಷೆಯೂ ಬರದೆ ಏಂಜೆಲಾ ಪರದಾಡ್ತಿದ್ದಾರೆ.

ಅಮ್ಮನಿಗೂ ಬೆದರಿಕೆ

ದುಬೈನಲ್ಲಿರೋ ನಟಿಯ ತಾಯಿಗೂ ಕೂಡ ಕರೆ ಮಾಡಿ ನಿಮ್ಮ ಮಗಳು ಸರಿಯಾಗಿ 'ಕೋ-ಆಪರೇಟ್' ಮಾಡ್ಲಿಲ್ಲ ಅಂದ್ರೆ ನಮ್ಗೆ ಕೋಟಿ ಕೋಟಿ ನಷ್ಟ ಆಗುತ್ತೆ. ನಾನು ಅಗ್ರಿಮೆಂಟ್ ಇರೋದ್ರಿಂದ ಕಂಪ್ಲೇಂಟ್ ಕೊಡ್ತೀನಿ ಅಂತ ಬೆದರಿಕೆ ಹಾಕಿದ್ದಾರಂತೆ ನಿರ್ದೇಶಕರು.

ಟೀನೇಜ್ ಹುಡುಗಿ ಏಂಜೆಲಾ

ಇನ್ನೂ ಹೊಸ ಭವಿಷ್ಯದ ಕನಸು ಕಾಣ್ತಿರೋ ಟೀನೇಜ್ ಹುಡ್ಗಿ ಏಂಜೆಲಾ ಸಿನಿಮಾ ಅಂದ್ರೆ ಹೀಗೆಲ್ಲಾ ಮಾಡ್ಬೇಕಾ ಅಂತ ಬೆಚ್ಚಿಬಿದ್ದಿದ್ದಾರೆ. ಕನ್ನಡದಲ್ಲೇ ಮತ್ತೊಂದು ಸಿನಿಮಾಗೆ ಕೂಡ ಆಯ್ಕೆಯಾಗಿರೋ ನಟಿ ಈಗ ಅದ್ರಲ್ಲಿ ಅಭಿನಯಿಸ್ಬೇಕೋ ಬೇಡ್ವೋ ಅನ್ನೋ ಗೊಂದಲದಲ್ಲಿದ್ದಾರೆ.

ನಾಯಕನಾಗೋಕೆ ಹೊರಟಿದ್ದಾರೆ ಆಸ್ಕರ್

ಆಸ್ಕರ್ ಕೃಷ್ಣ ಸ್ಯಾಂಡಲ್ವುಡ್ನಲ್ಲಿ ನಾಯಕನಾಗೋಕು ಕನಸು ಕಾಣ್ತಿದ್ದಾರೆ. ಬಹುಷಃ ಮೋಹಿನಿ ಈಸ್ ಬ್ಯಾಕ್ ಸಿನಿಮಾದಲ್ಲೇ ನಾಯಕನಾಗ್ತಿರಬಹುದು. ಆದ್ರೆ ಈಗ ಕೇಳಿಬರ್ತಿರೋ ಈ ದೂರಿಗೆ ಆಸ್ಕರ್ ಕೃಷ್ಣ ಏನ್ ಹೇಳ್ತಾರೆ ಅಂತ ಗೊತ್ತಿಲ್ಲ..

English summary
Kannada movie Miss Mallige director Krishna Oscar is in the eye of another controversy. This time he wants, his new movie Mohini is back heroine Angela in bikini. Angela has denied to wear bikini. But, Krishna is threatening and insisting her to wear bikini.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada