»   » ಶ್ರೀಕೃಷ್ಣ ಲೀಲೆಗೆ ಪುರಂದರ ದಾಸರ 38 ಕೀರ್ತನೆಗಳು

ಶ್ರೀಕೃಷ್ಣ ಲೀಲೆಗೆ ಪುರಂದರ ದಾಸರ 38 ಕೀರ್ತನೆಗಳು

Posted By: Staff
Subscribe to Filmibeat Kannada

ದ್ವಾಪರ ಯುಗದಿ ಜನಿಸಿ, ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ಎಂದು ಶ್ರೀಕೃಷ್ಣನ ಜನನದಿಂದ ಹಿಡಿದು ಕಂಸವಧೆಯವರೆಗಿನ ಭಾಗವತದ ಕಥಾಭಾಗ, ಕನ್ನಡದಲ್ಲಿ ಶ್ರೀಕೃಷ್ಣ ಲೀಲೆ ಎಂಬ ಚಲನಚಿತ್ರವಾಗಿಯೂ, ಹಿಂದಿ, ತಮಿಳು ಮತ್ತು ಮಲಯಾಳಂನಲ್ಲಿ ಧಾರಾವಾಹಿಯಾಗಿಯೂ ಸಿದ್ಧವಾಗುತ್ತಿದೆ.

ಹಿಂದೂ ಧರ್ಮಕ್ಕೆ ಸಂಬಂಧಿಸಿದ ಪೌರಾಣಿಕ, ಚಾರಿತ್ರಿಕ ಚಿತ್ರಗಳನ್ನು ತಯಾರಿಸುವುದರಲ್ಲಿ ಸಿದ್ಧಹಸ್ತರೆನಿಸಿರುವ ಹಿರಿಯ ಚಲನಚಿತ್ರ ನಿರ್ದೇಶಕ ಜಿ.ವಿ. ಅಯ್ಯರ್‌ ಶ್ರೀಕೃಷ್ಣ ಲೀಲೆಯನ್ನು ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಮಾತಿನ ಧ್ವನಿ ಮುದ್ರಣ ಕಾರ್ಯ ಇತ್ತೀಚೆಗೆ ಅರುಣ್‌ ರೆಕಾರ್ಡಿಂಗ್‌ ಸ್ಟುಡಿಯೋದಲ್ಲಿ ಪೂರ್ಣಗೊಂಡಿದೆ. ಸೆ.2ರ ಸೋಮವಾರದಿಂದ ಅರವಿಂದ್‌ ಸ್ಟುಡಿಯೋದಲ್ಲಿ ಜಯಶ್ರೀ ಅರವಿಂದ್‌ ಅವರ ಸಂಗೀತ ಸಂಯೋಜನೆಯಲ್ಲಿ ರೀ ರಿಕಾರ್ಡಿಂಗ್‌ ಕಾರ್ಯ ಆರಂಭವಾಗಿದೆ.

ಚಿತ್ರಕ್ಕೆ ಪುರಂದರ ದಾಸರ ಮೂವತ್ತೆಂಟು ಕೀರ್ತನೆಗಳನ್ನು ಬಳಸಿಕೊಳ್ಳಲಾಗಿದೆ. ದಟ್‌ ಈಸ್‌ ದಿ ಸ್ಪೆಷಾಲಿಟಿ ಆಫ್‌ ದಿ ಗ್ರೇಟ್‌ ಜಿ.ವಿ. ಅಯ್ಯರ್‌. ಅಂದಹಾಗೆ ಈ ಗೀತೆಗಳಿಗೆ ಜಯಶ್ರೀ ಅರವಿಂದ್‌ ಸಂಗೀತ ನೀಡಿದ್ದು, ಖ್ಯಾತ ಗಾಯಕರಾದ ಏಸುದಾಸ್‌, ಅನುರಾಧ ಶ್ರೀರಾಮ್‌ ಮೊದಲಾದವರು ತಮ್ಮ ಕಂಠಸಿರಿಯನ್ನು ಸೇರಿಸಿದ್ದಾರೆ.

ಕುಮಾರಿ ನೀರಜಾ ಎಲ್ಲ ಭಾಷೆಯಲ್ಲೂ ಶ್ರೀಕೃಷ್ಣನ ಪಾತ್ರ ನಿರ್ವಹಿಸಿದ್ದರೆ, ಬೆಳದಿಂಗಳ ಬಾಲೆ ಸುಮನ್‌ ನಗರ್‌ಕರ್‌, ಸುರೇಖಾ ಕುಡಚಿ, ವಾಣಿಶ್ರೀ, ಮೇಘಾ, ಗಾಯತ್ರಿ, ಕಿಶೋರಿ ಬಲ್ಲಾಳ್‌ ಮೊದಲಾದವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ.

ಅಯ್ಯರ್‌ ಅವರ ಪುತ್ರ ರಾಘವೇಂದ್ರ ಕನ್ನಡ, ತಮಿಳು, ಮಲಯಾಳಂನಲ್ಲಿ ಕಂಸನಾಗಿ ಅಭಿನಯಿಸಿದ್ದರೆ, ಹಿಂದಿಯಲ್ಲಿ ನರೇಂದ್ರ ಝಾ ಆ ಹೊಣೆ ಹೊತ್ತಿದ್ದಾರೆ. ಬಿ.ಸಿ. ಗೌರಿಶಂಕರ್‌ ಛಾಯಾಗ್ರಹಣ, ಸೂರ್ಯಪ್ರಕಾಶ್‌ ಕಲಾ ನಿರ್ದೇಶನ, ಪದ್ಮಿನಿ ರಾಮಚಂದ್ರನ್‌ ನೃತ್ಯ ನಿರ್ದೇಶನ ಚಿತ್ರಕ್ಕಿದೆ.

English summary
G.V. Ayyars Srikrishna leela in re- recording room

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada