ತೆಲುಗಿಗೆ ಹಾರಿದ 'ಕೃಷ್ಣಂ ಪ್ರಯಣ ಸಖಿ' ನಟಿ ಶರಣ್ಯ ಶೆಟ್ಟಿ; ಕನ್ನಡದ ಮತ್ತೊಂದು ನಟಿ ಬಿಗ್ ಆಫರ್

By ಫಿಲ್ಮಿಬೀಟ್ ಡೆಸ್ಕ್

ಗೋಲ್ಡನ್ ಸ್ಟಾರ್ ಗಣೇಶ್ ನಟಿಸಿದ ಹಿಟ್ ಸಿನಿಮಾ 'ಕೃಷ್ಣಂ ಪ್ರಯಣ ಸಖಿ'. ಈ ಸಿನಿಮಾದಲ್ಲಿ ಗಣೇಶ್ ಜೊತೆ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದ ಶರಣ್ಯ ಶೆಟ್ಟಿ ಕೂಡ ಮಿಂಚಿದ್ದರು. ಗ್ಲಾಮರಸ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದ ನಟಿಗೆ ಸಿನಿಪ್ರಿಯರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದರು. ಈ ಸಿನಿಮಾ ಹಿಟ್ ಆದಲ್ಲಿಂದ ಕರಾವಳಿ ಬೆಡಗಿಗೆ ಆಫರ್‌ಗಳು ಸಿಗುತ್ತಿವೆ.

ಕನ್ನಡದಲ್ಲಿ ಶೈನ್ ಆಗುತ್ತಿದ್ದಂತೆ ಪರಭಾಷೆಯ ಫಿಲ್ಮ್ ಮೇಕರ್ಸ್‌ ಕನ್ನಡದ ನಟಿಯರ ಮೇಲೆ ಒಂದು ಕಣ್ಣು ಇಟ್ಟಿರುತ್ತಾರೆ. ಸಿನಿಮಾ ಹಿಟ್ ಆಗಿ ಶೈನ್ ಆದರೂ ಅಂದರೆ, ತಮ್ಮ ಚಿತ್ರರಂಗಕ್ಕೆ ಸೆಳೆದು ಬಿಡುತ್ತಾರೆ. ಶರಣ್ಯ ಶೆಟ್ಟಿ ವಿಚಾರದಲ್ಲೂ ಕೂಡ ಅದೇ ಆಗಿದೆ. 'ಕೃಷ್ಣಂ ಪ್ರಯಣ ಸಖಿ' ಹಿಟ್ ಲಿಸ್ಟ್ ಸೇರುತ್ತಿದ್ದಂತೆ ಅವರಿಗೆ ತೆಲುಗು ಚಿತ್ರರಂಗದಿಂದ ಆಫರ್ ಬಂದಿದೆ. ಅಲ್ಲಿಗೆ ಮತ್ತೊಬ್ಬ ಕನ್ನಡದ ನಟಿ ಟಾಲಿವುಡ್‌ ಕಡೆಗೆ ಪಯಣ ಬೆಳೆಸಿದಂತಾಗುತ್ತೆ.

Krishnam Pranaya Sakhi actress Sharanya Shetty making tollywood debut here is the details

ಶರಣ್ಯ ಶೆಟ್ಟಿ ಕನ್ನಡದ ಕಿರುತೆರೆಯಲ್ಲಿ ಮಿಂಚಿದ ಬಳಿಕ ಸಿನಿಮಾದಲ್ಲಿ ನಟಿಸುವುದಕ್ಕೆ ಶುರು ಮಾಡಿದ್ದರು. ಇನ್ನೇನು ಕನ್ನಡದಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಬಹುದು ಎಂದುಕೊಂಡಿದ್ದವರಿಗೆ ತೆಲುಗು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ದಾರೆ. ಅಷ್ಟಕ್ಕೂ ಆ ತೆಲುಗು ಸಿನಿಮಾ ಯಾವುದು? ಕನ್ನಡದಲ್ಲಿ ಆಫರ್‌ಗಳು ಬರುತ್ತಿಲ್ಲವೇ? ತಿಳಿಯಲು ಮುಂದೆ ಓದಿ.

ಶರಣ್ಯ ಶೆಟ್ಟಿ 2025 ಅನ್ನು ಪಾಸಿಟಿವ್ ಆಗಿ ಆರಂಭ ಮಾಡಿದ್ದಾರೆ. ಅವರ ವೃತ್ತಿ ಬದುಕಿಗೆ ಹೊಸ ತಿರುವು ಸಿಕ್ಕಿದೆ. ಕನ್ನಡದ ನಟಿಯರು ಪರಭಾಷೆಯ ಸಿನಿಮಾ ನಟಿಸುವುದಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿದ್ದರು. ಆದರೆ, ಶರಣ್ಯ ಶೆಟ್ಟಿಗೆ ಬಹುಬೇಗನೇ ತೆಲುಗು ಸಿನಿಮಾ ಮಂದಿ ಆಫರ್ ಕೊಟ್ಟಿದ್ದಾರೆ. ಈ ಬಗ್ಗೆ ಶರಣ್ಯ ಶೆಟ್ಟಿ ಮಾಧ್ಯಮಗಳೊಂದಿಗೆ ಸಂತಸವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ ಕನ್ನಡ ಸಾಕಷ್ಟು ನಟಿಯರು ತೆಲುಗು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಆ ಸಾಲಿಗೆ ಮತ್ತೊಬ್ಬ ನಟಿಯ ಸೇರ್ಪಡೆಯಾಗಿದೆ.

Krishnam Pranaya Sakhi actress Sharanya Shetty making tollywood debut here is the details

ಈಗಾಗಲೇ ಕನ್ನಡ ಚಿತ್ರರಂಗದಿಂದ ಟಾಲಿವುಡ್‌ಗೆ ಹಾರಿದ ಕನ್ನಡದ ನಟಿಯರ ದೊಡ್ಡ ಪಟ್ಟಿನೇ ಇದೆ. ಆ ಪಟ್ಟಿಯಲ್ಲೀಗ ಶರಣ್ಯ ಶೆಟ್ಟಿ ಕೂಡ ಸೇರಿಕೊಂಡಿದ್ದಾರೆ. ನಭಾ ನಟೇಶ್, ರಶ್ಮಿಕಾ ಮಂದಣ್ಣ, ಶ್ರೀಲೀಲಾ, ಆಶಿಕಾ ರಂಗನಾಥ್ ಸೇರಿದಂತೆ ಇನ್ನೂ ಹಲವು ನಟಿಯರು ಟಾಲಿವುಡ್‌ನಲ್ಲಿ ಮಿಂಚುತ್ತಿದ್ದಾರೆ. ಇವರ ಹಾದಿಯಲ್ಲಿ ಶರಣ್ಯ ಶೆಟ್ಟಿ ಕೂಡ ಸಾಗುತ್ತಿದ್ದಾರೆ. ಈಗಾಗಲೇ ತೆಲುಗು ಸಿನಿಮಾ ಲುಕ್ ಟೆಸ್ಟ್ ಎಲ್ಲ ನಡೆದಿದ್ದು, ಸಿನಿಮಾ ಯಾವುದು ಅಂತ ಘೋಷಣೆ ಆಗುವುದು ಮಾತ್ರ ಬಾಕಿ ಉಳಿದಿದೆ.

ಅಂದ್ಹಾಗೆ, ಟಾಲಿವುಡ್‌ಗೆ ಎಂಟ್ರಿ ಕೊಡುತ್ತಿರುವ ಮೊದಲ ಸಿನಿಮಾದಲ್ಲಿಯೇ ಶರಣ್ಯ ಶೆಟ್ಟಿ ಹಳ್ಳಿ ಹುಡುಗಿ ಪಾತ್ರದಲ್ಲಿ ನಟಿಸುತ್ತಿದ್ದಾರಂತೆ. ಇಲ್ಲಿವರೆಗೂ ಶರಣ್ಯ ಶೆಟ್ಟಿ ಇಂತಹ ಡಿ ಗ್ಲಾಮರ್ ರೋಲ್‌ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೇ ಮೊದಲ ಬಾರಿಗೆ ಪಕ್ಕಾ ಹಳ್ಳಿ ಹುಡುಗಿಯಾಗಿ ನಟಿಸುತ್ತಿದ್ದಾರೆ. ಹಾಗೇ ಮೊದಲ ತೆಲುಗು ಚಿತ್ರದಲ್ಲಿ ಇಬ್ಬರು ನಾಯಕರು ಇದ್ದಾರೆ ಎನ್ನಲಾಗಿದೆ. ಟಾಲಿವುಡ್‌ನಲ್ಲಿ ಶರಣ್ಯ ಜರ್ನಿ ಹೇಗೆ ಸಾಗುತ್ತೆ ಅನ್ನೋದು ಮುಂದಿನ ದಿನಗಳಲ್ಲಿ ಗೊತ್ತಾಗುತ್ತೆ.

ಹಾಗಂತ ಶರಣ್ಯ ಶೆಟ್ಟಿಗೆ ಕನ್ನಡದಲ್ಲಿ ಆಫರ್‌ಗಳು ಇಲ್ಲ ಅಂತಲ್ಲ. ಕನ್ನಡದಲ್ಲೂ ಸಾಕಷ್ಟು ಸಿನಿಮಾಗಳಿಗೆ ಆಫರ್ ಬಂದಿದೆಯಂತೆ. ಈಗಾಗಲೇ ಕೆಲವು ಓಕೆ ಮಾಡಿದ್ದಾರೆ. ಆ ಸಿನಿಮಾಗಳು ಸಂಕ್ರಾಂತಿ ಬಳಿಕ ಅನೌನ್ಸ್ ಆಗುವ ಸಾಧ್ಯತೆಯಿದೆ. ಸದ್ಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ಶರಣ್ಯ ಶೆಟ್ಟಿಯ ವೃತ್ತಿ ಬದುಕನ್ನು ಬದಲಾಯಿಸಿದೆ. 2025ರಲ್ಲಿ ಕನ್ನಡದ ಹುಡುಗಿಯ ಸಿನಿಮಾ ಪಯಣ ಹೇಗಿರುತ್ತೆ? ಅನ್ನೋದು ಅವರ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ.

More from Filmibeat

English summary
Krishnam Pranaya Sakhi actress Sharanya Shetty making tollywood debut here is the details;
Read more about: actress tollywood sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X