Krishnam Pranaya Sakhi Boxoffice; 'ಭೀಮ'ನ ಆರ್ಭಟದ ಮುಂದೆ 'ಕೃಷ್ಣ'ಲೀಲೆ ಹೇಗಿದೆ? 3 ದಿನಕ್ಕೆ ಗಳಿಸಿದ್ದೆಷ್ಟು?

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ರಾಜ್ಯಾದ್ಯಂತ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಇಂಡಿಪೆಂಡೆನ್ಸ್ ಡೇ ವೀಕೆಂಡ್ ಚಿತ್ರಕ್ಕೆ ವರವಾಗಿದೆ. ಪರಭಾಷೆಯ ದೊಡ್ಡ ಸಿನಿಮಾಗಳು ನಿರೀಕ್ಷೆ ಹುಸಿ ಮಾಡಿದ್ದರಿಂದ ಸ್ಯಾಂಡಲ್‌ವುಡ್ ಕೃಷ್ಣನ ಕಮಾಲ್ ಜೋರಾಗಿದೆ.

ಶ್ರೀನಿವಾಸ್ ರಾಜು ನಿರ್ದೇಶನದ ರೊಮ್ಯಾಂಟಿಕ್ ಕಾಮಿಡಿ ಎಂಟರ್‌ಟ್ರೈನರ್ 'ಕೃಷ್ಣಂ ಪ್ರಣಯ ಸಖಿ' ಗುರುವಾರ(ಆಗಸ್ಟ್ 15) ತೆರೆಗೆ ಬಂದಿತ್ತು. ಮಾಳವಿಕಾ ನಾಯರ್ ಹಾಗೂ ಶರಣ್ಯ ಶೆಟ್ಟಿ ಚಿತ್ರದಲ್ಲಿ ನಾಯಕಿಯರಾಗಿ ಮಿಂಚಿದ್ದಾರೆ. ಪ್ರಶಾಂತ್ ಜಿ. ರುದ್ರಪ್ಪ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಿಂಪಲ್ ಕಥೆಯನ್ನು ಬಹಳ ಲವಲವಿಕೆಯಿಂದ ಹೇಳಿ ಚಿತ್ರತಂಡ ಗೆದ್ದಿದೆ.

Krishnam Pranaya Sakhi collection day 3 Ganesh s film witnesses a good jump on Saturday

ಈ ಹಿಂದೆ 'ದಂಡುಪಾಳ್ಯ' ಸರಣಿ ಸಿನಿಮಾ ಮಾಡಿದ್ದ ಶ್ರೀನಿವಾಸ್ ರಾಜು ಈ ಬಾರಿ ರೊಮ್ಯಾಂಟಿಕ್ ಸಿನಿಮಾ ಮಾಡಿ ಗೆದ್ದಿದ್ದಾರೆ. 'ಕಾಟೇರ' ಬಳಿಕ ಫ್ಯಾಮಿಲಿ ಆಡಿಯನ್ಸ್ 'ಕೃಷ್ಣಂ ಪ್ರಣಯ ಸಖಿ' ಸಿನಿಮಾ ನೋಡಲು ಮುಗಿಬಿದ್ದಿದ್ದಾರೆ. ನಿಧಾನವಾಗಿ ಸಿನಿಮಾ ಪ್ರೇಕ್ಷಕರನ್ನು ಚಿತ್ರಮಂದಿರಗಳಿಗೆ ಸೆಳೆಯುತ್ತಿದ್ದು ಶುಕ್ರವಾರ, ಶನಿವಾರ ಹಲವು ಶೋಗಳು ಹೌಸ್‌ಫುಲ್ ಆಗಿದ್ದವು. ಸಣ್ಣಪುಟ್ಟ ತಪ್ಪುಗಳ ಹೊರತಾಗಿಯೂ ಸಿನಿಮಾ ಪ್ರೇಕ್ಷಕರನ್ನು ರಂಜಿಸುತ್ತಿದೆ.

ಬುಧವಾರವೇ ಸಿನಿಮಾ ಪೇಯ್ಡ್ ಪ್ರೀಮಿಯರ್ ಶೋಗಳು ಆರಂಭವಾಗಿದ್ದವು. ಆದರೆ ಸ್ಪೆಷಲ್ ಶೋಗಳಲ್ಲಿ ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಆದರೆ ಗುರುವಾರ ಸಿನಿಮಾ ನೋಡಿದ ಪ್ರೇಕ್ಷಕರು ಮೆಚ್ಚಿಕೊಂಡರು. ಮೊದಲ ದಿನ 1.30 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿ ಕೃಷ್ಣ ಕೋಟ್ಯಾಧಿಪತಿ ಆಗಿದ್ದ. ಆದರೆ ಶುಕ್ರವಾರ ಹಾಗೂ ಶನಿವಾರ ಸಿನಿಮಾ ಟೇಕಾಫ್ ಆಗಿತ್ತು. ನಿಧಾನವಾಗಿ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡಿತ್ತು.

ಲಾಂಗ್ ವೀಕೆಂಡ್‌ನಲ್ಲಿ ಸಿನಿಮಾ ಬಿಡುಗಡೆ ಮಾಡಿದರೆ ಪ್ಲಸ್ ಆಗುತ್ತದೆ ಎನ್ನುವ 'ಕೃಷ್ಣಂ ಪ್ರಣಯ ಸಖಿ' ವಿಚಾರದಲ್ಲಿ ನಿಜವಾಗಿದೆ. ಸಿನಿಮಾ ಮೊದಲ 3 ದಿನಕ್ಕೆ ಅಂದಾಜು 4.50 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ದುನಿಯಾ ವಿಜಯ್ ನಿರ್ದೇಶಿಸಿ ನಟಿಸಿರುವ 'ಭೀಮ' ಸಿನಿಮಾ ಎರಡನೇ ವಾರವೂ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಆ ಸಿನಿಮಾ ಎದುರು ಗಣೇಶ್ ಸಿನಿಮಾ ಉತ್ತಮ ಗಳಿಕೆ ಕಾಣುತ್ತಿದೆ.

'ಭೀಮ' ಸಿನಿಮಾ ಈಗಾಗಲೇ 19 ಕೋಟಿ ರೂ. ಗ್ರಾಸ್ ಕಲೆಕ್ಷನ್ ಮಾಡಿರುವ ಅಂದಾಜಿದೆ. ಇದೀಗ 'ಕೃಷ್ಣಂ ಪ್ರಣಯ ಸಖಿ' ದರ್ಬಾರ್ ಶುರುವಾಗಿದೆ. ಮುಂದಿನ ದಿನಗಳಲ್ಲಿ ಸಿನಿಮಾ ಕಲೆಕ್ಷನ್ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ. ಬುಕ್‌ಮೈ ಶೋನಲ್ಲಿ ಕೂಡ ಟಿಕೆಟ್ ಬುಕ್ಕಿಂಗ್ ಭರಾಟೆ ಜೋರಾಗಿದೆ. ಕಳೆದ 24 ಗಂಟೆಗಳಲ್ಲಿ 49 ಸಾವಿರಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ.

Krishnam Pranaya Sakhi collection day 3 Ganesh s film witnesses a good jump on Saturday

ಈಗಾಗಲೇ ಹಲವು ಸಿನಿಮಾಗಳಲ್ಲಿ ನೋಡಿರುವ ಕಥೆಯೇ 'ಕೃಷ್ಣಂ ಪ್ರಣಯ ಸಖಿ' ಚಿತ್ರದಲ್ಲೂ ಇದೆ. ಆದರೆ ಪ್ರೆಸೆಂಟೇಷನ್ ವಿಭಿನ್ನವಾಗಿದೆ. ಅಷ್ಟೇ ಹೊಸತಾಗಿದೆ. ಶ್ರೀಮಂತ ಮನೆತನ ಯುವಕ ಕೃಷ್ಣ. ಮೊದಲ ನೋಟದಲ್ಲೇ ನಾಯಕಿ ಪ್ರಣಯ ಪ್ರೀತಿಲಿ ಬೀಳುತ್ತಾನೆ. ಆಕೆಯ ಪ್ರೀತಿ ಗಳಿಸಲು ಹೊಸ ವೇಷ ಹಾಕುತ್ತಾನೆ. ಮುಂದೆ ಏನೆಲ್ಲಾ ಆಗುತ್ತದೆ ಎನ್ನುವುದು ಸಿನಿಮಾ ಕಥೆ.

ಗಣೇಶ್- ಮಾಳವಿಕಾ ನಾಯರ್ ಅಭಿನಯ ಚಿತ್ರದ ಪ್ಲಸ್ ಪಾಯಿಂಟ್. ಇನ್ನು ಗಣಿ-ಸಾಧು ಕಾಮಿಡಿ ಚಿತ್ರಕ್ಕೆ ಬಹಳ ಶಕ್ತಿ ತುಂಬಿದೆ. ತೆಲುಗು ಸಿನಿಮಾಗಳನ್ನು ನೆನಪಿಸುವ ಮೇಕಿಂಗ್, ಸನ್ನಿವೇಶಗಳನ್ನು 'ಕೃಷ್ಣಂ ಪ್ರಣಯ ಸಖಿ' ಚಿತ್ರದಲ್ಲಿ ನೋಡಬಹುದು. ಹಾಡುಗಳನ್ನು ಬಹಳ ಸೊಗಸಾಗಿ ಸೆರೆಹಿಡಿಯಲಾಗಿದೆ. ಆದರೆ ಅದೇ ಹಾಡುಗಳು ಆಗಾಗ್ಗೆ ಬಂದು ಕಿರಿಕಿರಿ ಉಂಟು ಮಾಡುತ್ತದೆ.

ಮೈಸೂರು, ಬೆಂಗಳೂರು, ಇಟಲಿ, ಮಾಲ್ಟಾ ಹಾಗೂ ವಿಯೇಟ್ನಾಂನಲ್ಲಿ ಬಹಳ ಸೊಗಸಾಗಿ ಸಿನಿಮಾ ಸೆರೆ ಹಿಡಿಯಲಾಗಿದೆ. ಫ್ಯಾಮಿಲಿ ಆಡಿಯನ್ಸ್‌ ಬಯಸುವ ಅಂಶಗಳು ಚಿತ್ರದಲ್ಲಿ ಹೇರಳವಾಗಿದೆ. ಅದೇ ಕಾರಣಕ್ಕೆ ನಿಧಾನವಾಗಿ ಫ್ಯಾಮಿಲಿ ಆಡಿಯನ್ಸ್‌ ಥಿಯೇಟರ್ ಕಡೆ ಮುಖ ಮಾಡುತ್ತಿದ್ದಾರೆ.

More from Filmibeat

English summary
Krishnam Pranaya Sakhi boxoffice day 3; Ganesh starrer performs decently with 4.50 crore earning;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X