»   » ಜೈಪುರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆರ್.ಚಂದ್ರು ಚಿತ್ರ

ಜೈಪುರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಆರ್.ಚಂದ್ರು ಚಿತ್ರ

Posted By:
Subscribe to Filmibeat Kannada

ಕನ್ನಡದಲ್ಲಿ ಆರ್.ಚಂದ್ರು ನಿರ್ದೇಶನದ 'ಚಾರ್ಮಿನಾರ್' ಸಿನಿಮಾ ಹಿಟ್ ಆಯ್ತು. ಅದೇ ಚಿತ್ರವನ್ನ ತೆಲುಗಿನಲ್ಲಿ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಆಗಿ ರೆಡಿ ಮಾಡಿದವರು ಒನ್ಸ್ ಅಗೇನ್ ನಿರ್ದೇಶಕ ಆರ್.ಚಂದ್ರು.

ಟಾಲಿವುಡ್ ನಲ್ಲಿ ಸುಧೀರ್ ಬಾಬು ಅಭಿನಯಿಸಿದ 'ಕೃಷ್ಣಮ್ಮ ಕಲಿಪಿಂದಿ ಇದ್ದರಿನಿ' ಚಿತ್ರಕ್ಕೆ ಉತ್ತಮ ರೆಸ್ಪಾನ್ಸ್ ಲಭಿಸ್ತು. ಇದೀಗ ಇದೇ ಚಿತ್ರ ಜೈಪುರದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಗೆ ಆಯ್ಕೆ ಆಗಿದೆ.

krishnamma-kalipindi-iddarini

ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ನಿರ್ದೇಶಕ ಆರ್.ಚಂದ್ರು ಹೇಳಿದಿಷ್ಟು - ''ತುಂಬಾ ಖುಷಿ ಆಗಿದೆ. ಚಾರ್ಮಿನಾರ್ ಚಿತ್ರಕ್ಕೆ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ತೆಲುಗಿನಲ್ಲಿ ಹಿಟ್ ಆಯ್ತು. ಈಗ ಜೈಪುರದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣಲಿದೆ. ಹೆಮ್ಮೆ ಆಗುತ್ತೆ'' [ಆರ್.ಚಂದ್ರು ಪ್ರೇಮಕಾವ್ಯಕ್ಕೆ 'ಪ್ರಿನ್ಸ್' ಮಹೇಶ್ ಫಿದಾ]

ಕನ್ನಡ ಮತ್ತು ತೆಲುಗಿನಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಆರ್.ಚಂದ್ರು ಸದ್ಯ 'ಲಕ್ಷ್ಮಣ' ಚಿತ್ರದ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ತೆಲುಗಿನಲ್ಲಿ ಮತ್ತಷ್ಟು ಚಿತ್ರಗಳನ್ನ ನಿರ್ದೇಶನ ಮಾಡುವ ಪ್ಲಾನ್ ಕೂಡ ಮಾಡಿದ್ದಾರೆ.

English summary
R.Chandru directorial Telugu Movie Krishnamma Kalipindi Iddarini is selected for Jaipur International Film Festival.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada