twitter
    For Quick Alerts
    ALLOW NOTIFICATIONS  
    For Daily Alerts

    ‘ಕರುಣಾ-ಕೃಷ್ಣ’ ನಾಟಕ

    By Super
    |

    ಚೆನ್ನೈ: ರಾಜ್‌ ಅಪಹರಣ ಪ್ರಕರಣಕ್ಕೆ ಮತ್ತೆ ಜೀವ ಬಂದಿದೆ. ಅಪಹರಣ ಪ್ರಕರಣವೆನ್ನುವುದೇ ಒಂದು ನಾಟಕ, ಗೋಪಾಲ ಸಂಧಾನವೆನ್ನುವುದು ನಾಟಕದೊಳಗಿನ ಇನ್ನೊಂದು ನಾಟಕ ಎನ್ನುವ ಜನ ಮಾನಸದೊಳಗಿನ ಪ್ರಶ್ನೆಗಳಿಗೆ ಇನ್ನಷ್ಟು ಪುಷ್ಟಿ ದೊರೆಯುತ್ತಿದೆ. ಇಂಥ ಪ್ರಶ್ನೆಗಳನ್ನು ಜನ ಸಾಮಾನ್ಯರ ಬದಲಿಗೆ ದೊಡ್ಡವರೇ ಕೇಳುತ್ತಿರುವುದು ವಿಶೇಷ. ಇವತ್ತು ತಮಿಳುನಾಡಿನಲ್ಲಿ ಏನು ನಡೆಯುತ್ತಿದೆ ಗೊತ್ತೇ?

    'ಸಂಧಾನದಲ್ಲಿ ಮೆರೆದ ಕರುಣಾನಿಧಿ ಮತ್ತು ಕೃಷ್ಣ ಸ್ವಾರ್ಥ"

    ಅಪಹರಣ ಪ್ರಕರಣ ವನ್ನು ಅಂದಿನ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಎಸ್‌. ಎಂ. ಕೃಷ್ಣ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡಿದ್ದಾರೆ ಎನ್ನುವ ಇಂಗಿತವನ್ನು ಜಯಲಲಿತಾ ಕೃಪಾ ಪೋಷಿತ ತಮಿಳುನಾಡು ಮುಖ್ಯಮಂತ್ರಿ ಪನ್ನೀರ್‌ ಸೆಲ್ವಂ ವ್ಯಕ್ತಪಡಿಸಿದ್ದಾರೆ.

    ಸೋಮವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಪನ್ನೀರ್‌ ಸೆಲ್ವಂ- ರಾಜ್‌ ಬಿಡುಗಡೆಯ ಸಂಧಾನ ಪ್ರಕರಣದಲ್ಲಿ ಉಭಯ ಸರ್ಕಾರಗಳ ಮುಖ್ಯಸ್ಥರು ಸಂಧಾನದ ನಾಟಕವಾಡಿದರು ಎಂದು ಆಪಾದಿಸಿದರು. ಸೆಲ್ವಂ ನಾಯಕಿ ಜಯಲಲಿತಾ ಅವರು ಕೂಡ ಇಂಥದೇ ಆರೋಪಗಳನ್ನು ಮುಂಚಿನಿಂದಲೂ ಕರುಣಾನಿಧಿ ವಿರುದ್ಧ ಹೊರಿಸುತ್ತಿದ್ದರು. ಏಕೆಂದರೆ, ಈ ಬಾರಿ ಸಂಧಾನವನ್ನು ನಾಟಕ ಎಂದು ಹಳಿಯುವವರ ಸಾಲಿಗೆ ಹೊಸ ಸೇರ್ಪಡೆಯಾಗಿದೆ. ಆತನ ಹೆಸರು ಮಣಿ, ನೇಟ್ರಿಕನ್‌ ಪತ್ರಿಕೆಯ ಸಂಪಾದಕರಾದ್ದರಿಂದ ನೇಟ್ರಿಕನ್‌ ಮಣಿ ಎಂದೇ ಅವರು ಪ್ರಸಿದ್ಧರು.

    ರಪ್ಪನ್‌ನೊಂದಿಗೆ ಸಂಧಾನ ನಡೆಸಲು, ನಕ್ಕೀರನ್‌ ಪತ್ರಿಕೆಯ ಸಂಪಾದಕ ಗೋಪಾಲ್‌ ಅವರು ನಡೆಸಿದ ಹತ್ತಾರು ದಂಡಯಾತ್ರೆಗಳು ಬರೀ ನಾಟಕ ಎಂದು ಮುಖ್ಯಮಂತ್ರಿ ಕುರ್ಚಿಯಿಂದ ಸೆಲ್ವಂ ಅವರು ಕೊಟ್ಟಿರುವ ಹೇಳಿಕೆಗೆ ಸಾಕ್ಷ್ಯವನ್ನೇ ತರುತ್ತೇನೆ ಎಂದು ಮಣಿ ಶರಟಿನ ತೋಳು ಮಡಚಿದ್ದಾರೆ. ಮಣಿ ಇಷ್ಟು ದಿನ ಯಾಕೆ ಸುಮ್ಮನಿದ್ದರೋ ತಿಳಿಯದು.

    ವರನಟ ರಾಜ್‌ಕುಮಾರ್‌ ಅವರ ಅಪಹರಣವಾದ ತಕ್ಷಣ ಸಹಜವಾಗಿಯೇ ತಮಿಳುನಾಡಿಗಿಂತ ಹೆಚ್ಚು ತಬ್ಬಿಬ್ಬಾಗಿದ್ದು ಕರ್ನಾಟಕ. ರಾಜ್‌ಕುಮಾರ್‌ಗೆ ಇರುವ ಅಭಿಮಾನಿಗಳ ಸಾಗರದ ಆತಂಕ, ಆಗ್ರಹಗಳನ್ನು ನಿಯಂತ್ರಿಸುವುದೇ ಕರ್ನಾಟಕ ಸರಕಾರಕ್ಕೆ ಪ್ರಯಾಸವಾಗಿತ್ತು.

    ಅಣ್ಣಾವ್ರ ಬಿಡುಗಡೆಯಾಗಬೇಕು ಎಂದು ಮುಷ್ಕರ ಕೂರುವವರು, ಸರಕಾರದ ವಿರುದ್ಧ ಪ್ರತಿಭಟನೆ ಮಾಡುವವರು ಮತ್ತೆಲ್ಲಕ್ಕಿಂತ ಹೆಚ್ಚಾಗಿ ನಾವೇ ಕಾಡಿಗೆ ಹೋಗುತ್ತೇವೆ ಎಂದು ಹೊರಟವರ ಕ್ಷೇಮ ನೋಡಿಕೊಳ್ಳುವುದೂ ಸಣ್ಣ ಜವಾಬ್ದಾರಿಯೇನಲ್ಲ. ಅಂತಹ ಸಂದರ್ಭದಲ್ಲಿ ಸರಕಾರವೇ ಸಂಧಾನದ ನಾಟಕವಾಡಿದೆ ಎಂದರೆ, ಅದರ ಹಿಂದಿರುವ ರಾಜಕೀಯದ ಕೊಂಕಣ ಮೈಲಾರ ಸಂಬಂಧಗಳು, ಕಾರಣಗಳು ಬೇಗನೇ ಹೊಳೆಯುವುದಿಲ್ಲ. ಹಾಗೇನಾದರೂ ಇದ್ದಲ್ಲಿ ಅದು ಭಾರೀ ಘಟ ಸರ್ಪವೇ ಇರಬೇಕು. ಕರುಣಾನಿಧಿ ಮತ್ತು ಎಸ್‌. ಎಂ. ಕೃಷ್ಣರು ಜಂಟಿಯಾಗಿ ನಡೆಸುವ ನಾಟಕದ ಲಾಭವೂ ಹಂಚಿಹೋಗುವಂತಹುದಾಗಿರಬೇಕು.

    ನೇಟ್ರಿಕನ್‌ ಸಂಪಾದಕರ ಪ್ರಕಾರ-

    ಕರುಣಾನಿಧಿ ಮತ್ತು ಎಸ್‌. ಎಂ. ಕೃಷ್ಣ ಇಬ್ಬರೂ ಸೇರಿ ರಾಜ್‌ಕುಮಾರ್‌ ಬಿಡುಗಡೆಗಾಗಿ ಈ ಸಂಧಾನದ ನಾಟಕವಾಡಿದ್ದಾರೆ. ಇದು ಬರೀ ಬೊಗಳೆ ಮಾತಲ್ಲ. ಈ ಪ್ರಕರಣವನ್ನು ಸಮಗ್ರವಾಗಿ ಬಯಲುಪಡಿಸಲು ಅವರು ತಯಾರಿದ್ದಾರೆ. ವೀರಪ್ಪನ್‌ ಇರುವ ಕಾಡಿಗೆ ತೆರಳಿ, ಈ ವಿಷಯವನ್ನು ನರಹಂತಕನ ಬಾಯಿಯಿಂದಲೇ ಹೇಳಿಸಿ, ಸಾಕ್ಷ್ಯವನ್ನು ಚಿತ್ರೀಕರಿಸಿಕೊಂಡು ಬಂದು ಜನರ ಮುಂದಿಟ್ಟು ಸಾಬೀತು ಪಡಿಸುವುದಕ್ಕೆ ನಾನು ಸಿದ್ಧ ಎಂದು ಮಣಿ ಘೋಷಿಸಿದ್ದಾರೆ.

    ಕೊನೆಯದಾಗಿ ಉಳಿಯುವ ಪ್ರಶ್ನೆಗಳು-

    1. ಮಣಿ ಮತ್ತೆ ಕಾಡಿಗೆ ಹೋಗುತ್ತಾರಾ? ಕರುಣಾನಿಧಿ- ಕೃಷ್ಣರಿಗೆ ವಿರುದ್ಧವಾಗಿ ವೀರಪ್ಪನ್‌ನಿಂದ ಕೆಸೆಟ್‌ ತರುತ್ತಾರಾ?
    2. ಮಣಿ ಕೆಸೆಟ್‌ ತಂದರೆ, ಅದಕ್ಕೆ ಪ್ರತಿಯಾಗಿ ನಕ್ಕೀರನ್‌ ಗೋಪಾಲ್‌ ಮತ್ತೆ ಕಾಡಿಗೆ ಹೋಗುತ್ತಾರಾ? ಹೋದರೆ ಅವರಿಗೆ ವೀರಪ್ಪನ್‌ ಸಿಗುತ್ತಾನಾ?
    3. ಮಣಿ ಇಷ್ಟೆಲ್ಲ ಆಪಾದನೆ ಮಾಡುತ್ತಿದ್ದರೆ ನಕ್ಕೀರನ್‌ ಸುಮ್ಮನಿರುವುದು ಏಕೆ?
    4. ರಾಜ್‌ ಅಪಹರಣದ ಬಗೆಗಿನ ಪುಸ್ತಕ ಬರೆಯುವುದಾಗಿ ಹೇಳಿದ್ದ ರಾಜ್ಯದ ಮಾಜಿ ಮಹಾ ನಿರ್ದೇಶಕ ಸಿ. ದಿನಕರ್‌ ಒಮ್ಮೆಗೇ ಮೌನ ಧರಿಸಿರುವುದೇಕೆ? ಅವರ ಪುಸ್ತಕ ಬಿಡುಗಡೆಯಾಗುತ್ತದಾ? ಇಲ್ಲವಾ?

    ವಾರ್ತಾ ಸಂಚಯ

    English summary
    S.M. Krishna and Karunanidhi arranged a negotiation drama with veerappan, during raj abduction time says netrikan editor Mani
    Sunday, July 14, 2013, 13:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X