'ಗೂಗ್ಲಿ ಹಾಗೆ ಮತ್ತೊಂದು ಸಿನಿಮಾ ಮಾಡಿ': ನಿರ್ದೇಶಕರ ಬಳಿ ಬೇಡಿಕೆ ಇಟ್ಟ ನಟಿ ಕೃತಿ
ಬಹುಭಾಷೆ ನಟಿ ಕೃತಿ ಕರಬಂಧ 'ಗೂಗ್ಲಿ' ಸಿನಿಮಾ ಮೂಲಕ ಕನ್ನಡ ಸಿನಿಪ್ರಿಯರ ನಿದ್ದಿಗೆಡಿಸಿದ ಸುಂದರಿ. ರಾಕಿಂಗ್ ಸ್ಟಾರ್ ಯಶ್ ಗೆ ನಾಯಕಿಯಾಗಿ ಮಿಂಚಿದ್ದ ಕೃತಿ ಅಭಿನಯಕ್ಕೆ ಕನ್ನಡಿಗರು ಫಿದಾ ಆಗಿದ್ದರು. ಅನೇಕ ಭಾಷೆಯಲ್ಲಿ ಮಿಂಚಿರುವ ಕೃತಿಗೆ ಕನ್ನಡದಲ್ಲಿ ಅಪಾರ ಸಂಖ್ಯೆಯ ಅಭಿಮಾನಿ ಬಳಗವಿದೆ.
ಸದ್ಯ ಹಿಂದಿ ಚಿತ್ರರಂಗದಲ್ಲಿ ಬ್ಯುಸಿ ಇರುವ ಕೃತಿಗೆ ಬಾಲಿವುಡ್ ನಲ್ಲಿ ಬಹು ಬೇಡಿಕೆಯ ನಟಿಯಾಗಿದ್ದಾರೆ. ಬಿ ಟೌನ್ ನಲ್ಲಿ ಬ್ಯುಸಿ ಇದ್ದರು ಕೃತಿ ಮತ್ತೆ ಕನ್ನಡದಲ್ಲಿ ಅಭಿನಯಿಸುವ ಆಸೆ ವ್ಯಕ್ತಪಡಿಸಿದ್ದಾರೆ. ಅದರಲ್ಲು ಗೂಗ್ಲಿ ರೀತಿಯ ಸಿನಿಮಾ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ನಿರ್ದೇಶಕ ಪವನ್ ಒಡೆಯರ್ ಬಳಿ ಬೇಡಿಕೆ ಇಟ್ಟಿದ್ದಾರೆ. ಮುಂದೆ ಓದಿ..

ಗೂಗ್ಲಿ ಸಿನಿಮಾ ಮೇಕಿಂಗ್ ಶೇರ್ ಮಾಡಿರುವ ಪವನ್
ನಿರ್ದೇಶಕ ಪವನ್ ಪಡೆಯರ್ ಸಿನಿಮಾ ಬದುಕಿಗೆ ಬ್ರೇಕ್ ನೀಡಿದ ಸಿನಿಮಾ ಗೂಗ್ಲಿ. ರಾಕಿಂಗ್ ಸ್ಟಾರ್ ಮತ್ತು ಪವನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ಗೂಗ್ಲಿ ಸೂಪರ್ ಹಿಟ್ ಆಗಿತ್ತು. 2013ರಲ್ಲಿ ತೆರೆಗೆ ಬಂದಿದ್ದ ಗೂಗ್ಲಿ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಈಗ ಪವನ್ ಒಡೆಯರ್ ಶೇರ್ ಮಾಡಿದ್ದಾರೆ.
'ಓ ಮೈ ಗಾಡ್' ಈ ವಿಡಿಯೋ ಸಿಕ್ಕಿದೆ
ಗೂಗ್ಲಿ ಸಿನಿಮಾದ ಮೇಕಿಂಗ್ ವಿಡಿಯೋವನ್ನು ಎಲ್ಲಿಯೂ ಶೇರ್ ಮಾಡಿರಲ್ಲಿಲ. ಆದರೀಗ ವಿಡಿಯೋ ಸಿಕ್ಕ ಸಂತಸವನ್ನು ಹಂಚಿಕೊಂಡಿದ್ದಾರೆ. ಓ ಮೈ ಗಾಡ್. ವಿಡಿಯೋ ಸಿಕ್ಕಿದೆ. ಗೂಗ್ಲಿ ಸಿನಿನಮಾದ ಹಾಡಿನ ಮೇಕಿಂಗ್. ಈ ಮೊದಲು ಈ ವಿಡಿಯೋವನ್ನು ಎಲ್ಲಿಯೂ ಶೇರ್ ಮಾಡಿಲ್ಲ. ಅದ್ಭುತವಾದ ನೆನಪು" ಎಂದು ಬರೆದುಕೊಂಡು ನಟ ಯಶ್ ಮತ್ತು ನಟಿ ಕೃತಿ ಕರಬಂಧ ಅವರಿಗೆ ಟ್ಯಾಗ್ ಮಾಡಿದ್ದಾರೆ.
ಕೃತಿ ಕರಬಂಧ ಪ್ರತಿಕ್ರಿಯೆ
ಪವನ್ ಒಡೆಯರ್ ಈ ವಿಡಿಯೋ ಹಂಚಿಕೊಳ್ಳುತ್ತಿದ್ದಂತೆ ನಟಿ ಕೃತಿ ಕರಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಮತ್ತೆ ನನ್ನನ್ನು ವಾಪಸ್ ಕರೆಸಿಕೊಳ್ಳಿ. ಈ ರೀತಿಯ ಸಿನಿಮಾವನ್ನು ಮತ್ತೆ ಮಾಡೋಣ" ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಲವ್ ಸಿಂಬಲ್ ಇಮೋಜಿಯನ್ನು ಹಾಕಿದ್ದಾರೆ.

ಅಭಿಮಾನಿಗಳ ಮನವಿ
ಪವನ್ ಒಡೆಯರ್ ವಿಡಿಯೋ ಪೋಸ್ಟ್ ಮಾಡುತ್ತಿದ್ದಂತೆ ಅಭಿಮಾನಿಗಳು ಮತ್ತೆ ಈ ರೀತಿಯ ಸಿನಿಮಾ ಮಾಡುವಂತೆ ಮನವಿ ಮಾಡಿಕೊಳ್ಳುತ್ತಿದ್ದಾರೆ. ಶರತ್ ಮತ್ತು ಸ್ವಾತಿ ಪಾತ್ರವನ್ನು ಮತ್ತೆ ತೆರೆ ಮೇಲೆ ನೋಡಬೇಕೆನ್ನುವ ಆಸೆಯನ್ನು ವ್ಯಕ್ತಪಡಿಸುತ್ತಿದ್ದಾರೆ. ಯಶ್ ಮತ್ತು ಕೃತಿ ರೀತಿಯ ಜೋಡಿ ಇರಲು ಸಾಧ್ಯವಿಲ್ಲ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಅಭಿಮಾನಿಗಳ ಒತ್ತಾಯದ ಮೇರಿಗೆ, ಗೂಗ್ಲಿ ಸುಂದರಿಯ ಆಸೆಯಂತೆ ಮತ್ತೆ ಶರತ್ ಮತ್ತು ಸ್ವಾತಿ ತೆರೆ ಮೇಲೆ ಬರುತ್ತಾರಾ ಕಾದು ನೋಡಬೇಕು.


Click it and Unblock the Notifications