For Quick Alerts
  ALLOW NOTIFICATIONS  
  For Daily Alerts

  48 ಗಂಟೆಗಳು ನನ್ನ ಕುಟುಂಬಕ್ಕೆ ತೀರಾ ಸಂಕಷ್ಟದ ಸಮಯವಾಗಿತ್ತು; ಕೊರೊನಾ ತೀವ್ರತೆ ವಿವರಿಸಿದ ಕೃತಿ

  |

  ಕೊರೊನಾ ಮಹಾಮಾರಿಯಿಂದ ಇಡೀ ದೇಶ ತತ್ತರಿಸಿ ಹೋಗಿದೆ. ದಿನಕ್ಕೆ ಸಾವಿರಾರು ಮಂದಿಯನ್ನು ಬಲಿ ಪಡೆಯುತ್ತಿರುವ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಸೋಂಕಿತರು ಆಸ್ಪತ್ರೆ, ಬೆಡ್, ಆಕ್ಸಿಜನ್ ಇಲ್ಲದೆ ಪರದಾಡುತ್ತಿದ್ದಾರೆ. ಕೊರೊನಾಗೆ ಅನೇಕ ಸಿನಿಮಾ ಮಂದಿ ಬಲಿಯಾಗಿದ್ದಾರೆ.

  ಕೋವಿಡ್ ಸೋಂಕಿನ ತೀವ್ರತೆ ಬಗ್ಗೆ ಗೂಗ್ಲಿ ಸುಂದರಿ ಕೃತಿ ಕರಬಂದ ಸಾಮಾಜಿಕ ಜಾಲತಾಣದಲ್ಲಿ ವಿವರಿಸಿದ್ದಾರೆ. 48 ಗಂಟೆಗಳು ತನ್ನ ಕುಟುಂಬಕ್ಕೆ ತೀರಾ ಸಂಕಷ್ಟದ ಸಮಯವಾಗಿತ್ತು ಎಂದು ಹೇಳಿದ್ದಾರೆ. ಕಷ್ಟದ ಸಮಯ ಎದುರಿಸಿದ ಕೃತಿ ದಯವಿಟ್ಟು ಎಲ್ಲರೂ ಮನೆಯಲ್ಲೇ ಇರಿ ಎಂದು ಮನವಿ ಮಾಡಿದ್ದಾರೆ.

  ಕೊರೊನಾ ಸಂಕಷ್ಟಕ್ಕೆ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ನೆರವಿನ ಹಸ್ತ

  'ಕಳೆದ 48 ಗಂಟೆಗಳು ನನಗೂ ನನ್ನ ಕುಟುಂಬಕ್ಕೂ ತೀರಾ ಸಂಕಟದ ಸಮಯವಾಗಿತ್ತು. ಅದು ಮನೆಗೆ ಬರುವವರೆಗೂ ಎಷ್ಟು ಭಯಾನಕ ಎನ್ನುವುದು ಗೊತ್ತಾಗಲ್ಲ. ದಯವಿಟ್ಟು ಮನೆಯಲ್ಲೇ ಇರಿ. ಮನೆಯಿಂದ ಹೊರಹೋಗಲು ನಿರ್ಧರಿಸಿದರೆ ಒಂದು ಹೆಜ್ಜೆ ಹಿಂದಕ್ಕೆ ಇಡಿ. ನಿಮ್ಮ ಪ್ರಾಣವನ್ನು ಪಣಕ್ಕಿಡುವುದು ಸರಿಯೇ ಎಂದು ಯೋಚಿಸಿ' ಎಂದು ಹೇಳಿದ್ದಾರೆ.

  ಕೊರೊನಾ ಸಂಕಷ್ಟದಲ್ಲಿ ಅನುಭವಿಸಿದ ಕಷ್ಟವನ್ನು ವಿವರಿಸುವ ಮೂಲಕ ಎಲ್ಲರೂ ಸುರಕ್ಷಿತವಾಗಿ ಇರುವಂತೆ ಹೇಳಿದ್ದಾರೆ. ಕೃತಿ ಕರಬಂದ ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ಕನ್ನಡದ ಗೂಗ್ಲಿ ಸಿನಿಮಾ ಮೂಲಕ ಪ್ರಖ್ಯಾತಿಗಳಿಸಿದ ಕೃತಿ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  ಗಲಾಟೆ, ಸೂಪರ್ ರಂಗ, ಬೆಳ್ಳಿ, ದಳಪತಿ ಸೇರಿದಂತೆ ಕೆಲವು ಕನ್ನಡದ ಸಿನಿಮಾಗಳಲ್ಲಿ ಕೃತಿ ಮಿಂಚಿದ್ದಾರೆ. ಸದ್ಯ ಹಿಂದಿಯಲ್ಲಿ ಬ್ಯುಸಿಯಾಗಿರುವ ಕೃತಿ ಮುಂಬೈನಲ್ಲೇ ನೆಲೆಸಿದ್ದಾರೆ.

  Tweet ಗೆ ಲೈಕ್ ಮಾಡಿ ಸೋನು‌ ಸೂದ್ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾದ Kangana | Filmibeat Kannada

  ಸಾಕಷ್ಟು ಮಂದಿ ಸೆಲೆಬ್ರಿಟಿಗಳು ಕೊರೊನಾ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಇನ್ನು ಕೆಲವರು ಈ ಸಂಕಷ್ಟದ ಸಮಯದಲ್ಲಿ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ. ಅಗತ್ಯ ಇರುವವರಿಗೆ ಆಕ್ಸಿಜನ್, ಆಸ್ಪತ್ರೆ ವ್ಯವಸ್ಥೆ ಮಾಡಿಸಿಕೊಡುತ್ತಿದ್ದಾರೆ.

  English summary
  Actress Kriti Kharbanda says last 48 hours have been beyond painful for my family and myself.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X