ಮದುವೆ ಬಗ್ಗೆ ಮಾತನಾಡಿದ 'ಗೂಗ್ಲಿ' ಬೆಡಗಿ ಕೃತಿ ಖರಬಂದ

By Naveen

Recommended Video

ಮದುವೆ ಬಗ್ಗೆ ಮಾತನಾಡಿದ ಕೃತಿ ಖರಬಂದ | Oneindia Kannada

ನಟಿ ಕೃತಿ ಖರಬಂದ ಕನ್ನಡದಿಂದ ಬಾಲಿವುಡ್ ಚಿತ್ರರಂಗ ಪ್ರವೇಶ ಮಾಡಿದರು. ಬಾಲಿವುಡ್ ನಲ್ಲಿ ಈಗಾಗಲೇ ಮೂರು ಸಿನಿಮಾ ಮಾಡಿರುವ ಕೃತಿ ಅವರ ನಾಲ್ಕನೇ ಸಿನಿಮಾ ಇಂದು ಬಿಡುಗಡೆಯಾಗಿದೆ. ಕೃತಿ ಖರಬಂದ ಅಭಿನಯದ 'ವೀರ್ ಕಿ ವೆಡ್ಡಿಂಗ್' ಸಿನಿಮಾ ಇಂದು ದೇಶಾದ್ಯಂತ ತರೆಗೆ ಬಂದಿದೆ.

ಅಂದಹಾಗೆ, ಈ ಸಿನಿಮಾದ ಪ್ರಚಾರ ಕಾರ್ಯಕ್ರಮಕ್ಕೆ ಕೃತಿ ಖರಬಂದ ಕೆಲ ದಿನಗಳ ಹಿಂದೆ ಬೆಂಗಳೂರಿಗೆ ಬಂದಿದ್ದರು. ಈ ವೇಳೆ ತಮ್ಮ ಮದುವೆ ಬಗ್ಗೆ ಕೂಡ ಕೃತಿ ಮಾತನಾಡಿದ್ದಾರೆ. ನಿಮ್ಮ ಮದುವೆ ಯಾವಾಗ ಎಂಬ ವಾಹಿನಿಯ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು ''ರಿಯಲ್ ಲೈಫ್ ನಲ್ಲಿ ಸದ್ಯಕ್ಕೆ ನಾನು ಮದುವೆ ಆಗ್ತಿಲ್ಲ. ಅದಕ್ಕೆ ಈ ಸಿನಿಮಾದಲ್ಲಿ ಮದುವೆ ಆಗ್ತಿದ್ದೀನಿ. ಈಗ ಸಿನಿಮಾಗಳ ಕೆಲಸ ತುಂಬ ಇದೆ. ನಾನು ಮದುವೆಯ ಬಗ್ಗೆ ಯೋಚನೆ ಮಾಡಿಲ್ಲ. ಎರಡು ವರ್ಷ ಆದ ಮೇಲೆ ಹುಡುಗ ನೋಡಿ ಮದುವೆ ಆಗ್ತೀನಿ. ಸದ್ಯಕ್ಕೆ ಏನು ಗೊತ್ತಿಲ್ಲ.'' ಎಂದು ಕೃತಿ ಹೇಳಿದ್ದಾರೆ.

Kriti Kharbanda spoke about her marriage

ಕನ್ನಡದಲ್ಲಿ ಚಿರು, ಗೂಗ್ಲಿ, ಸೂಪರ್ ರಂಗ, ಬೆಳ್ಳಿ ಸೇರಿದಂತೆ ಸಾಕಷ್ಟು ಸಿನಿಮಾ ಮಾಡಿದ್ದ ಕೃತಿ ತೆಲುಗು ಮತ್ತು ತಮಿಳು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ಸೌತ್ ಇಂಡಿಯಾದಲ್ಲಿ ಹೆಸರು ಮಾಡಿದ ನಂತರ ಬಾಲಿವುಡ್ ಸಿನಿಮಾಗಳನ್ನು ಮಾಡಿದರು. ''ಈಗ ನಾನು ಹಿಂದಿ ಸಿನಿಮಾ ಮಾಡಿರಬಹುದು ಆದರೆ ನನ್ನನ್ನು ಮೊದಲು ನಟಿ ಮಾಡಿದ್ದು ಕನ್ನಡ ಜನರು'' ಎಂದು ಕನ್ನಡದ ಅಭಿಮಾನಿಗಳಿಗೆ ಕೃತಿ ಧನ್ಯವಾದ ಹೇಳಿದ್ದಾರೆ.

More from Filmibeat

English summary
Actress Kriti Kharbanda spoke about her marriage.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X