ಡಿಸೆಂಬರ್ 25ರಿಂದ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿ ಶುರು

ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿ ಡಿಸೆಂಬರ್ 25 ರಿಂದ ಆರಂಭವಾಗಲಿದೆ. ಮೂರು ದಿನ ನಡೆಯುವ ಟೆನ್ನಿಸ್ ಬಾಲ್ ಟೂರ್ನಮೆಂಟ್ ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜನೆ ಮಾಡಲಾಗಿದೆ.

ಇದು ಕಿಚ್ಚ ಸುದೀಪ್ ರವರ ಅಭಿಮಾನಿಗಳು ಮಾತ್ರ ಭಾಗವಹಿಸುವ ಟೂರ್ನಿಯಾಗಿದ್ದು, ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ಟೀಮ್ ಈ ಟೂರ್ನಿಯಲ್ಲಿ ಭಾಗವಹಿಸುತ್ತದೆ. ಆಕರ್ಷಕ ಟ್ರೋಫಿಗಳು, ನಗದು ಬಹುಮಾನ ಮತ್ತು ಉತ್ತೇಜನ ಬಹುಮಾನಗಳು ಕೂಡ ಇಲ್ಲಿರುತ್ತದೆ.

ಈ ಬಾರಿಯ ವಿಶೇಷ ಏನೆಂದರೆ ಈ ಸಲದ ಟೂರ್ನಮೆಂಟ್ ಉದ್ಘಾಟನೆ ಮಹಿಳಾ ಅಭಿಮಾನಿಗಳ ಎರಡು ತಂಡದೊಂದಿಗೆ ಪ್ರಾರಂಭ ಪಡೆಯಲಿದೆ. ಅಂತ್ಯದಲ್ಲಿ ಆಯೋಜಕರು ಮತ್ತು ಸಿನಿಮಾ ಪತ್ರಕರ್ತರ ನಡುವೆ ಕೂಡ ಒಂದು ಜಿದ್ದಾ ಜಿದ್ದಿನ ಪಂದ್ಯ ನಡೆಯಲಿದೆ.

KSPL2 is all set to commence from December 25

ಅಪಘಾತದಲ್ಲಿ ಮೃತಪಟ್ಟ ಕಿಚ್ಚ ಸುದೀಪ ಅವರ ಅಭಿಮಾನಿ ನಂದೀಶ್ ಅವರ ಸ್ಮರಣಾರ್ಥ ಎರಡನೇ ವರ್ಷದ ಟೂರ್ನಿ ನಡೆಯಲಿದೆ. ಕನ್ನಡ ಚಿತ್ರರಂಗದ ಕಲಾವಿದರು ಕರ್ನಾಟಕದ ಪ್ರಮುಖ ಕ್ರಿಕೆಟ್ ಆಟಗಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಟೂರ್ನಿಯ ಎಲ್ಲಾ ಉಸ್ತುವಾರಿಯನ್ನು "ಕಿಚ್ಚ ಸುದೀಪ ಕ್ರಿಕೆಟ್ ಅಸೋಸಿಯೇಷನ್" ವಹಿಸಿಕೊಂಡು ಈ ಟೂರ್ನಮೆಂಟ್ ಆಕರ್ಷಕವಾಗಿ, ಶಿಸ್ತುಬದ್ದವಾಗಿ ಮುಖ್ಯವಾಗಿ ಸಾರ್ಥಕ ರೀತಿ ನಡೆಸಿ ಕೊಡಲು ನೆಲಮಂಗಲದ ಆದಿತ್ಯ ಗ್ಲೋಬಲ್ ಕ್ರಿಕೆಟ್ ಗ್ರೌಂಡ್ ನಲ್ಲಿ ತಯಾರಿ ಮಾಡಿಕೊಂಡಿದೆ.

KSPL2 is all set to commence from December 25

ಕಳೆದ ಜನವರಿಯಲ್ಲಿ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿ ಆಯೋಜಿಸಲಾಗಿತ್ತು. ಯಶಸ್ವಿಯಾಗಿ ನಡೆದಿದ್ದ ಈ ಟೂರ್ನಿ ಈಗ ಎರಡನೇ ಆವೃತ್ತಿಗೆ ಸಜ್ಜಾಗಿದೆ.

More from Filmibeat

English summary
Kiccha sudeep premier league season 2 is all set to commence from December 25.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X