twitter
    For Quick Alerts
    ALLOW NOTIFICATIONS  
    For Daily Alerts

    ಡಿಸೆಂಬರ್ 25ರಿಂದ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ 2ನೇ ಆವೃತ್ತಿ ಶುರು

    |

    ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ ಎರಡನೇ ಆವೃತ್ತಿ ಡಿಸೆಂಬರ್ 25 ರಿಂದ ಆರಂಭವಾಗಲಿದೆ. ಮೂರು ದಿನ ನಡೆಯುವ ಟೆನ್ನಿಸ್ ಬಾಲ್ ಟೂರ್ನಮೆಂಟ್ ಭಾರತ ಸರ್ಕಾರದ ಕೊವೀಡ್-19 ನಿಯಮಗಳ ಅಡಿಯಲ್ಲಿ ಆಯೋಜನೆ ಮಾಡಲಾಗಿದೆ.

    ಇದು ಕಿಚ್ಚ ಸುದೀಪ್ ರವರ ಅಭಿಮಾನಿಗಳು ಮಾತ್ರ ಭಾಗವಹಿಸುವ ಟೂರ್ನಿಯಾಗಿದ್ದು, ಕರ್ನಾಟಕ ರಾಜ್ಯದ ಪ್ರತಿ ಜಿಲ್ಲೆಯಿಂದ ಒಂದು ಟೀಮ್ ಈ ಟೂರ್ನಿಯಲ್ಲಿ ಭಾಗವಹಿಸುತ್ತದೆ. ಆಕರ್ಷಕ ಟ್ರೋಫಿಗಳು, ನಗದು ಬಹುಮಾನ ಮತ್ತು ಉತ್ತೇಜನ ಬಹುಮಾನಗಳು ಕೂಡ ಇಲ್ಲಿರುತ್ತದೆ.

    ಶ್ರೀಮುರಳಿಗೆ ಸುದೀಪ್ ಬರ್ತಡೇ ವಿಶ್; 'ಬಘೀರ' ಬಗ್ಗೆ ಕಿಚ್ಚ ಹೇಳಿದ್ದೇನು?ಶ್ರೀಮುರಳಿಗೆ ಸುದೀಪ್ ಬರ್ತಡೇ ವಿಶ್; 'ಬಘೀರ' ಬಗ್ಗೆ ಕಿಚ್ಚ ಹೇಳಿದ್ದೇನು?

    ಈ ಬಾರಿಯ ವಿಶೇಷ ಏನೆಂದರೆ ಈ ಸಲದ ಟೂರ್ನಮೆಂಟ್ ಉದ್ಘಾಟನೆ ಮಹಿಳಾ ಅಭಿಮಾನಿಗಳ ಎರಡು ತಂಡದೊಂದಿಗೆ ಪ್ರಾರಂಭ ಪಡೆಯಲಿದೆ. ಅಂತ್ಯದಲ್ಲಿ ಆಯೋಜಕರು ಮತ್ತು ಸಿನಿಮಾ ಪತ್ರಕರ್ತರ ನಡುವೆ ಕೂಡ ಒಂದು ಜಿದ್ದಾ ಜಿದ್ದಿನ ಪಂದ್ಯ ನಡೆಯಲಿದೆ.

    KSPL2 is all set to commence from December 25

    ಅಪಘಾತದಲ್ಲಿ ಮೃತಪಟ್ಟ ಕಿಚ್ಚ ಸುದೀಪ ಅವರ ಅಭಿಮಾನಿ ನಂದೀಶ್ ಅವರ ಸ್ಮರಣಾರ್ಥ ಎರಡನೇ ವರ್ಷದ ಟೂರ್ನಿ ನಡೆಯಲಿದೆ. ಕನ್ನಡ ಚಿತ್ರರಂಗದ ಕಲಾವಿದರು ಕರ್ನಾಟಕದ ಪ್ರಮುಖ ಕ್ರಿಕೆಟ್ ಆಟಗಾರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

    ಮತ್ತೆ ನಿರ್ದೇಶಕನ ಟೋಪಿ ಧರಿಸುತ್ತಿದ್ದಾರೆಯೇ ಸುದೀಪ್?ಮತ್ತೆ ನಿರ್ದೇಶಕನ ಟೋಪಿ ಧರಿಸುತ್ತಿದ್ದಾರೆಯೇ ಸುದೀಪ್?

    ಈ ಟೂರ್ನಿಯ ಎಲ್ಲಾ ಉಸ್ತುವಾರಿಯನ್ನು "ಕಿಚ್ಚ ಸುದೀಪ ಕ್ರಿಕೆಟ್ ಅಸೋಸಿಯೇಷನ್" ವಹಿಸಿಕೊಂಡು ಈ ಟೂರ್ನಮೆಂಟ್ ಆಕರ್ಷಕವಾಗಿ, ಶಿಸ್ತುಬದ್ದವಾಗಿ ಮುಖ್ಯವಾಗಿ ಸಾರ್ಥಕ ರೀತಿ ನಡೆಸಿ ಕೊಡಲು ನೆಲಮಂಗಲದ ಆದಿತ್ಯ ಗ್ಲೋಬಲ್ ಕ್ರಿಕೆಟ್ ಗ್ರೌಂಡ್ ನಲ್ಲಿ ತಯಾರಿ ಮಾಡಿಕೊಂಡಿದೆ.

    KSPL2 is all set to commence from December 25

    Recommended Video

    100 ಕೆಜಿ ತೂಕ ಇಳಿಸಿದ ಪೈಲ್ವಾನ್ ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ | Filmibeat Kannada

    ಕಳೆದ ಜನವರಿಯಲ್ಲಿ ಕಿಚ್ಚ ಸುದೀಪ್ ಪ್ರೀಮಿಯರ್ ಲೀಗ್ ಮೊದಲ ಆವೃತ್ತಿ ಆಯೋಜಿಸಲಾಗಿತ್ತು. ಯಶಸ್ವಿಯಾಗಿ ನಡೆದಿದ್ದ ಈ ಟೂರ್ನಿ ಈಗ ಎರಡನೇ ಆವೃತ್ತಿಗೆ ಸಜ್ಜಾಗಿದೆ.

    English summary
    Kiccha sudeep premier league season 2 is all set to commence from December 25.
    Thursday, December 17, 2020, 16:20
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X