ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ 'ಕುಲವಧು' ಧನ್ಯಾ: ಹುಡುಗ ಇವರೇ

Recommended Video

Kulavadhu Kannada Serial: ಕುಲವಧು ಧಾರಾವಾಹಿಯ ಧನ್ಯಾ ಅಲಿಯಾಸ್ ದೀಪಿಕಾಗೆ ಮದುವೆ | ಹುಡುಗ ಯಾರು?

ಇತ್ತೀಚಿನ ದಿನಗಳಲ್ಲಿ ಕಿರುತೆರೆ ನಟ, ನಟಿಯರ ಮದುವೆ ಪರ್ವ ಶುರುವಾಗಿದೆ . 'ಅಗ್ನಿಸಾಕ್ಷಿ' ವಿಜಯ್ ಸೂರ್ಯ ಬ್ಯಾಚುಲರ್ ಲೈಫ್ ಗೆ ಗುಡ್ ಬೈ ಹೇಳಿದ್ದರು. ನಟಿ ನೇಹಾ ಪಾಟೀಲ್ ಹೊಸ ಜೀವನ ಆರಂಭಿಸಿದ್ದರು. ಬಿಗ್ ಬಾಸ್ ಖ್ಯಾತಿ ಜಗನ್ ಕೂಡ ಎಂಗೇಜ್ ಮೆಂಟ್ ಆಗಿದ್ದರು.

ಅಷ್ಟೇ ಯಾಕೆ 'ಕುಲವಧು' ಧಾರಾವಾಹಿಯ ವಚನಾ ಅಲಿಯಾಸ್ ಅಮೃತಾ ಕೂಡ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಅದೇ ಧಾರಾವಾಹಿಯ ಮತ್ತೊಬ್ಬ ನಟಿ ಧನ್ಯಾ ಖ್ಯಾತಿಯ ದೀಪಿಕಾ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ.

ಈ ಬಗ್ಗೆ ಸ್ವತಃ ದೀಪಿಕಾ ಅವರೇ ಇನ್ಸ್ಟಾಗ್ರಾಮ್ ನಲ್ಲಿ ಖಚಿತ ಪಡಿಸಿದ್ದು, ತನ್ನ ಭಾವಿ ಪತಿಯನ್ನ ಕೂಡ ಪರಿಚಯ ಮಾಡಿಕೊಟ್ಟಿದ್ದಾರೆ. ಈ ಮೂಲಕ ತನ್ನ ಬಾಳಿಗೆ ಪ್ರೀತಿಯ ರಾಜಕುಮಾರನನ್ನ ಸ್ವಾಗತಿಸಿದ್ದಾರೆ. ಅಷ್ಟಕ್ಕೂ ಆ ವರ ಯಾರು? ಮುಂದೆ ಓದಿ.....

ಏಳು ಜನ್ಮದಲ್ಲೂ ಏಳು ಹೆಜ್ಜೆ ಇವರ ಜೊತೆಯೇ.!

ಏಳು ಜನ್ಮದಲ್ಲೂ ಏಳು ಹೆಜ್ಜೆ ಇವರ ಜೊತೆಯೇ.!

''ನನ್ನ ಗೆಳೆಯನ ಜೊತೆ ಇದು ನಮ್ಮ ಮೊದಲ ಪೋಸ್ಟ್. ಏಳೇಳು ಜನ್ಮದಲ್ಲೂ ಏಳು ಹೆಜ್ಜೆ ಹಾಕುವುದು ಇವರ ಜೊತೆಯೇ'' ಎಂದು ಕುಲವಧು ಧನ್ಯಾ ಅಲಿಯಾಸ್ ದೀಪಿಕಾ ತಮ್ಮ ಹುಡುಗನನ್ನ ಪರಿಚಯ ಮಾಡಿದ್ದಾರೆ.

ಯಾರು ಈ ಅಕ್ಕು ಆಕರ್ಷ್?

ಯಾರು ಈ ಅಕ್ಕು ಆಕರ್ಷ್?

ನಟಿ ದೀಪಿಕಾ ಅವರು ತಮ್ಮ ಭಾವಿ ಪತಿಯ ಅಕ್ಕು ಆಕರ್ಷ್ ಅವರ ಪೇಯಿಂಟ್ ಶೈಲಿಯಲ್ಲಿ ಇರುವ ಫೋಟೋವನ್ನ ಪೋಸ್ಟ್ ಮಾಡಿ, ಇವರೇ ನಾನು ಮದುವೆಯಾಗಲಿರುವ ಹುಡುಗ ಎಂದು ಅಧಿಕೃತವಾಗಿ ಪ್ರಕಟಿಸಿದ್ದಾರೆ. ಅಂದ್ಹಾಗೆ, ಅಕ್ಕು ಆಕರ್ಷ್ ಕೂಡ ಕಿರುತೆರೆ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದಾರೆ.

ನೀನು ನನಗೆ ಸೂರ್ಯ ಇದ್ದಂತೆ

ನೀನು ನನಗೆ ಸೂರ್ಯ ಇದ್ದಂತೆ

ಮೊದಲ ಪೋಸ್ಟ್ ನಲ್ಲಿ ಇಬ್ಬರು ಮದುವೆಯಾಗುತ್ತಿರುವುದಾಗಿ ಹೇಳಿಕೊಂಡಿರುವ ದೀಪಿಕಾ ಇನ್ನೊಂದು ಪೋಸ್ಟ್ ನಲ್ಲಿ ತಮ್ಮ ಪ್ರೀತಿಯ ಬಗ್ಗೆ ಹೇಳಿಕೊಂಡಿದ್ದಾರೆ. 'ನೀನು ನನಗೆ ಪ್ರತಿದಿನದ ಸೂರ್ಯ ಇದ್ದಂತೆ. ನನ್ನ ಹೃದಯ ನಿನಗೆ ಸೋತಿದೆ' ಎಂದು ಖುಷಿ ಹಂಚಿಕೊಂಡಿದ್ದಾರೆ.

ಮದುವೆ ಬಗ್ಗೆ ಮಾಹಿತಿ ಇಲ್ಲ

ಮದುವೆ ಬಗ್ಗೆ ಮಾಹಿತಿ ಇಲ್ಲ

ಸದ್ಯಕ್ಕೆ ಇಬ್ಬರು ಎಂಗೇಜ್ ಆಗಿರುವುದು ಪಕ್ಕಾ. ಆದ್ರೆ, ಇವರಿಬ್ಬರ ಮದುವೆ ಯಾವಾಗ ಎಂಬುದು ಗೌಪ್ಯವಾಗಿದೆ. ಈ ಮೂಲಕ ಕುಲವಧು ಧಾರಾವಾಹಿಯಲ್ಲಿ ಇಬ್ಬರು ನಟಿಯರು ಹೊಸ ಜೀವನಕ್ಕೆ ಹೆಜ್ಜೆ ಇಡಲು ಅಣಿಯಾಗಿದ್ದಾರೆ.

More from Filmibeat

English summary
kulavadhu dhanya alias deepika got engaged with small screen actor akku akarsh.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X