ಕಿರುಚಿತ್ರದಲ್ಲಿ 'ಅಮ್ಮ'ನಾದ 'ಕುಲವಧು' ದೀಪಿಕಾ

By Bharath Kumar

Recommended Video

ಅಮ್ಮನಾದ ಸಂಭ್ರಮದಲ್ಲಿ ಕುಲವಧು ದೀಪಿಕಾ | Filmibeat Kannada

'ಕುಲವಧು' ಧಾರಾವಾಹಿಯಲ್ಲಿ ಧನ್ಯ ಪಾತ್ರದ ಮೂಲಕ ಕನ್ನಡಿಗರ ಮನೆಮಗಳಾಗಿರುವ ದೀಪಿಕಾ ಈಗ ಕಿರುಚಿತ್ರದಲ್ಲಿ ನಟಿಸಿದ್ದಾರೆ. ಯುವ ಪ್ರತಿಭೆಗಳು ಸೇರಿ ಮಾಡಿರುವ ಕಿರುಚಿತ್ರದಲ್ಲಿ 'ಅಮ್ಮ'ನಾಗಿ ಬಣ್ಣ ಹಚ್ಚಿದ್ದಾರೆ.

ಅಂದ್ರೆ, ಈ ಕಿರುಚಿತ್ರದ ಹೆಸರೇ ಅಮ್ಮ. ಕೆಲವೊಂದು ನೈಜ ಘಟನೆಗಳನ್ನ ಆಧರಿಸಿ ಒಂದೊಳ್ಳೆ ಭಾವನಾತ್ಮಕ ಕಥೆಯನ್ನ ತೆರೆಮೇಲೆ ತರಲಾಗಿದೆ. ಈ ಕತೆಗೆ ನಟಿ ದೀಪಿಕಾ ಮತ್ತಷ್ಟು ಜೀವ ತುಂಬಿದ್ದಾರೆ.

ಪ್ರತಿಯೊಬ್ಬರ ಜೀವನದಲ್ಲೂ ಅಮ್ಮನ ಸ್ಥಾನ ಬಹಳ ಎತ್ತರ ಮತ್ತು ಬಹುಮುಖ್ಯವಾದದು. ಟೀಚರ್, ಡಾಕ್ಟರ್, ಇಂಜಿನಿಯರ್, ಪೊಲೀಸ್, ಲೀಡರ್.....ಹೀಗೆ ಎಲ್ಲ ರೀತಿಯಲ್ಲಿ ಯಾವುದೇ ಆಪೇಕ್ಷೆ ಇಲ್ಲದೇ ತನ್ನ ಪಾತ್ರ ನಿಭಾಯಿಸುತ್ತಾಳೆ. ಅಮ್ಮ ಎಂಬ ಪಟ್ಟ ಸಿಕ್ಕಿದ ಮೇಲಯೇ ಆ ಮಹಿಳೆಗೆ ನಿಜವಾದ ವ್ಯಕ್ತಿತ್ವ ಸಿಗುವುದು ಎಂಬ ಅಂಶಗಳನ್ನ ಈ ಕಿರುಚಿತ್ರದಲ್ಲಿ ಚಿತ್ರಿಸಲಾಗಿದೆ.

kulavadhu fame deepika starrer short film amma

ಈ ಕಿರುಚಿತ್ರ ಮಾತೃತ್ವಕ್ಕೆ ಗೌರವವಾಗಿದೆ, ಇದು ತಾಯ್ತನವನ್ನು ನಿಸ್ವಾರ್ಥ ಪ್ರೇಮವೆಂದು ಮರು ವ್ಯಾಖ್ಯಾನಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಸದ್ಯ, ಚಿತ್ರದ ಟ್ರೈಲರ್ ಬಿಡುಗಡೆ ಮಾಡಿರುವ ಅಮ್ಮ ತಂಡ, ಸದ್ಯದಲ್ಲೇ ಸಂಪೂರ್ಣ ಸಿನಿಮಾವನ್ನ ಬಿಡುಗಡೆ ಮಾಡಲಿದೆ.

ಕ್ರಾಂತಿ ಸಿದ್ದೆ ತಂಡದಿಂದ ಈ ಚಿತ್ರ ತಯಾರಾಗಿದ್ದು, ನಟಿ ದೀಪಿಕಾ ಜೊತೆಯಲ್ಲಿ ವಿಜಯ್ ಗುಜ್ಜರ್ ಮತ್ತು ಕಿರಣ್ ಸಿದ್ದೆ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಡಿದ್ದಾರೆ. ಸಹ ನಿರ್ದೇಶಕರಾಗಿ ಗಂಗಾ ಸಾಗರ್ ಕೆಲಸ ಮಾಡಿದ್ದು, ಹರಿಕೃಷ್ಣನ್ ಸಂಗೀತವಿದೆ. ತನ್ವಿಕ್ ಅವರ ಛಾಯಾಗ್ರಹಣ, ಚೇತನ್ ಕುಮಾರ್ ಸಾಹಿತ್ಯ, ಹರಿ (ಹಿಂದೂಪುರ್) ಸಂಕಲನ ಒಳಗೊಂಡಿದೆ.

More from Filmibeat

English summary
This is trailer of 'amma' short film starrer of kulavadhu fame deepika (dhanya) which is going to release soon. this short film is a tribute to motherhood, it redefines motherhood as a selfless love.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X