ಸಿ ಎಂ ಕುಮಾರ ಸ್ವಾಮಿ ಇಂದಿಗೂ ಹೆದರೋದು ಇವರೊಬ್ಬರಿಗೆ !
Recommended Video

ಹೆಚ್ ಡಿ ಕುಮಾರಸ್ವಾಮಿ ರಾಜ್ಯದ ಮುಖ್ಯಮಂತ್ರಿ.. ಕುಮಾರಸ್ವಾಮಿ ಅವರೆಂದರೆ ಎಲ್ಲರಿಗೂ ಗೌರವ, ಪ್ರೀತಿ ಇದ್ದೇ ಇರುತ್ತದೆ. ಇನ್ನು ಅವರ ಸುತ್ತಾ ಮುತ್ತ ಇರುವ ಅನೇಕರಿಗೆ ಇವರೆಂದರೆ ಭಯ ಕೂಡ ಇದೆ. ಆದರೆ ಕುಮಾರಸ್ವಾಮಿ ಮಾತ್ರ ಇವರೊಬ್ಬರಿಗೆ ಹೆದರುತ್ತಾರಂತೆ. ಈ ಮಾತನ್ನು ಖುದ್ದು ಸಿ ಎಂ ಅವರೇ ಹೇಳಿದ್ದಾರೆ.
ಹೌದು.. ಕುಮಾರಸ್ವಾಮಿ ಅವರು ತಮ್ಮ ಮಗ ನಿಖಿಲ್ ಕುಮಾರ್ ಅವರಿಗೆ ಹೆದರುತ್ತಾರಂತೆ. ಕಾರಣ ಏನೆಂದರೆ ನಿಖಿಲ್ ಸಿನಿಮಾ ವಿಚಾರ ಬಂದರೆ ತಾವೇ ಸ್ವಂತ ನಿರ್ಧಾರ ತೆಗೆದುಕೊಳ್ಳುತ್ತಾರಂತೆ. ಯಾರು ಏನೇ ಹೇಳಿದರು ಅವರಿಗೆ ಕಥೆ ಇಷ್ಟವಾಗಿ, ಅದನ್ನು ತಾನು ಮಾಡಬಹುದು ಎನ್ನುವ ನಂಬಿಕೆ ಬಂದರೆ ಮಾತ್ರ ಒಪ್ಪಿಕೊಳ್ಳುತ್ತಾರಂತೆ.

ಹಾಗಾಗಿ ಸ್ವತಃ ಕುಮಾರ ಸ್ವಾಮಿ ಅವರೇ ಇಂತಹ ಚಿತ್ರದಲ್ಲಿ ಅಭಿನಯ ಮಾಡಲೇ ಬೇಕು ಎಂದು ಹೇಳುವುದಿಲ್ಲವಂತೆ. ಹಾಗೇನಾದರೂ ತುಂಬಾ ಇಷ್ಟವಾಗುವ ಕತೆ ಕೇಳಿದರೇ ಮಾತ್ರ ಒಳ್ಳೆ ಸಿನಿಮಾ ಅಭಿನಯ ಮಾಡು ಎಂದು ಸಲಹೆ ನೀಡುತ್ತಾರಂತೆ.

ಈ ವಿಚಾರವನ್ನು ಇತ್ತೀಚಿಗಷ್ಟೆ ನಡೆದ 'ಸೀತಾರಾಮ ಕಲ್ಯಾಣ' ಚಿತ್ರದ ಸುದ್ದಿಗೋಷ್ಟಿಯಲ್ಲಿ ಸಿ ಎಂ ಕುಮಾರಸ್ವಾಮಿ ಅವರು ಹೇಳಿಕೊಂಡಿದ್ದಾರೆ. ಒಟ್ಟಾರೆ ಇನ್ನು ಮುಂದೆ ನಿಖಿಲ್ ಅಭಿನಯ ಮಾಡುವ ಚಿತ್ರಗಳ ಆಯ್ಕೆ ನಿಖಿಲ್ ಅವರದ್ದೇ ಆಗಿರುತ್ತೆ.


Click it and Unblock the Notifications











