»   » 'ಭೂಮಿಪುತ್ರ' ಸಿನಿಮಾ ಶುರುವಾಗದಿರಲು ಕಾರಣ ಎಚ್.ಡಿ.ಕೆ.!

'ಭೂಮಿಪುತ್ರ' ಸಿನಿಮಾ ಶುರುವಾಗದಿರಲು ಕಾರಣ ಎಚ್.ಡಿ.ಕೆ.!

Posted By:
Subscribe to Filmibeat Kannada

ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಟ್ವೆಂಟಿ ಟ್ವೆಂಟಿ ಸರ್ಕಾರದ ಕತೆ ಇಟ್ಟುಕೊಂಡು ಸ್ಯಾಂಡಲ್ ವುಡ್ ನಲ್ಲಿ 'ಭೂಮಿಪುತ್ರ' ಸಿನಿಮಾ ಸೆಟ್ಟೇರಿತ್ತು. ಆದರೆ ಅದ್ದೂರಿಯಾಗಿ ಮುಹೂರ್ತ ಮಾಡಿಕೊಂಡ ಈ ಸಿನಿಮಾದ ಚಿತ್ರೀಕರಣ ಇದುವರೆಗೂ ಶುರು ಆಗಿಲ್ಲ.

ಕುಮಾರಣ್ಣನ 'ಭೂಮಿಪುತ್ರ' ಚಿತ್ರಕ್ಕೆ ಅಡ್ಡಗಾಲು ಹಾಕಿದವರು ಯಾರು?

ಈ ಹಿಂದೆ 'ಭೂಮಿಪುತ್ರ' ಚಿತ್ರದ ಶೂಟಿಂಗ್ ತಡ ಆಗುವುದಕ್ಕೆ ನಿರ್ಮಾಪಕರ ಹಣಕಾಸು ವಿಷಯ ಕಾರಣ ಎಂದು ನಿರ್ದೇಶಕ ಎಸ್.ನಾರಾಯಣ್ ಹೇಳಿದ್ದರು. ಆದರೆ ಈಗ ಚಿತ್ರದ ನಿರ್ಮಾಪಕ ಪ್ರಭು ಕುಮಾರ್ ಚಿತ್ರದ ಚಿತ್ರೀಕರಣ ತಡ ಆಗಿರುವ ಬಗ್ಗೆ ಮಾತನಾಡಿದ್ದಾರೆ.

Kumaraswamy has not yet agreed on 'Bhumiputra' story

ನಿರ್ಮಾಪಕ ಪ್ರಭು ಕುಮಾರ್ ಅವರು ಹೇಳುವ ಪ್ರಕಾರ ಕುಮಾರಸ್ವಾಮಿ ಅವರು ಇನ್ನೂ ಎಸ್.ನಾರಾಯಣ್ ಅವರ ಕಥೆಯನ್ನು ಓಕೆ ಮಾಡಿಲ್ಲವಂತೆ. 'ಕಥೆ ಇಷ್ಟ ಪಟ್ಟು ಅವರು ಓಕೆ ಮಾಡದೆ ನಾವು ಚಿತ್ರೀಕರಣ ಮಾಡಲು ಸಾಧ್ಯವಿಲ್ಲ' ಎಂದು ನಿರ್ಮಾಪಕರು ಸ್ಪಷ್ಟ ಪಡಿಸಿದ್ದಾರೆ. ಇದರಿಂದ ತೆರೆ ಮೇಲೆ ಕುಮಾರಣ್ಣನ ಆಡಳಿತ ನೋಡಲು ಆಸೆ ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಮತ್ತೆ ನಿರಾಸೆ ಆಗಿದೆ.

English summary
Ex chief minister Kumaraswamy has not yet agreed on 'Bhumiputra' story says producer Prabhukumar

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada