For Quick Alerts
  ALLOW NOTIFICATIONS  
  For Daily Alerts

  ಸೀತಾ ರಾಮ ಕಲ್ಯಾಣ ನೋಡಲು ಬಂದ ಕುಮಾರಸ್ವಾಮಿ

  By Pavithra
  |

  ಕನ್ನಡ ಸಿನಿಮಾರಂಗದ ಮಾಡ್ರನ್ ರಾಮ ನಿಖಿಲ್ ಕುಮಾರ್, ಯಾಕಪ್ಪ ಹೀಗೆ ಹೇಳ್ತಿದ್ದೀವಿ ಅಂದರೆ ನಿಖಿಲ್ ಅಭಿನಯದ ಸಿನಿಮಾ ಸೀತಾ ರಾಮ ಕಲ್ಯಾಣ ಚಿತ್ರೀಕರಣ ಶುರುವಾಗಿದೆ. ಸೀತೆಯ ಪಾತ್ರದಲ್ಲಿ ರಚಿತಾ ರಾಮ್ ಅಭಿನಯಿಸಿದ್ದು ಇವರಿಬ್ಬರ ಕಲ್ಯಾಣೋತ್ಸವವನ್ನ ನೋಡಲು ಇಂದು (ಫೆ.5) ಮಾಜಿ ಮುಖ್ಯಮಂತ್ರಿಗಳು ಆಗಮಿಸಿದ್ದರು.

  ಎ ಹರ್ಷ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಸೀತಾ ರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣ ನಡೆಯುತ್ತಿರುವ ಸೆಟ್ ಗೆ ಕುಮಾರಸ್ವಾಮಿ ಭೇಟಿಕೊಟ್ಟಿದ್ದಾರೆ. ಚಿತ್ರೀಕರಣ ಹೇಗೆ ನಡೆಯುತ್ತಿದೆ? ಮಗನ ಅಭಿನಯ ಹೇಗಿದೆ ಎನ್ನುವುದನ್ನ ಇದೇ ವೇಳೆ ವಿಚಾರಿಸಿದ್ದಾರೆ.

  ಹೊಸ ಟೆಕ್ನಾಲಜಿಯಲ್ಲಿ ನಡೆಯಲಿದೆ ಸೀತಾರಾಮ ಕಲ್ಯಾಣ

  ಇದೇ ಮೊದಲ ಬಾರಿಗೆ ರಚಿತಾ ರಾಮ್ ಹಾಗೂ ನಿಖಿಲ್ ಒಟ್ಟಿಗೆ ಅಭಿನಯಿಸುತ್ತಿದ್ದು ಇಬ್ಬರ ಕಾಂಬಿನೇಶನ್ ಸೀನ್ ಗಳ ಚಿತ್ರೀಕರಣ ಶುರುವಾಗಿದೆ. ಸಿನಿಮಾ ನಿರ್ಮಾಣದ ವಿಚಾರದಲ್ಲಿ ರಾಜಿ ಆಗದೇ ಚಿತ್ರೀಕರಣವನ್ನ ಮಾಡುತ್ತಿರುವ ನಿಖಿಲ್ ಮತ್ತು ಸಿನಿಮಾತಂಡ ಈ ಬಾರಿಯೂ ಅದ್ದೂರಿ ಸಿನಿಮಾವನ್ನ ಪ್ರೇಕ್ಷಕರ ಮುಂದೆ ತರಲಿದ್ದಾರೆ.

  ಬೆಂಗಳೂರಿನ ಸುತ್ತ-ಮುತ್ತ ಸೀತಾ ರಾಮ ಕಲ್ಯಾಣ ಸಿನಿಮಾದ ಚಿತ್ರೀಕರಣ ಮಾಡುತ್ತಿದ್ದು ಈ ಬಾರಿ ಕನ್ನಡಿಗರ ಮನಸ್ಸಿಗೆ ಇಷ್ಟವಾಗುವಂತಹ ಕಥೆಯನ್ನ ಆಯ್ಕೆ ಮಾಡಿಕೊಂಡಿದ್ದಾರೆ ನಾಯನ ನಟ ನಿಖಿಲ್ ಕುಮಾರ್.

  English summary
  Kannada Producer H D Kumaraswamy has visited the film location of Seetha Rama Kalyana, starring Kannada actor Nikhil Kumar and Rachita Ram. A Harsh is directing Seetha Rama Kalyana movie

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X