'ಸೀತಾರಾಮ ಕಲ್ಯಾಣ' ಸಿನಿಮಾದ ಶೂಟಿಂಗ್ ಸೆಟ್ ನಲ್ಲಿ ಕುಮಾರಸ್ವಾಮಿ
Recommended Video

ನಟ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಸಿನಿಮಾದ ಚಿತ್ರೀಕರಣ ಸದ್ಯ ನಡೆಯುತ್ತಿದೆ. ಈಗ ಚಿತ್ರದ ಶೂಟಿಂಗ್ ಸೆಟ್ ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಭೇಟಿ ನೀಡಿದ್ದಾರೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಅನಿತಾ ಕುಮಾರಸ್ವಾಮಿ ಇಬ್ಬರು 'ಸೀತಾರಾಮ ಕಲ್ಯಾಣ' ಸಿನಿಮಾದ ಚಿತ್ರೀಕರಣದ ಸ್ಥಳಕ್ಕೆ ಹೋಗಿದ್ದಾರೆ. ಮಗನ ನಟನೆ ಕಂಡು ಅಪ್ಪ ಅಮ್ಮ ಖುಷಿ ಆಗಿದ್ದಾರೆ. ಈ ವೇಳೆ ನಿಖಿಲ್ ಕುಮಾರ್, ಚಿತ್ರದ ನಾಯಕಿ ರಚಿತಾ ರಾಮ್, ನಿರ್ದೇಶಕ ಎ.ಹರ್ಷ ಸೇರಿದಂತೆ ಎಲ್ಲರೂ ಕುಮಾರಸ್ವಾಮಿ ದಂಪತಿ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.
ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಎಷ್ಟೇ ಕೆಲಸ ಇದ್ದರೂ ತಮ್ಮ ಮಗನ ಸಿನಿಮಾ ಬಗ್ಗೆ ಕೂಡ ಕಾಳಜಿ ವಹಿಸಿದ್ದಾರೆ. ಈ ಹಿಂದೆ ಮಗನ 'ಜಾಗ್ವಾರ್' ಚಿತ್ರದ ಕೆಲಸಗಳನ್ನು ಕೂಡ ಕುಮಾರಸ್ವಾಮಿ ಹತ್ತಿರದಿಂದ ಗಮನಿಸಿದ್ದರು.

ಇನ್ನು 'ಸೀತಾರಾಮ ಕಲ್ಯಾಣ' ಕುಮಾರಸ್ವಾಮಿ ಅವರ ಚಿನ್ನಾಂಬಿಕಾ ಬ್ಯಾನರ್ ನಲ್ಲಿ ನಿರ್ಮಾಣ ಆಗುತ್ತಿರುವ ಸಿನಿಮಾವಾಗಿದೆ. 'ಜಾಗ್ವಾರ್' ನಂತರ ನಿಖಿಲ್ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಮೈಸೂರಿನ ನಂತರ ಈ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯುತ್ತಿದೆ.


Click it and Unblock the Notifications











