»   » 'ಕುಮಾರಿ' ಜೊತೆ ಹೆಜ್ಜೆ ಹಾಕಿದ ದೇವರಾಜ್ 2ನೇ ಪುತ್ರ

'ಕುಮಾರಿ' ಜೊತೆ ಹೆಜ್ಜೆ ಹಾಕಿದ ದೇವರಾಜ್ 2ನೇ ಪುತ್ರ

Posted By:
Subscribe to Filmibeat Kannada

ನಟ ದೇವರಾಜ್ ಅವರ 2ನೇ ಪುತ್ರ ಪ್ರಣಮ್ ದೇವರಾಜ್ ನಟನೆಯ ಮೊದಲ ಸಿನಿಮಾ 'ಕುಮಾರಿ 21F' ಕೆಲ ತಿಂಗಳ ಹಿಂದೆ ಸೆಟ್ಟೇರಿತ್ತು. ಇದೀಗ ಈ ಸಿನಿಮಾದ ಹಾಡಿನ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ.

'Kumari 21F' Movie Song Shooting in Pattaya

ಸಿನಿಮಾದ ಚಿತ್ರೀಕರಣ ಕೊನೆಯ ಹಂತದಲ್ಲಿದ್ದು, ಸದ್ಯ, ಸಾಂಗ್ ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯುಸಿ ಇದೆ. ಪಟಾಯ (Pattaya) ನಗರದಲ್ಲಿನ ಸುಂದರ ತಾಣಗಳಲ್ಲಿ ಹಾಡಿನ ಚಿತ್ರೀಕರಣವನ್ನು ಮಾಡಲಾಗುತ್ತಿದೆ. ಹಾಡಿನಲ್ಲಿ ಪ್ರಣಾಮ್ ಕಾಣಿಸಿಕೊಂಡಿರುವ ಮೇಕಿಂಗ್ ಸ್ಟಿಲ್ ಗಳು ರಿವಿಲ್ ಆಗಿದೆ. ಮೊದಲು ಬ್ಯಾಂಕಾಕ್ ನಲ್ಲಿ ಸಿನಿಮಾದ ಕೆಲ ಭಾಗದ ಚಿತ್ರೀಕರಣವನ್ನು ಮುಗಿಸಿ ಈಗ ಪಟಾಯದಲ್ಲಿ ಹಾಡಿನ್ನು ಶೂಟ್ ಮಾಡಲಾಗುತ್ತಿದೆ.

'Kumari 21F' Movie Song Shooting in Pattaya

'ಕುಮಾರಿ 21F' ಸಿನಿಮಾ ತೆಲುಗಿನ ರೀಮೇಕ್ ಆಗಿದ್ದು, ತೆಲುಗಿನ ಟೈಟಲ್ ನಲ್ಲಿ ಕನ್ನಡದಲ್ಲಿ ಸಿನಿಮಾ ಬರುತ್ತಿದೆ. ಎಸ್.ಎಸ್ ರಾಜಮೌಳಿ ಅವರ ಜೊತೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಶ್ರೀಮನ್ ವೆಮುಲಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳಲಿದ್ದಾರೆ. ಪ್ರಣಮ್ ಜೊತೆ ನಿಧಿ ಕುಶಾಲಪ್ಪ ನಾಯಕಿಯಾಗಿ ಅಭಿನಯಿಸ್ತಿದ್ದಾರೆ.

English summary
Pranam Devaraj Starting Kannada Movie 'Kumari 21F' Song Shooting in Pattaya

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada