For Quick Alerts
  ALLOW NOTIFICATIONS  
  For Daily Alerts

  ಸಂಭಾಷಣೆಕಾರ ಕುಣಿಗಲ್ ನಾಗಭೂಷಣ್ ಬೆಳ್ಳಿಹೆಜ್ಜೆ

  By Rajendra
  |
  ಕುಣಿಗಲ್ ನಾಗಭೂಷನ್ ಅವರು ಕನ್ನಡ ಚಿತ್ರರಂಗದಲ್ಲಿ ಸಂಭಾಷಣೆಕಾರರಾಗಿ ತಮ್ಮದೇ ಆದಂತಹ ಛಾಪು ಮೂಡಿಸಿದವರು. ಚಿತ್ರರಂಗಕ್ಕೆ ಸೇರುವ ಆಸಕ್ತಿಯಿಂದ ಸಿನಿಮಾಟೋಗ್ರಫಿ ಡಿಪ್ಲೋಮಾ ಪಡೆದ ಕುಣಿಗಲ್ ನಾಗಭೂಷನ್ ಸಾಹಿತಿಯಾಗಿ, ಸಹ ನಿರ್ದೇಶಕರಾಗಿ, ಕಲಾವಿದರಾಗಿಯೂ ಹಲವಾರು ಕ್ಷೇತ್ರಗಳಲ್ಲಿ ಹೆಸರು ಮಾಡಿದ್ದಾರೆ.

  ಕರ್ನಾಟಕ ಚಲನಚಿತ್ರ ಅಕಾಡೆಮಿ ಸುಸೂತ್ರವಾಗಿ ನಡೆಸುಕೊಂಡು ಬರುತ್ತಿರುವ 'ಬೆಳ್ಳಿಹೆಜ್ಜೆ' ಕಾರ್ಯಕ್ರಮಕ್ಕೆ ಈ ಬಾರಿಯ ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದಾರೆ. ಅಕಾಡೆಮಿ ನಡೆಸಿಕೊಡುತ್ತಿರುವ 33ನೇ ಬೆಳ್ಳಿಹೆಜ್ಜೆ ಕಾರ್ಯಕ್ರಮ ಇದಾಗಿದೆ.

  ಇದೇ ಆಗಸ್ಟ್ 25ರಂದು ಸಂಜೆ 5 ಗಂಟೆಗೆ ಬೆಂಗಳೂರು ಜೆಸಿ ರಸ್ತೆಯ ಪ್ರಿಯದರ್ಶಿನಿ ಚಿತ್ರಮಂದಿರ, ಬಾದಾಮಿ ಹೌಸ್ ನಲ್ಲಿ ಕಾರ್ಯಕ್ರಮ ನಡೆಯಲಿದೆ. ಅವರನ್ನು ತೆರೆಯ ಮೇಲೆ ನೋಡಿರುವ, ಅವರ ಅದೆಷ್ಟೋ ಸಂಭಾಷಣೆಗಳನ್ನು ಕೇಳಿರುವವರು ಅವರೊಂದಿಗೆ ಅಂದು ಮುಖಾಮುಖಿಯಾಗಬಹುದು.

  'ನಾಂದಿ' ಚಿತ್ರದ ಮೂಲಕ ಸಹನಿರ್ದೇಶಕರಾಗಿ ಚಿತ್ರರಂಗಕ್ಕೆ ಕಾಲಿಟ್ಟ ನಾಗಭೂಷಣ ಅವರು 'ಸಿಂಹ ಜೋಡಿ' ಮೂಲಕ ಚಿತ್ರ ಸಂಭಾಷಣೆ ರಚಿಸಲು ಮೊದಲಿಟ್ಟರು. ಜೊತೆಗೆ ಬಣ್ಣ ಹಚ್ಚಲೂ ಆರಂಭಿಸಿದರು. ಜನಪ್ರಿಯ ಸಂಭಾಷಣೆಕಾರರಾಗಿ ರೂಪುಗೊಂಡ ಕುಣಿಗಲ್ ನಾಗಭೂಷಣ್ ಇದುವರೆಗೂ 200ಕ್ಕೂ ಹೆಚ್ಚು ಚಿತ್ರಗಳಿಗೆ ಸಂಭಾಷಣೆ ಹೆಣೆದಿದ್ದಾರೆ.

  ರಾಜ್ಯ ಸರ್ಕಾರದಿಂದ ಎರಡು ಬಾರಿ ಅತ್ಯುತ್ತಮ ಸಂಭಾಷಣಾ ಕರ್ತೃ ಪ್ರಶಸ್ತಿ (ಗೌರಿ ಗಣೇಶ, ಯಾರಿಗೂ ಹೇಳ್ಬೇಡಿ) ಪಡೆದಿದ್ದಾರೆ. ಆಶೀರ್ವಾದ ಹಾಗೂ ಬಾಳು ಜೇನು ಚಿತ್ರಗಳು ಅವರ ನಿರ್ದೇಶನಲ್ಲಿ ಬಂದಂತಹ ಚಿತ್ರಗಳು. ಚಲನಚಿತ್ರರಂಗದ ಜೊತೆಗೆ ಕಿರುತೆರೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಗಣೇಶನ ಮದುವೆ, ಗೋಲ್ ಮಾಲ್ ರಾಧಾಕೃಷ್ಣ. (ಒನ್ ಇಂಡಿಯಾ ಕನ್ನಡ)

  English summary
  Kunigal Nagabhushan (born 6 December 1945) is a most acclaimed Kannada Film Director, Dialogue Writer, Comedy actor and also serial and documentary producer. Now he has the guest honour of Belli Hejje programme of Karnataka Chalanachitra Academy held on 28th June, 2012 at 5 pm.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X