For Quick Alerts
  ALLOW NOTIFICATIONS  
  For Daily Alerts

  ಕುರಿ ಪ್ರತಾಪ್ ಸಾವಿನ ವಂದತಿ: ಸ್ಪಷ್ಟನೆ ನೀಡಿದ ಹಾಸ್ಯ ನಟ

  |

  ಕನ್ನಡದ ಖ್ಯಾತ ಹಾಸ್ಯ ನಟ ಕುರಿ ಪ್ರತಾಪ್ ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದ್ದು, ಸ್ಥಿತಿ ಬಹಳ ಗಂಭೀರವಾಗಿದೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

  ಎಲ್ಲರಿಗೂ ಉತ್ತರ ಕೊಟ್ಟು ಕೊಟ್ಟು ಸಾಕಾಗಿದೆ ಎಂದ ಕುರಿ ಪ್ರತಾಪ್

  ಮತ್ತೆ ಕೆಲವರು ಕುರಿ ಪ್ರತಾಪ್ ಅವರು ನಿಧನರಾಗಿದ್ದಾರೆ ಎಂಬ ಪೋಸ್ಟ್‌ಗಳನ್ನು ಸಹ ಹಾಕಿಬಿಟ್ಟಿದ್ದರು. ಇದು ಸಹಜವಾಗಿ ಕುರಿ ಪ್ರತಾಪ್ ಅಭಿಮಾನಿಗಳಲ್ಲಿ ಆತಂಕ ಸೃಷ್ಟಿಸಿತ್ತು.

  ನಾನು ಸತ್ತಿಲ್ಲ, ಆರೋಗ್ಯವಾಗಿ, ಆರಾಮಾಗಿ ಇದ್ದೀನಿ; ನಟ ದೊಡ್ಡಣ್ಣನಾನು ಸತ್ತಿಲ್ಲ, ಆರೋಗ್ಯವಾಗಿ, ಆರಾಮಾಗಿ ಇದ್ದೀನಿ; ನಟ ದೊಡ್ಡಣ್ಣ

  ಇದು ಕೇವಲ ವಂದತಿ ಅಷ್ಟೇ. ಕುರಿ ಪ್ರತಾಪ್ ಅವರು ಆರೋಗ್ಯವಾಗಿದ್ದಾರೆ. ಸುಳ್ಳು ವಂದತಿಯ ಬಗ್ಗೆ ಸ್ವತಃ ಪ್ರತಾಪ್ ಅವರೇ ವಿಡಿಯೋ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.

  ''ಸೋಶಿಯಲ್ ಮೀಡಿಯಾದಲ್ಲಿ ನನ್ನ ಬಗ್ಗೆ ಸುಳ್ಳು ಸುದ್ದಿಗಳು ಹರಿದಾಡುತ್ತಿದೆ. ತುಂಬಾ ಜನ ಫೋನ್ ಮಾಡಿ ವಿಚಾರಿಸುತ್ತಿದ್ದಾರೆ. ಎಲ್ಲರಿಗೂ ಹೇಳಿ ಹೇಳಿ ಸಾಕಾಯಿತು. ನಾನು ಆರಾಮಾಗಿದ್ದೇನೆ, ಮನೆಯಲ್ಲಿಯೇ ಇದ್ದೀನಿ'' ಎಂದು ಸ್ಪಷ್ಟಪಡಿಸಿದ್ದಾರೆ.

  ''ಚೆನ್ನಾಗಿದ್ದವರ ಬಗ್ಗೆಯೂ ಇಂತಹ ಸುಳ್ಳು ಸುದ್ದಿಗಳನ್ನು ಏಕೆ ಹರಡಿಸುತ್ತಾರೋ ಗೊತ್ತಿಲ್ಲ. ಎಲ್ಲರೂ ಮನೆಯಲ್ಲಿರಿ, ಎಲ್ಲೂ ಹೊರಗೆ ಹೋಗಬೇಡಿ'' ಎಂದು ವಿನಂತಿಸಿದ್ದಾರೆ.

  ಕೆಲವು ದಿನಗಳ ಹಿಂದೆ ಹಿರಿಯ ನಟ ದೊಡ್ಡಣ್ಣ ಅವರ ಬಗ್ಗೆಯೂ ಇಂತಹದ್ದೇ ವದಂತಿ ಹಬ್ಬಿತ್ತು. ಆಮೇಲೆ ದೊಡ್ಡಣ್ಣ ಅವರು ಸಹ ವಿಡಿಯೋ ಮಾಡುವ ಮೂಲಕ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದರು. ಸಾವಿನ ಬಗ್ಗೆ ವಂದತಿ ಹಬ್ಬಿಸುವವರ ವಿರುದ್ಧ ಆಕ್ರೋಶವೂ ಹೊರಹಾಕಿದ್ದರು.

  English summary
  Kannada comedy actor Kuri Prathap Clarifies About His Death News.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X