'ಕುರುಕ್ಷೇತ್ರ' ಹಾಡುಗಳನ್ನು ಕೇಳುವ ಕಾಲ ಕೂಡಿ ಬಂತು
Recommended Video

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ 'ಕುರುಕ್ಷೇತ್ರ' ಅಂದುಕೊಂಡಂತೆ ಆಗಿದ್ದರೆ ಈಗಾಗಲೇ ಚಿತ್ರ ಬಿಡುಗಡೆ ಆಗಬೇಕಿತ್ತು. ಸಾಕಷ್ಟು ಕಾರಣಗಳಿಂದ ಸಿನಿಮಾ ಬಿಡುಗಡೆ ತಡವಾಗಿದ್ದು ಅಭಿಮಾನಿಗಳು ಚಿತ್ರ ಯಾವಾಗ ರಿಲೀಸ್ ಎಂದು ಎದುರು ನೋಡುತ್ತಿದ್ದಾರೆ.
ಸಿನಿಮಾ ಬಿಡುಗಡೆ ದಿನಾಂಕವನ್ನು ಇನ್ನು ಅಧಿಕೃತ ಮಾಡಿಲ್ಲವಾದರೂ ಸಿನಿಮಾತಂಡ ಚಿತ್ರದ ಹಾಡುಗಳನ್ನು ರಿಲೀಸ್ ಮಾಡಲು ಸಿದ್ದತೆ ಮಾಡಿಕೊಂಡಿದೆ. ಇದೇ ತಿಂಗಳ ಅಂತ್ಯಕ್ಕೆ ಅಂದರೆ ಆಗಸ್ಟ್ ಕೊನೆಯವಾರದಲ್ಲಿ 'ಕುರುಕ್ಷೇತ್ರ' ಸಿನಿಮಾದ ಆಡಿಯೋ ಬಿಡುಗಡೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆಯುತ್ತಿದೆ.

ವಿ ಹರಿಕೃಷ್ಣ ಸಿನಿಮಾಗೆ ಸಂಗೀತ ನೀಡಿದ್ದು ವಿ ನಾಗೇಂದ್ರ ಪ್ರಸಾದ್ ಹಾಡುಗಳನ್ನು ಬರೆದಿದ್ದಾರೆ. ಕಂದಪದ್ಯ, ಶ್ಲೋಕ ಕೂಡ ಸಿನಿಮಾದ ಹಾಡುಗಳಲ್ಲಿ ಇರಲಿವೆಯಂತೆ. ನಾಗಣ್ಣ ಸೇರಿದಂತೆ ಚಿತ್ರಕ್ಕೆ ನಾಲ್ಕು ನಿರ್ದೇಶಕರು ಆಕ್ಷನ್ ಕಟ್ ಹೇಳಿರುವುದು ವಿಶೇಷ.

ಸದ್ಯ ಆಗಸ್ಟ್ ಕೊನೆಯ ವಾರದಲ್ಲಿ ಹಾಡುಗಳನ್ನು ಆಲಿಸುವ ಅವಕಾಶ ಅಭಿಮಾನಿಗಳಿಗೆ ದೊರೆಯಲಿದ್ದು ಆದಷ್ಟು ಬೇಗ ಸಿನಿಮಾವನ್ನು ಬಿಡುಗಡೆ ಮಾಡಲಿದೆ ಸಿನಿಮಾತಂಡ. ಆಡಿಯೋ ಹಕ್ಕನ್ನು ಲಹರಿ ಮ್ಯೂಸಿಕ್ ಸಂಸ್ಥೆ ಖರೀದಿ ಮಾಡಿದ್ದು ಮುನಿರತ್ನ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.


Click it and Unblock the Notifications











