twitter
    For Quick Alerts
    ALLOW NOTIFICATIONS  
    For Daily Alerts

    15 ದಿನಗಳ ಶೂಟಿಂಗ್ ಮುಗಿಸಿದ 'ಕುರುಕ್ಷೇತ್ರ': ವಿಶೇಷತೆಗಳೇನು?

    By Bharath Kumar
    |

    Recommended Video

    Challenging Star Darshan Is Unhappy With Kurukshetra Movie | Filmibeat Kannada

    ಮುನಿರತ್ನ ನಿರ್ಮಾಣ ಮಾಡುತ್ತಿರುವ 'ಕುರುಕ್ಷೇತ್ರ' ಚಿತ್ರದ ಚಿತ್ರೀಕರಣ ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸತತವಾಗಿ ನಡೆಯುತ್ತಿದೆ. ಈಗಾಗಲೇ 'ಕುರುಕ್ಷೇತ್ರ' ಚಿತ್ರದ ಎಲ್ಲ ಕಲಾವಿದರು ಚಿತ್ರತಂಡವನ್ನ ಸೇರಿಕೊಂಡಿದ್ದಾರೆ.

    ನಿರ್ದೇಶಕ ನಾಗಣ್ಣ ಪ್ರಮುಖ ದೃಶ್ಯಗಳನ್ನ ಸೆರೆಹಿಡಿಯುವಲ್ಲಿ ತಲ್ಲೀನರಾಗಿದ್ದರೇ, ಮತ್ತೊಂದೆಡೆ 'ಕುರುಕ್ಷೇತ್ರ' ಪಾತ್ರಧಾರಿಗಳು ಜಿಮ್ ನಲ್ಲಿ ಕಸರತ್ತು ಮಾಡ್ತಿದ್ದಾರೆ. ದಾಯಾದಿಗಳಾಗಿ ಕಾದಾಡಲಿರುವ ಪಾಂಡವರು ಮತ್ತು ಕೌರವರು ಒಂದೇ ಜಿಮ್ ನಲ್ಲಿ ಒಟ್ಟೊಟ್ಟಿಗೆ ವರ್ಕೌಟ್ ಮಾಡುತ್ತಿದ್ದಾರೆ.

    ಇನ್ನು ಮೊದಲ 15 ದಿನಗಳ ಕಾಲ ಚಿತ್ರೀಕರಣ ಮುಗಿಸಿರುವ ಕುರುಕ್ಷೇತ್ರಕ್ಕೆ ರವಿಚಂದ್ರನ್ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ರೆ, ಮೊದಲ ಹಂತದ ಚಿತ್ರೀಕರಣದಲ್ಲಿ ಏನೆಲ್ಲಾ ವಿಶೇಷತೆಗಳಿವೆ ಎಂದು ತಿಳಿದುಕೊಳ್ಳಲು ಮುಂದೆ ಓದಿ.....

    15 ದಿನಗಳ ಚಿತ್ರೀಕರಣ ಮುಕ್ತಾಯ

    15 ದಿನಗಳ ಚಿತ್ರೀಕರಣ ಮುಕ್ತಾಯ

    ಹರಿಪ್ರಿಯಾ ಹಾಗೂ ದರ್ಶನ್ ಅವರ ಹಾಡಿನೊಂದಿಗೆ ಶುರುವಾದ 'ಕುರುಕ್ಷೇತ್ರ' ಸಿನಿಮಾ ಈಗ ಮೊದಲ 15 ದಿನಗಳ ಚಿತ್ರೀಕರಣವನ್ನ ಮುಗಿಸಿದೆ. ಸದ್ಯ, 'ಕುರುಕ್ಷೇತ್ರ' ಚಿತ್ರದ ಎಲ್ಲ ಪಾತ್ರಧಾರಿಗಳು ಚಿತ್ರತಂಡವನ್ನ ಸೇರಿಕೊಂಡಿದ್ದಾರೆ.

    ಕುರುಕ್ಷೇತ್ರ ಸೇರಿಕೊಂಡ ಶ್ರೀಕೃಷ್ಣ

    ಕುರುಕ್ಷೇತ್ರ ಸೇರಿಕೊಂಡ ಶ್ರೀಕೃಷ್ಣ

    'ಕುರುಕ್ಷೇತ್ರ' ಚಿತ್ರದಲ್ಲಿ ಕೃಷ್ಣನ ಪಾತ್ರ ನಿರ್ವಹಿಸಲಿರುವ ಕ್ರೇಜಿಸ್ಟಾರ್ ರವಿಚಂದ್ರನ್ ಹೈದರಾಬಾದ್ ಗೆ ಹಾರಿದ್ದಾರೆ. ರವಿಚಂದ್ರನ್ ಅವರು ಕೂಡ ತಮ್ಮ ಪಾತ್ರಕ್ಕೆ ಸಿದ್ದರಾಗಿ ಅಖಾಡಕ್ಕೆ ಇಳಿದಿದ್ದಾರೆ.

    'ಕೃಷ್ಣ'ನ ಪಾತ್ರಕ್ಕಾಗಿ ರವಿಚಂದ್ರನ್ ಏನೆಲ್ಲಾ ಮಾಡಿದ್ದಾರೆ ನೋಡಿ?'ಕೃಷ್ಣ'ನ ಪಾತ್ರಕ್ಕಾಗಿ ರವಿಚಂದ್ರನ್ ಏನೆಲ್ಲಾ ಮಾಡಿದ್ದಾರೆ ನೋಡಿ?

    ಜಿಮ್ ನಲ್ಲಿ ಪಾಂಡವರು-ಕೌರವರು ಕಸರತ್ತು

    ಜಿಮ್ ನಲ್ಲಿ ಪಾಂಡವರು-ಕೌರವರು ಕಸರತ್ತು

    ಚಿತ್ರದಲ್ಲಿ ಎದುರಾಳಿಗಳಾಗಿ ಕಾದಾಡಲಿರುವ ಪಾಂಡವರು ಮತ್ತು ಕೌರವರು, ಜೊತೆಗೆ ಜಿಮ್ ನಲ್ಲಿ ವರ್ಕೌಟ್ ಮಾಡ್ತಿದ್ದಾರೆ. ಬೆಳಿಗ್ಗೆ ಮತ್ತು ಸಂಜೆ ಎಲ್ಲರೂ ತಮ್ಮ ದೇಹ ದಂಡಿಸುತ್ತಾ, ಪಾತ್ರಕ್ಕಾಗಿ ಸಿದ್ದವಾಗುತ್ತಿದ್ದಾರೆ.

    ಎಲ್ಲರೂ ಮೀಸೆ ತೆಗೆದಿದ್ದಾರೆ

    ಎಲ್ಲರೂ ಮೀಸೆ ತೆಗೆದಿದ್ದಾರೆ

    ನಟ ದರ್ಶನ್ ಸೇರಿದಂತೆ ಅರ್ಜುನ್ ಸರ್ಜಾ, ರವಿಚಂದ್ರನ್, ಡ್ಯಾನಿಶ್, ಸೋನು ಸೂದ್, ರವಿಚೇತನ್, ಯಶಸ್ ಸೂರ್ಯ ಹೀಗೆ ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗಾಗಿ ಮೀಸೆ ತೆಗೆದಿದ್ದಾರೆ.

    ಕುರುಕ್ಷೇತ್ರ ಸೆಟ್ ನಲ್ಲಿ 400 ಜನ ಕೆಲಸ

    ಕುರುಕ್ಷೇತ್ರ ಸೆಟ್ ನಲ್ಲಿ 400 ಜನ ಕೆಲಸ

    'ಕುರುಕ್ಷೇತ್ರ' ಚಿತ್ರೀಕರಣದ ಸೆಟ್ ನಲ್ಲಿ ಸುಮಾರು 400 ಜನ ಕೆಲಸ ಮಾಡುತ್ತಿದ್ದಾರಂತೆ. ಕಲಾವಿದರು, ತಂತ್ರಜ್ಞರು, ಕಾರ್ಮಿಕರು ಎಲ್ಲರೂ ಸೇರಿ ಬಹುದೊಡ್ಡ ಪ್ರೊಡಕ್ಷನ್ ತಂಡ ಭಾಗಿಯಾಗಿದೆಯಂತೆ.

    ದಿನಕ್ಕೆ 4-5 ದೃಶ್ಯಗಳು ಚಿತ್ರೀಕರಣ

    ದಿನಕ್ಕೆ 4-5 ದೃಶ್ಯಗಳು ಚಿತ್ರೀಕರಣ

    ಒಂದು ದಿನಕ್ಕೆ ನಾಲ್ಕರಿಂದ ಐದು ದೃಶ್ಯಗಳ ಚಿತ್ರೀಕರಣ ಮಾತ್ರ ಮಾಡಲಾಗುತ್ತಿದೆಯಂತೆ. ಮುಖ್ಯವಾದ ದೃಶ್ಯಗಳನ್ನ ಚಿತ್ರೀಕರಿಸಲಾಗುತ್ತಿದ್ದು, ನಿರ್ದೇಶಕ ನಾಗಣ್ಣ ನಿರ್ದೇಶನ ಮಾಡುತ್ತಿದ್ದಾರೆ.

    ಕೌರವರು ಯಾರು?

    ಕೌರವರು ಯಾರು?

    ಕೌರವರ ಪಾಳಯದಲ್ಲಿ ನಟ ದರ್ಶನ್-ದುರ್ಯೋಧನ, ಅರ್ಜುನ್ ಸರ್ಜಾ-ಕರ್ಣ, ರವಿಚೇತನ್-ದುಶ್ಯಾಸನ, ರವಿಶಂಕರ್-ಶಕುನಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ.

    'ದುರ್ಯೋಧನ' ಮತ್ತು 'ಭೀಮ' ಒಟ್ಟಿಗೆ ಬಂದ್ರೆ ಹೇಗಿರುತ್ತೆ ನೋಡಿ'ದುರ್ಯೋಧನ' ಮತ್ತು 'ಭೀಮ' ಒಟ್ಟಿಗೆ ಬಂದ್ರೆ ಹೇಗಿರುತ್ತೆ ನೋಡಿ

    ಪಾಂಡವರು ಯಾರು

    ಪಾಂಡವರು ಯಾರು

    ಪಾಂಡವರ ಪಾಳಯದಲ್ಲಿ ಶಶಿಕುಮಾರ್-ಧರ್ಮರಾಯ, ಡ್ಯಾನಿಶ್ ಅಖ್ತರ್ ಸೈಪ್-ಭೀಮ, ಸೋನು ಸೂದ್-ಅರ್ಜುನ, ಯಶಸ್ ಸೂರ್ಯ-ನಕುಲ ಮತ್ತು ಚಂದನ್-ಸಹದೇವ ಮತ್ತು ಸ್ನೇಹ-ದ್ರೌಪದಿ ಪಾತ್ರ ನಿರ್ವಹಸುತ್ತಿದ್ದಾರೆ.

    ಕುರುಕ್ಷೇತ್ರದಲ್ಲಿ 'ದ್ರೌಪದಿ ವಸ್ತ್ರಾಪಹರಣ' ಮಾಡುವ ದುಶ್ಯಾಸನ ಯಾರು?ಕುರುಕ್ಷೇತ್ರದಲ್ಲಿ 'ದ್ರೌಪದಿ ವಸ್ತ್ರಾಪಹರಣ' ಮಾಡುವ ದುಶ್ಯಾಸನ ಯಾರು?

    ಉಳಿದಂತೆ ಪಾತ್ರಧಾರಿಗಳು

    ಉಳಿದಂತೆ ಪಾತ್ರಧಾರಿಗಳು

    ಉಳಿದಂತೆ ರವಿಚಂದ್ರನ್-ಶ್ರೀಕೃಷ್ಣ, ಅಂಬರೀಷ್-ಭೀಷ್ಮ, ಹರಿಪ್ರಿಯಾ-ನರ್ತಕಿ, ನಿಖಿಲ್ ಕುಮಾರ್-ಅಭಿಮನ್ಯು, ಲಕ್ಷ್ಮಿ-'ಕುಂತಿ', ಶ್ರೀನಿವಾಸ ಮೂರ್ತಿ-ದ್ರೋಣಾಚಾರ್ಯ, ಶ್ರೀನಾಥ್-ಧೃತರಾಷ್ಟ್ರ, ಅವಿನಾಶ್-ಗಂಧರ್ವ ರಾಜ, ಸಾಯಿ ಕುಮಾರ್ ಹೀಗೆ ಇನ್ನು ಹಲವು ಕಲಾವಿದರು ಬಣ್ಣ ಹಚ್ಚುತ್ತಿದ್ದಾರೆ.

    'ಕುರುಕ್ಷೇತ್ರ' ಚಿತ್ರಕ್ಕಾಗಿ ಕನ್ನಡಕ್ಕೆ ಬಂದ 'ಮಿಸ್ ಇಂಡಿಯಾ' ಅದಿತಿ'ಕುರುಕ್ಷೇತ್ರ' ಚಿತ್ರಕ್ಕಾಗಿ ಕನ್ನಡಕ್ಕೆ ಬಂದ 'ಮಿಸ್ ಇಂಡಿಯಾ' ಅದಿತಿ

    English summary
    challenging star darshan starrer 50th movie kurukshetra completes first 15 days shooting in ramoji film city. the movie directed by naganna and produced by munirathna.
    Tuesday, August 29, 2017, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X