ಸೀಮಂತ ಸಂಭ್ರಮದಲ್ಲಿ 'ಕುರುಕ್ಷೇತ್ರ' ದ್ರೌಪದಿ ಖ್ಯಾತಿಯ ನಟಿ ಸ್ನೇಹಾ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ 'ಕುರುಕ್ಷೇತ್ರ' ಚಿತ್ರದಲ್ಲಿ ದ್ರೌಪದಿಯಾಗಿ ಮಿಂಚಿದ್ದ ನಟಿ ಸ್ನೇಹಾ ಈಗ ಎರಡನೆ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇತ್ತೀಚಿಗಷ್ಟೆ ಸ್ನೇಹಾ ಸೀಮಂತ ಕಾರ್ಯಕ್ರಮ ಅದ್ದೂರಿಯಾಗಿ ನಡೆದಿದೆ.

ಸೀಮಂತ ಕಾರ್ಯಕ್ರಮದಲ್ಲಿ ಕುಟುಂಬದವರು ಮತ್ತು ಸ್ನೇಹಿತರು ಭಾಗಿಯಾಗಿದ್ದರು. ಈ ಸಂಭ್ರಮ ಕ್ಷಣಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ನಟಿ ಸ್ನೇಹಾ ಹಳದಿ ಮತ್ತು ಕೆಂಪು ಬಣ್ಣದ ಕಾಂಬಿನೇಷನ್ ನ ಸೀರೆಯಲ್ಲಿ ಕಂಗೊಳಿಸುತ್ತಿದ್ದಾರೆ.

ನಟಿ ಸ್ನೇಹಾ ಎರಡನೆ ಬಾರಿ ಗರ್ಭಿಣಿ ಆಗಿರುವ ವಿಚಾರವನ್ನು ಕಳೆದ ತಿಂಗಳು ಬಹಿರಂಗ ಪಡಿಸಿದ್ದರು. ಸ್ನೇಹಾಗೆ ಈಗಾಗಲೆ 4 ವರ್ಷದ ಮಗನಿದ್ದಾನೆ. ಈ ಮಗುವಿಗೆ ವಿಹಾನ್ ಎಂದು ನಾಮಕರಣ ಮಾಡಿದ್ದಾರೆ. ನಟಿ ಸ್ನೇಹಾ 2012ರಲ್ಲಿ ತಮಿಳು ನಟ ಪ್ರಸನ್ನ ಜೊತೆ ಸಪ್ತಪದಿ ತುಳಿದಿದ್ದರು.

Kurukshetra Fame actress Sneha traditional baby shower ceremony

ಪ್ರಸನ್ನ ಮತ್ತು ಸ್ನೇಹಾ ಇಬ್ಬರು 2009ರಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು. 2012ರಲ್ಲಿ ಮದುವೆಯಾಗಿದ್ದಾರೆ. ಮದುವೆ ಬಳಿಕವು ಸ್ನೇಹಾ ಚಿತ್ರರಂಗದಲ್ಲಿ ಮುಂದುವೆರೆದಿದ್ದಾರೆ. 2015ರಲ್ಲಿ ಸ್ನೇಹಾ ಮೊದಲ ಮಗುವಿಗೆ ಜನ್ಮನೀಡಿದ್ದಾರೆ. ಸ್ನೇಹಾ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಭಾಷೆಯಲ್ಲಿ ಸಾಕಷ್ಟು ಚಿತ್ರಗಳಲ್ಲಿ ಬಣ್ಣಹಚ್ಚಿದ್ದಾರೆ.

ರವಿಚಂದ್ರನ್ ಅಭಿನಯದ 'ರವಿಶಾಸ್ತ್ರಿ' ಚಿತ್ರದ ಮೂಲಕ ಸ್ನೇಹಾ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿದ್ದರು. ಆ ನಂತರ 'ಒಗ್ಗರಣೆ' ಚಿತ್ರದಲ್ಲಿ ಅಭಿನಯಿಸಿದ್ದರು ಮತ್ತು ಇತ್ತೀಚಿಗೆ ರಿಲೀಸ್ ಆದ 'ಕುರುಕ್ಷೇತ್ರ' ಚಿತ್ರದ ಮೂಲಕ ಕನ್ನಡ ಪ್ರೇಕ್ಷಕರ ಮನಗೆದ್ದಿದ್ದರು. ದ್ರೌಪದಿಯಾಗಿ ಮಿಂಚಿದ್ದ ಸ್ನೇಹಾ ಅಭಿನಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

More from Filmibeat

English summary
Kannada movie Kurukshetra Fame actress Sneha had a traditional baby shower function with her close family and friends in attendance.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X