'ಕುರುಕ್ಷೇತ್ರ' ಸಿನಿಮಾ ಬಗ್ಗೆ ಇತ್ತೀಚಿನ ಅಪ್ಡೇಟ್ ಇಲ್ಲಿದೆ
Recommended Video

ಚಾಲೆಂಜಿಂಗ್ ಸ್ಟಾರ್ ಅಭಿನಯದ ಕುರುಕ್ಷೇತ್ರ ಸಿನಿಮಾ ಚಿತ್ರೀಕರಣ ಮುಗಿಸಿ ಸಾಕಷ್ಟು ದಿನಗಳು ಕಳೆದಿವೆ. ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಸಿನಿಮಾತಂಡ ಬ್ಯುಸಿ ಆಗಿದ್ದು ಇತ್ತ ಚುನಾವಣೆ ಹತ್ತಿರ ಬಂದಿರುವುದರಿಂದ ಚಿತ್ರದ ಅಪ್ಡೇಟ್ ಯಾರಿಗೂ ಸಿಕ್ಕಿಲ್ಲ. ಆರಂಭದಲ್ಲಿ ಚುನಾವಣೆಗೂ ಮುನ್ನವೇ ಸಿನಿಮಾವನ್ನ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು.
ನಂತರ ಸಿನಿಮಾವನ್ನ ಥ್ರೀಡಿಯಲ್ಲಿ ಚಿತ್ರೀಕರಣ ಮಾಡಲು ನಿರ್ಧಾರ ಮಾಡಿದ ನಂತರ ಚಿತ್ರೀಕರಣಕ್ಕಾಗಿಯೇ ಹೆಚ್ಚಿನ ಸಮಯವನ್ನ ಕೊಡಬೇಕಾಯಿತು. ಇನ್ನು ಸಿನಿಮಾ ನಿರ್ಮಾಪಕರು ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಹಿನ್ನಲೆಯಲ್ಲಿ ಸದ್ಯ ರಾಜಕೀಯ ಮತ್ತು ಸಿನಿಮಾ ಎರಡರಲ್ಲಿಯೂ ಹೆಚ್ಚಿನ ಗಮನ ಹರಿಸಬೇಕಾಗಿದೆ.
ಇದೇ ತಿಂಗಳು ಚಿತ್ರದ ಆಡಿಯೋ ಬಿಡುಗಡೆ ಮಾಡಲು ಎಲ್ಲಾ ರೀತಿಯ ಸಿದ್ದತೆಗಳನ್ನ ಮಾಡಿಕೊಳ್ಳಲಾಗಿತ್ತು ಆದರೆ ಕುರುಕ್ಷೇತ್ರ ಸಿನಿಮಾದ ಆಡಿಯೋ ರಿಲೀಸ್ ಈ ತಿಂಗಳು ಆಗುವುದಿಲ್ಲವಂತೆ. ಹಾಗಾದರೆ ಯಾವಾಗ ಆಡಿಯೋ ರಿಲೀಸ್? ಸಿನಿಮಾ ತೆರೆಗೆ ಬರುವುದು ಯಾವಗ? ಸದ್ಯ ಚಿತ್ರದ ಅಪ್ಡೇಟ್ ಏನಿದು ಎನ್ನುವ ಪ್ರಶ್ನೆಗೆ ಇಲ್ಲಿದೆ ಮಾಹಿತಿ. ಮುಂದೆ ಓದಿ

ಮುಂದಿನ ತಿಂಗಳು ಚಿತ್ರದ ಆಡಿಯೋ
ಕುರುಕ್ಷೇತ್ರ ಸಿನಿಮಾದ ಆಡಿಯೋ ರಿಲೀಸ್ ಇದೇ ತಿಂಗಳ 28 ರಂದು ನಡೆಯಬೇಕಾಗಿತ್ತು. ಆದರೆ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಸಿನಿಮಾತಂಡ ಚುನಾವಣೆ ಮುಗಿಸಿಕೊಂಡು ಅದ್ದೂರಿ ಆಗಿ ಆಡಿಯೋ ಬಿಡುಗಡೆ ಸಮಾರಂಭ ಮಾಡಲು ನಿರ್ಧಾರ ಮಾಡಿದೆ.

ಆಡಿಯೋ ಹಕ್ಕು ಪಡೆದ ಲಹರಿ ಸಂಸ್ಥೆ
ಕುರುಕ್ಷೇತ್ರ ಸಿನಿಮಾ ಭಾರಿ ಬಜೆಟ್ ಸಿನಿಮಾ ಆದ್ದರಿಂದ ಚಿತ್ರತಂಡ ಆಡಿಯೋ ಬಿಡುಗಡೆ ಸಮಾರಂಭವನ್ನೂ ಅದ್ಧೂರಿಯಾಗಿ ಜನರ ಮಧ್ಯದಲ್ಲಿ ಮಾಡಬೇಕು ಎಂದು ನಿರ್ಮಾಪಕ ಮುನಿರತ್ನ ನಿರ್ಧರಿಸಿದ್ದಾರೆ. ಮೂಲಗಳ ಪ್ರಕಾರ ಲಹರಿ ಸಂಸ್ಥೆ ಆಡಿಯೋ ಹಕ್ಕನ್ನೂ ಖರೀದಿ ಮಾಡಿದ್ದು ಆಡಿಯೋ ರಿಲೀಸ್ ಕಾರ್ಯಕ್ರಮವನ್ನೂ ಅವರೇ ಆಯೋಜಿಸಲಿದ್ದಾರೆ.

ಪೋಸ್ಟ್ ಪ್ರೊಡಕ್ಷನ್ ಕೆಲಸ ಮುಕ್ತಾಯ
ಚಿತ್ರೀಕರಣ-ಡಬ್ಬಿಂಗ್ ಮುಗಿಸಿರುವ ಸಿನಿಮಾತಂಡ ಕೊನೆಯ ಹಂತದ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ಗ್ರಾಫಿಕ್ಸ್ ಕೆಲಸಗಳು ಮುಗಿದು ಡಿ ಐ ಕೆಲಸ ಕೊನೆಹಂತ ತಲುಪಿದೆ. ಈ ತಿಂಗಳ ಹಂತಕ್ಕೆ ಕುರುಕ್ಷೇತ್ರ ಸಿನಿಮಾದ ಮೊದಲ ಕಾಪಿ ನಿರ್ಮಾಪಕರ ಕೈ ಸೇರಲಿದೆ.

ತೆರೆಗೆ ಬರಲು ಸಿದ್ದವಾಯ್ತು ಸಿನಿಮಾ
ತಿಂಗಳ ಅಂತ್ಯಕ್ಕೆ ಮೊದಲ ಕಾಪಿ ನಿರ್ಮಾಪಕರು ಮತ್ತು ಸಿನಿಮಾತಂಡ ನೋಡಿದ ನಂತರ ಎಲ್ಲವೂ ಫೈನಲ್ ಆದರೆ ಫೈನಲ್ ಕಾಪಿ ತೆಗೆಯಲು ಸಿದ್ದತೆ ಮಾಡಿಕೊಳ್ಳಲಾಗುತ್ತದೆ. ಚುನಾವಣೆ , ಹೊಸ ಸರ್ಕಾರದ ಆಡಳಿತ ಆರಂಭವಾಗಿ ಜನರು ಎಲೆಕ್ಷನ್ ಬ್ಯುಸಿಯಿಂದ ಹೊರಬಂದ ತಕ್ಷಣ ಸಿನಿಮಾ ಪ್ರಚಾರ ಆರಂಭಿಸಿ ಪ್ರೇಕ್ಷಕರಿಗೆ ಚಿತ್ರ ತೋರಿಸಲಿದ್ದಾರೆ ನಿರ್ಮಾಪಕ ಮುನಿರತ್ನ.


Click it and Unblock the Notifications