'ಕುರುಕ್ಷೇತ್ರ' ಸಿನಿಮಾ ಲೀಕ್: ಈಗಲೂ ಅದೇ ವೆಬ್ ಸೈಟ್ ಮಾಡಿದ್ದು.!
Recommended Video
ಕನ್ನಡದಲ್ಲಿ ಪೈರಸಿ ಕಮ್ಮಿ, ಪೈರಸಿ ಇಲ್ಲ ಎಂಬ ಮಾತಿದೆ. ಆದ್ರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ಸಿನಿಮಾಗಳನ್ನ ಕೂಡ ಪೈರಸಿ ಮಾಡಲಾಗುತ್ತಿದೆ. ನಟಸಾರ್ವಭೌಮ, ಯಜಮಾನ ಅಂತಹ ದೊಡ್ಡ ದೊಡ್ಡ ಸಿನಿಮಾಗಳನ್ನ ರಿಲೀಸ್ ಆದ ಮೊದಲ ದಿನವೇ ಆನ್ ಲೈನ್ ನಲ್ಲಿ ಲೀಕ್ ಮಾಡಿದ್ದರು.
ಇದೀಗ, ಈ ಪೈರಸಿ ಭೂತ ಕನ್ನಡದ ಮತ್ತೊಂದು ಮೆಗಾ ಸಿನಿಮಾ ಕುರುಕ್ಷೇತ್ರಕ್ಕೂ ಕಾಡಿದೆ. ಕನ್ನಡ, ತೆಲುಗು ಮತ್ತು ತಮಿಳಿನಲ್ಲಿ ತೆರೆಕಂಡಿರುವ ಕುರುಕ್ಷೇತ್ರ ಸಿನಿಮಾ ಈಗ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
ಇದು ಸಹಜವಾಗಿ ಚಿತ್ರತಂಡಕ್ಕೆ ಮತ್ತು ಕುರುಕ್ಷೇತ್ರ ಗಳಿಕೆ ಮೇಲೆ ಭಾರಿ ವ್ಯತ್ಯಾಸವಾಗಲಿದೆ. ಅಷ್ಟಕ್ಕೂ, ಕುರುಕ್ಷೇತ್ರ ಲೀಕ್ ಆಗಿದ್ದು ಎಲ್ಲಿಂದ? ಮುಂದೆ ಓದಿ....

ಒಂದು ವಾರ ಎಲ್ಲವೂ ಸರಿಯಾಗಿತ್ತು
ಆಗಸ್ಟ್ 9 ರಂದು ಕುರುಕ್ಷೇತ್ರ ಸಿನಿಮಾ ಕನ್ನಡ ಹಾಗೂ ತೆಲುಗಿನಲ್ಲಿ ತೆರೆಕಂಡಿತ್ತು. ಮೊದಲ ವಾರಾಂತ್ಯಕ್ಕೆ ಭರ್ಜರಿ ಬೇಟೆ ಮಾಡಿದ ಡಿ ಬಾಸ್ ಸಿನಿಮಾ ಸುಮಾರು 30 ಕೋಟಿವರೆಗೂ ಗಳಿಕೆ ಕಂಡಿದೆ. ಈ ಒಂದು ವಾರದಲ್ಲಿ ಕುರುಕ್ಷೇತ್ರ ಲೀಕ್ ಅಗಿಲ್ಲ. ಬಟ್, ಎರಡನೇ ವಾರಕ್ಕೆ ಕಿಡಿಗೇಡಿಗಳು ಲೀಕ್ ಮಾಡಿ ಅಟ್ಟಹಾಸ ಮೆರೆದಿದ್ದಾರೆ.

ತಮಿಳು ರಾಕರ್ಸ್ ಅಟ್ಟಹಾಸ
ಆಗಸ್ಟ್ 15 ರಂದು ತಮಿಳಿನಲ್ಲಿ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗಿದೆ. ತಮಿಳಿನಲ್ಲಿ ತೆರೆಕಂಡ ಒಂದೇ ದಿನದಲ್ಲಿ ಕುರುಕ್ಷೇತ್ರ ಸಿನಿಮಾ ಪೂರ್ತಿ ಆಲ್ ಲೈನ್ ನಲ್ಲಿ ಲೀಕ್ ಆಗಿದೆ. ಅಂದ್ಹಾಗೆ, ಕುರುಕ್ಷೇತ್ರ ಚಿತ್ರವನ್ನ ಲೀಕ್ ಮಾಡಿದ್ದು ಬೇರೆ ಯಾರೂ ಅಲ್ಲ, ಸದ್ಯ ಪೈರಸಿ ಲೋಕದಲ್ಲಿ ಸದ್ದು ಮಾಡುತ್ತಿರುವ ಅದೇ ತಮಿಳು ರಾಕರ್ಸ್.

ಗಳಿಕೆಯಲ್ಲಿ ಭಾರಿ ನಷ್ಟ
ಕುರುಕ್ಷೇತ್ರ ಚಿತ್ರಕ್ಕೆ ಎಲ್ಲಾ ಕಡೆಯೂ ಮೆಚ್ಚುಗೆ ವ್ಯಕ್ತವಾಗಿದೆ. ಗಳಿಕೆಯಲ್ಲೂ ಸಿನಿಮಾ ದಾಖಲೆ ಮಾಡ್ತಿದೆ. ಈ ರೀತಿ ಪೈರಸಿ ಆದ್ರೆ, ಕೆಲವು ವರ್ಗ ಚಿತ್ರಮಂದಿರಕ್ಕೆ ಬರುವುದಿಲ್ಲ. ಈ ರೀತಿ ವೆ ಬ್ ಸೈಟ್ ಗಳಲ್ಲಿ ಸಿನಿಮಾ ಡೌನ್ ಲೌಡ್ ನೋಡಿಕೊಳ್ಳುತ್ತಾರೆ. ಇದು ಗಳಿಕೆಯಲ್ಲೂ ಪರಿಣಾಮ ಬೀರುತ್ತೆ. ಹಾಗಾಗಿ, ಇಂತಹದನ್ನ ಪ್ರೋತ್ಸಾಹಿಸಬಾರದು.

3ಡಿ ಎಂಜಾಯ್ ಮಾಡಲು ಥಿಯೇಟರ್ ಗೆ ಹೋಗಿ
ಕುರುಕ್ಷೇತ್ರ ಸಿನಿಮಾದ ಪ್ರಮುಖ ಆಕರ್ಷಣೆಯೇ 3ಡಿ. ಈ ಚಿತ್ರವನ್ನ 3ಡಿ ವರ್ಷನ್ ನಲ್ಲಿ ನೋಡಿದ್ರೆನೇ ಮಜಾ. 2ಡಿ ಪ್ರಿಂಟ್ ಪೈರಸಿ ಮಾಡಿ ಸಿನಿಮಾ ನೋಡಿದ್ರು, ಥಿಯೇಟರ್ ಫೀಲ್ ಸಿಗಲ್ಲ. ಕನ್ನಡದಲ್ಲೊಂದು ಅದ್ಧೂರಿ ಸಿನಿಮಾ ಬಂದಾಗ ಅದನ್ನ ಪ್ರೋತ್ಸಾಹಿಸುವುದು ಪ್ರೇಕ್ಷಕರ ಕರ್ತವ್ಯ.

ತಮಿಳು ರಾಕರ್ಟ್ ಗೆ ಕಡಿವಾಣ ಹಾಕಬೇಕು
ತಮಿಳು ರಾಕರ್ಸ್ ಗೆ ಕಡಿವಾಣ ಹಾಕಬೇಕು ಎನ್ನುವುದು ಎಲ್ಲಾ ಇಂಡಸ್ಟ್ರಿಯವರು ಗಟ್ಟಿ ಧ್ವನಿ. ಆದ್ರೆ, ಆ ವೆಬ್ ಸೈಟ್ ವಿರುದ್ಧ ಯಾವ ಕ್ರಮವೂ ಕೆಲಸ ಮಾಡುತ್ತಿಲ್ಲ. ಚಿತ್ರರಂಗದವರಿಂದಲೇ ಈ ವೆಬ್ ಸೈಟ್ ಗೆ ಬೆಂಬಲ ಇದೆ. ಹಾಗಾಗಿ, ಇಂತಹ ಪೈರಸಿಗಳು ಹೆಚ್ಚಾಗುತ್ತಿವೆ ಎಂಬ ಮಾತಿದೆ. ಅದರಲ್ಲೂ ತಮಿಳು ಇಂಡಸ್ಟ್ರಿಯಲ್ಲೇ ಇದಕ್ಕೆ ಕುಮ್ಮಕ್ಕು ಸಿಗುತ್ತಿದೆ ಎಂಬ ವಾದವೂ ಇದೆ.


Click it and Unblock the Notifications











