ಸೌತ್ ಇಂಡಿಯಾದ ಚಿತ್ರಗಳಲ್ಲಿ 'ದರ್ಶನ್ ಕುರುಕ್ಷೇತ್ರ' ನಂ-2, ಏಕೆ?
ಪ್ರೀ-ಪ್ರೊಡಕ್ಷನ್ಸ್ ನಿಂದಲೂ ಸುದ್ದಿ ಮಾಡುತ್ತಿರುವ 'ಕುರುಕ್ಷೇತ್ರ' ಈಗ ಸೌತ್ ಇಂಡಿಯಾದ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ. ಅದ್ಧೂರಿ ತಾರಾ ಬಳಗ, ಬಿಗ್ ಬಜೆಟ್, ದೊಡ್ಡ ಮಟ್ಟದ ತಂತ್ರಜ್ಞರು ಹೀಗೆ ಸಿನಿಮಾದ ಪ್ರತಿ ವಿಭಾಗದಲ್ಲೂ ವಿಶೇಷತೆಯನ್ನ ಕಾಪಾಡಿಕೊಂಡಿರುವ ಕುರುಕ್ಷೇತ್ರ ಚಿತ್ರ ಮತ್ತೊಂದು ಮೈಲಿಗಲ್ಲನ್ನ ಸೃಷ್ಟಿ ಮಾಡಿದೆ.
ಬಿಡುಗಡೆಗೆ ಇನ್ನು ಎರಡು ತಿಂಗಳಷ್ಟೇ ಬಾಕಿ ಉಳಿಸಿಕೊಂಡಿರುವ ಕುರುಕ್ಷೇತ್ರ ಸಿನಿಮಾ ಕೊನೆಯ ಹಂತದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್ಸ್ ಕೆಲಸದಲ್ಲಿ ಬ್ಯುಸಿಯಾಗಿವೆ. ಚಿತ್ರೀಕರಣದ ಜೊತೆ ಜೊತೆಯಲ್ಲಿ ಡಬ್ಬಿಂಗ್, ಗ್ರಾಫಿಕ್ಸ್, ಸಿ.ಜಿ ಹೀಗೆ ಎಲ್ಲಾ ರೀತಿಯ ಕೆಲಸಗಳನ್ನ ಮುಗಿಸಿಕೊಂಡು ಬರುತ್ತಿರುವ ಕುರುಕ್ಷೇತ್ರ ಚಿತ್ರತಂಡ ಜನವರಿಯ ತಿಂಗಳ ಅಂತ್ಯ ಅಥವಾ ಫೆಬ್ರವರಿ ಪ್ರಾರಂಭದಲ್ಲಿ ಸಿನಿಮಾವನ್ನ ಬಿಡುಗಡೆ ಮಾಡಲು ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದೆ.
ಹಾಗಿದ್ರೆ, ದರ್ಶನ್ ಕುರುಕ್ಷೇತ್ರ ದಕ್ಷಿಣ ಭಾರತದ ಸಿನಿಮಾಗಳ ಪೈಕಿ ಯಾವುದರಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ? ಅದಕ್ಕೆ ಕಾರಣವೇನು? ಇವೆಲ್ಲವೂ ತಿಳಿದುಕೊಳ್ಳಲು ಮುಂದೆ ಓದಿ...

ದಾಖಲೆ ಬೆಲೆಗೆ ಸೇಲ್ ಆಯ್ತು ಕುರುಕ್ಷೇತ್ರ ಡಬ್ಬಿಂಗ್ ರೈಟ್ಸ್
ದರ್ಶನ್ ಅಭಿನಯದ 'ಕುರುಕ್ಷೇತ್ರ' ಚಿತ್ರದ ಡಬ್ಬಿಂಗ್ ರೈಟ್ಸ್ ದಾಖಲೆಯ ಮೊತ್ತಕ್ಕೆ ಸೇಲ್ ಆಗಿದೆ. ಇನ್ನೂ ಚಿತ್ರೀಕರಣದ ಹಂತದಲ್ಲಿ ಇರುವಾಗಲೇ ಕುರುಕ್ಷೇತ್ರ ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕು ಮಾರಾಟವಾಗಿತ್ತು. 9 ಕೋಟಿಗೆ ಚಿತ್ರದ ಡಬ್ಬಿಂಗ್ ರೈಟ್ಸ್ ಮಾರಾಟವಾಗಿರುವ ಬಗ್ಗೆ ಚಿತ್ರತಂಡವೇ ಹೇಳಿಕೊಂಡಿದೆ.

ಸೌತ್ ಇಂಡಿಯಾ ಚಿತ್ರಗಳಲ್ಲಿ ಎರಡನೇ ಸ್ಥಾನ
2017ರ ಅಂತ್ಯದ ಲೆಕ್ಕಾಚಾರದಲ್ಲಿ ವರ್ಷ ಪೂರ್ತಿ ಡಬ್ಬಿಂಗ್ ರೈಟ್ಸ್ ಮಾರಾಟವಾಗಿರುವ ದಕ್ಷಿಣ ಭಾರತದ ಸಿನಿಮಾಗಳ ಪೈಕಿ ಕುರುಕ್ಷೇತ್ರ ಅತೀ ಹೆಚ್ಚು ಬೆಲೆಗೆ ಡಬ್ಬಿಂಗ್ ಹಕ್ಕು ಮಾರಾಟವಾಗಿದೆ. ಈ ಚಿತ್ರಗಳ ಪಟ್ಟಿಯಲ್ಲಿ ಕುರುಕ್ಷೇತ್ರ ಎರಡನೇ ಸ್ಥಾನ ಪಡೆದುಕೊಂಡಿದೆ. ಸೌತ್ ಇಂಡಸ್ಟ್ರಿಯ ಬಿಗ್ ಸ್ಟಾರ್ ಗಳ ಸಿನಿಮಾಗಳನ್ನ ಹಿಂದಿಕ್ಕಿ ಕುರುಕ್ಷೇತ್ರ ಎರಡನೇ ಸ್ಥಾನ ಅಲಂಕರಿಸಿದೆ.

ಲಿಸ್ಟ್ ನಲ್ಲಿ ಯಾವ ಯಾವ ಚಿತ್ರಗಳಿವೆ?
ಸೌತ್ ಸಿನಿ ದುನಿಯಾದ ಟಾಪ್ ಐದು ಚಿತ್ರಗಳ ಡಬ್ಬಿಂಗ್ ಹಕ್ಕು ಅತೀ ಹೆಚ್ಚು ಬೆಲೆಗೆ ಮಾರಾಟವಾಗಿದೆ. 'ಪಿಎಸ್ ವಿ ಗರುಡಾ ವೇಗಾ', 'ಬಾಲಕೃಷ್ಣುಡು', 'ರಾಜು ಗಾರಿ ಗದಿ 2', 'ಕುರುಕ್ಷೇತ್ರ', 'ರಂಗಸ್ಥಳಂ 1985' ಇಷ್ಟು ಚಿತ್ರಗಳು ಟಾಪ್ ಲೀಸ್ಟ್ ನಲ್ಲಿವೆ.

ಕುರುಕ್ಷೇತ್ರ ಸಿನಿಮಾದ ಬಗ್ಗೆ ಮಾಹಿತಿ
ಕುರುಕ್ಷೇತ್ರ ಚಾಲೆಂಜಿಂಗ್ ಸ್ಟಾರ್ ಅಭಿನಯದ ಐವತ್ತನೇ ಸಿನಿಮಾ. ನಾಗಣ್ಣ ಹಾಗೂ ದರ್ಶನ್ ಕಾಂಬಿನೇಶನ್ ನಲ್ಲಿ ಮೂಡಿ ಬರುತ್ತಿರೋ ಎರಡನೇ ಸಿನಿಮಾ. ಅರ್ಜುನ್ ಅರ್ಜಾ, ಮೇಘನಾರಾಜ್, ಹರಿಪ್ರಿಯಾ, ನಿಖಿಲ್ ಕುಮಾರ್, ಅಂಬರೀಶ್ ಹೀಗೆ ಇನ್ನೂ ಅನೇಕರು ಅಭಿನಯಿಸಿರೋ ಅದ್ದೂರಿ ತಾರಾಬಳಗವಿರುವ ಸಿನಿಮಾ.


Click it and Unblock the Notifications