For Quick Alerts
  ALLOW NOTIFICATIONS  
  For Daily Alerts

  'ಕುರುಕ್ಷೇತ್ರ' ಚಿತ್ರದ ಹೊಸ ಪೋಸ್ಟರ್ ನಲ್ಲೊಂದು ವಿಶೇಷ

  |
  Kurukshetra Kannada Movie: 'Kurukshetra' new poster out.

  'ಕುರುಕ್ಷೇತ್ರ' ಸಿನಿಮಾದ ಆಡಿಯೋ ಬಿಡುಗಡೆ ಇದೇ ಭಾನುವಾರ (ಜುಲೈ 7) ನಡೆಯಲಿದೆ. ಈ ವಿಶೇಷವಾಗಿ ಸಿನಿಮಾದ ಹೊಸ ಪೋಸ್ಟರ್ ಹೊರ ಬಂದಿದೆ.

  ಆಡಿಯೋ ಬಿಡುಗಡೆ ಕಾರ್ಯಕ್ರಮದ ಪಾಸ್ ನಲ್ಲಿ ದರ್ಶನ್ ಫೋಟೋ ಇಲ್ಲ ಎಂದು ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು. ಆದರೆ, ಇದೀಗ ದರ್ಶನ್ ಪೋಸ್ಟರ್ ಮೂಲಕವೇ ಆಡಿಯೋ ಬಿಡುಗಡೆ ಕಾರ್ಯಕ್ರಮಕ್ಕೆ ಅಭಿಮಾನಿಗಳಿಗೆ ಸ್ವಾಗತ ಮಾಡಲಾಗಿದೆ.

  ದರ್ಶನ್ ಓಪನ್ ಚಾಲೆಂಜ್ ಹಾಕಿದ್ದು ಅಭಿಮಾನಿಗಳಿಗೆ

  ಈ ಪೋಸ್ಟರ್ ನಲ್ಲಿ ಒಂದು ವಿಶೇಷ ಇದೆ. ಇದು ದರ್ಶನ್ ಅವರ 50 ಸಿನಿಮಾ. ಆದರೆ, ಈ ಹಿಂದೆ ಬಂದ ಪೋಸ್ಟರ್ ನಲ್ಲಿ ಅದನ್ನು ಬರೆದಿರಲಿಲ್ಲ. ಆದರೆ, ಈ ಪೋಸ್ಟರ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ 50ನೇ ಸಿನಿಮಾ ಎಂದು ಬರೆಯಲಾಗಿದೆ.

  ಈ ಹಿಂದೆ 'ಯಜಮಾನ' ಅಥವಾ 'ಕುರುಕ್ಷೇತ್ರ' ಪೈಕಿ ಯಾವುದೇ ದರ್ಶನ್ 50ನೇ ಸಿನಿಮಾ ಎನ್ನುವ ಗೊಂದಲ ಇತ್ತು. ಹಾಗಾಗಿ ಹಳೆಯ ಪೋಸ್ಟರ್ ನಲ್ಲಿ 50ನೇ ಸಿನಿಮಾ ಎಂದು ಹಾಕಿರಲಿಲ್ಲ.

  ಇದರೊಂದಿಗೆ ಸಿನಿಮಾಗೆ ನಾಲ್ಕು ನಿರ್ದೇಶಕರು ಕೆಲಸ ಮಾಡಿದ್ದಾರೆ. ಹಾಗಾಗಿ, ನಾಗಣ್ಣ, ವಿ ನಾಗೇಂದ್ರ ಪ್ರಸಾದ್, ಎಸ್ ವಿ ಪ್ರಸಾದ್ ಹಾಗೂ ದೇವರಾಜ್ ಎಂದು ಹೆಸರು ಹಾಕಲಾಗಿದೆ.

  ರಾಕ್ ಲೈನ್ ವೆಂಕಟೇಶ್ ಪಾಲಾದ ಕುರುಕ್ಷೇತ್ರ ವಿತರಣೆ ಹಕ್ಕು

  ಈ ಸಿನಿಮಾವನ್ನು ಮುನಿರತ್ನ ನಿರ್ಮಾಣ ಮಾಡಿದ್ದಾರೆ. ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಶಶಿಕುಮಾರ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಸಾಕಷ್ಟು ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ.

  English summary
  Challenging Star Darshan 50th movie 'Kurukshetra' new poster out. The movie audio will be releasing on july 7th.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X