ಅಂತೂ ದುರ್ಯೋಧನನ ಎಂಟ್ರಿಗೆ ಡೇಟ್ ಫಿಕ್ಸ್: ವರಮಹಾಲಕ್ಷ್ಮಿಗೆ 'ಕುರುಕ್ಷೇತ್ರ' ದರ್ಶನ
Recommended Video
ಕನ್ನಡ ಚಿತ್ರಪ್ರಿಯರು ಉಸಿರು ಬಿಗಿಹಿಡಿದು ಕಾಯುತ್ತಿರುವ ಬಹು ನಿರೀಕ್ಷೆಯ 'ಕುರುಕ್ಷೇತ್ರ' ರಿಲೀಸ್ ಗೆ ಸಮಯ ನಿಗದಿಯಾಗಿದೆ. ಚಿತ್ರ ಇವತ್ತು ಬಿಡುಗಡೆಯಾಗುತ್ತೆ ನಾಳೆ ಬಿಡುಗಡೆ ಆಗುತ್ತೆ ಅಂತ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಸಿಹಿ ಸುದ್ದಿ ನೀಡಿದ್ದಾರೆ ನಿರ್ಮಾಪಕ ಮುನಿರತ್ನ.
ಹೌದು, 'ಕುರುಕ್ಷೇತ್ರ' ಚಿತ್ರದ ರಿಲೀಸ್ ಡೇಟ್ ಅನೌನ್ಸ್ ಮಾಡುವ ಮೂಲಕ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿಸಿದ್ದಾರೆ ಮುನಿರತ್ನ. ಸಿನಿಮಾ ಯಾವಾಗ ತೆರೆಗೆ ಬರುತ್ತೆ ಅಂತ ಚಾಲೆಂಜಿಂಗ್ ಸ್ಟಾರ್ ಅಭಿಮಾನಿಗಳು ಮುನಿರತ್ನ ಹೋದಲ್ಲಿ ಬಂದಲ್ಲಿ ಅವರ ಬೆನ್ನು ಬಿಡದೆ ಕಾಡುತ್ತಿದ್ದರು.
ಟೀಸರ್ ಮೂಲಕ ಸಿನಿರಸಿಕರ ಕುತೂಹಲ ಹೆಚ್ಚಿಸಿದ್ದ ಕುರುಕ್ಷೇತ್ರ ಆಗಸ್ಟ್ ನಲ್ಲಿ ತೆರೆಗೆ ಬರುತ್ತಿದೆ. ಬಹು ತಾರಾಗಣದ ಸ್ಯಾಂಡಲ್ ವುಡ್ ನ ಬಿಗ್ ಬಜೆಟ್ 'ಕುರುಕ್ಷೇತ್ರ' ಎಂಟ್ರಿಗೆ ಸಿದ್ಧವಾಗಿದೆ. ಈ ಬಗ್ಗೆ ನಿರ್ಮಾಪಕ ಮುನಿರತ್ನ ಪತ್ರಿಕ ಘೋಷ್ಠಿ ಮಾಡಿ ಒಂದಿಷ್ಟು ಇಂಟ್ರಸ್ಟಿಂಗ್ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ.ಮುಂದೆ ಓದಿ..

ಆಗಸ್ಟ್ 9ಕ್ಕೆ 'ಕುರುಕ್ಷೇತ್ರ' ರಿಲೀಸ್
ಸುಮಾರು ಎರಡು ವರ್ಷಗಳಿಂದ ಕನ್ನಡ ಚಿತ್ರಾಭಿಮಾನಿಗಳು ಭಾರಿ ಕುತೂಹಲದಿಂದ ಕಾಯುತ್ತಿದ್ದ ಆ ಅದ್ಭುತ ಕ್ಷಣಕ್ಕೆ ಸಮಯ ನಿಗಧಿಯಾಗಿದೆ. ಹೌದು, 'ಕುರುಕ್ಷೇತ್ರ' ಸಿನಿಮಾ ಆಗಸ್ಟ್ 9ಕ್ಕೆ ವರಮಹಾಲಕ್ಷ್ಮಿ ದಿನ ಪ್ರಪಂಚದಾದ್ಯಂತ ತೆರೆಗೆ ಬರುತ್ತಿದೆ. ಪುಟ್ಟ ಟೀಸರ್ ಮೂಲಕವೆ ಚಿತ್ರಾಭಿಮಾನಿಗಳ ನಿರೀಕ್ಷೆ ಮಟ್ಟವನ್ನು ದುಪ್ಪಟ್ಟು ಮಾಡಿದ್ದ ಕುರುಕ್ಷೇತ್ರ ಆಗಸ್ಟ್ ನಿಂದ ಅಬ್ಬರ ಶುರುಮಾಡಲಿದೆ.

ಚಿತ್ರ ತಡವಾಗಲು ಕಾರಣ ಇದೆ
'ಕುರುಕ್ಷೇತ್ರ' ಚಿತ್ರಕ್ಕಾಗಿ ಸುಮಾರು ಎರಡು ವರ್ಷಗಳಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಕಳೆದ ವರ್ಷವೆ ತೆರೆಗೆ ಬರುತ್ತೆ ಅಂತ ಹೇಳಿ ಅಭಿಮಾನಿಗಳಲ್ಲಿ ಆಸೆ ಹುಟ್ಟಿಸಿದ್ದ ನಿರ್ಮಾಪಕ ಮುನಿರತ್ನ, ವರ್ಷಕಳೆದ್ರು ಚಿತ್ರ ರಿಲೀಸ್ ಬಗ್ಗೆ ತುಟಿಬಿಚ್ಚಿರಲಿಲ್ಲ. ಆದ್ರೀಗ ಚಿತ್ರ ತಡವಾಗಿರುವ ಬಗ್ಗೆ ಮಾತನಾಡಿದ್ದಾರೆ. 3ಡಿ ಕೆಲಸ ಭಾಕಿ ಇದ್ದ ಕಾರಣ ಚಿತ್ರ ರಿಲೀಸ್ ತಡವಾಗಲು ಕಾರಣ ಎಂದು ಹೇಳಿದ್ದಾರೆ. ಮಾಮೂಲಿ ಸಿನಿಮಾಗಳಿಗೆ 3ಡಿ ಕೆಲಸ ಮಾಡುವುದು ಕಷ್ಟ. ಅಂತಹದ್ರಲ್ಲಿ ಪೌರಾಣಿಕ ಸಿನಿಮಾಗಳಿಗೆ 3ಡಿ ಮಾಡುವುದು ತುಂಬಾನೆ ಕಷ್ಟ. 2ಡಿ ಕೆಲಸಗಳು 6ತಿಂಗಳ ಹಿಂದೆಯೆ ಮುಗಿಸಿ ಸೆನ್ಸಾರ್ ಕೂಡ ಆಗಿತ್ತಂತೆ. ಸದ್ಯ 3ಡಿ ಕೆಲಸ ಮುಗಿದಿದ್ದು, ಸಿನಿಮಾ ಚಿತ್ರಮಂದಿರದ ಅಂಗಳಕ್ಕೆ ಬರುವ ಸಮಯ ಕೂಡ ಫಿಕ್ಸ್ ಆಗಿದೆ.

ಜುಲೈ ಮೊದಲ ವಾರ ಬರಲಿದೆ ಆಡಿಯೋ
ದುರ್ಯೋಧನ-ಅಭಿಮನ್ಯೂ ಯುದ್ಧಕ್ಕೆ ವರಮಹಾಲಕ್ಷ್ಮಿ ಹಬ್ಬ ದಿನ ವೇದಿಕೆ ಸಿದ್ಧವಾಗಿದೆ. ಇಬ್ಬರ ಕಾಳಗ ನೊಡಲು ಕನ್ನಡ ಚಿತ್ರಪ್ರಿಯರು ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗ ಸಜ್ಜಾಗಿದೆ. ಆದ್ರೆ ಚಿತ್ರದ ಆಡಿಯ ಕೂಡ ಸಧ್ಯದಲ್ಲೇ ಬಿಡುಗಡೆಯಾಗಲಿದೆ. ಜುಲೈ ಮೊದಲ ವಾರದಲ್ಲಿ 'ಕುರುಕ್ಷೇತ್ರ' ಹಾಡುಗಳು ಮಾರುಕಟ್ಟೆಗೆ ಲಗ್ಗೆ ಇಡಲಿವೆ. ವಿ ಹರಿಕಷ್ಣ ಸಂಗೀತ ಸಂಯೋಜನೆಯಲ್ಲಿ 'ಕುರುಕ್ಷೇತ್ರ' ಹಾಡುಗಳು ಮೂಡಿ ಬಂದಿವೆ. ಪೌರಾಣಿಕ ಸಿನಿಮಾದ ಹಾಡುಗಳೆಂದರೆ ಗಾನಪ್ರಿಯರಲ್ಲಿ ಕುತೂಹಲ ತುಸು ಹೆಚ್ಚೇ ಇರುತ್ತೆ. ಆದ್ರೆ ಆ ಕುತೂಹಲಕ್ಕೆ ಜುಲೈ ಮೊದಲ ವಾರ ತೆರೆಬೀಳಲಿದೆ.

5 ಭಾಷೆಯಲ್ಲಿ 'ಕುರುಕ್ಷೇತ್ರ' ತೆರೆಗೆ
'ಕುರುಕ್ಷೇತ್ರ' ಏಕಕಾಲಕ್ಕೆ 5 ಭಾಷೆಯಲ್ಲಿ ತೆರೆಗೆ ಬರುತ್ತಿದೆ. ದಕ್ಷಿಣ ಭಾರತೀಯ ಭಾಷೆಗಳಾದ ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ ಜೊತೆಗೆ ಹಿಂದಿಯಲ್ಲೂ ದರ್ಶನ್ 'ಕುರುಕ್ಷೇತ್ರ' ಅಬ್ಬರಿಸಲಿದೆ. ಇತ್ತೀಚಿಗಷ್ಟೆ ಬೇರೆ ಬೇರೆ ಭಾಷೆಯ ಟೈಟಲ್ ಪೋಸ್ಟರ್ ರಿಲೀಸ್ ಮಾಡಿ ಅಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು ಚಿತ್ರತಂಡ. ಈಗ ಆಗಸ್ಟ್ 9ಕ್ಕೆ ಈ ಎಲ್ಲಾ ಭಾಷೆಯಲ್ಲೂ ತೆರೆಗೆ ಬರಲಿದೆ 'ಕುರುಕ್ಷೇತ್ರ'.


Click it and Unblock the Notifications











