'ಕುರುಕ್ಷೇತ್ರ' ಡಬ್ಬಾ ಟ್ರೇಲರ್ ಎಂದು 'ಮುನಿ'ಸಿಕೊಂಡ ದರ್ಶನ್ ಫ್ಯಾನ್ಸ್!

Recommended Video

Kurukshetra Kannada Movie: ಕುರುಕ್ಷೇತ್ರ' ಡಬ್ಬಾ ಟ್ರೇಲರ್ ಎಂದು 'ಮುನಿ'ಸಿಕೊಂಡ ದರ್ಶನ್ ಫ್ಯಾನ್ಸ್!

'ಕುರುಕ್ಷೇತ್ರ' ಸಿನಿಮಾ ಪದೇ ಪದೇ ದರ್ಶನ್ ಅಭಿಮಾನಿಗಳ ಅಸಮಾಧಾನಕ್ಕೆ ಕಾರಣ ಆಗುತ್ತಿದೆ. ನಿನ್ನೆ (ಜುಲೈ 7) ಹಾಡುಗಳ ಜೊತೆಗೆ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಆದರೆ, ಟ್ರೇಲರ್ ಅಭಿಮಾನಿಗಳ ನಿರೀಕ್ಷೆಗೆ ತಕ್ಕ ಹಾಗೆ ಇಲ್ಲ.

ದರ್ಶನ್ 50ನೇ ಸಿನಿಮಾ ಹಾಗೂ ಒಂದು ಬಿಗ್ ಬಜೆಟ್ ಪೌರಾಣಿಕ ಸಿನಿಮಾ ಎಂಬ ಕಾರಣಕ್ಕೆ 'ಕುರುಕ್ಷೇತ್ರ' ಟ್ರೇಲರ್ ಬಗ್ಗೆ ದೊಡ್ಡ ನಿರೀಕ್ಷೆ ಇತ್ತು. ಆದರೆ, ದರ್ಶನ್ ಅಭಿಮಾನಿಗಳಿಗೆ ಟ್ರೇಲರ್ ನಿರಾಸೆ ಮೂಡಿಸಿದೆ.

'ಕುರುಕ್ಷೇತ್ರ' ಹಳೆಯ ಟೀಸರ್ ಗಳನ್ನು ಸೇರಿಸಿ, ಒಂದೆರಡು ಹೊಸ ದೃಶ್ಯವನ್ನು ಜೋಡಿಸಿ ಟ್ರೇಲರ್ ಎಂದು ತೋರಿಸಿದ್ದಾರೆ. ಹೀಗಾಗಿ ಟ್ರೇಲರ್ ನ ಎಡಿಟಿಂಗ್ ಹಾಗೂ ಗ್ರಾಫಿಕ್ಸ್ ಬಗ್ಗೆ ಟೀಕೆಗಳು ಬರುತ್ತಿವೆ.

ಯೂ ಟ್ಯೂಬ್ ನಲ್ಲಿ ಟ್ರೇಲರ್ ಗೆ ಹೊಗಳಿಕೆಗಿಂತ ಹೆಚ್ಚು ತೆಗಳಿಕೆಯೇ ಸಿಕ್ಕಿದೆ. ಸುಮಾರು 90% ಗೂ ಹೆಚ್ಚು ಕಾಮೆಂಟ್ಸ್ ಗಳು ನೆಗೆಟಿವ್ ಆಗಿವೆ. ಸಿನಿಮಾದ ಟ್ರೇಲರ್ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಗಳು ಶುರು ಆಗಿವೆ.

ಟ್ರೇಲರ್ ನೋಡಿದವರು ನಿರ್ಮಾಪಕ ಮುನಿರತ್ನಗೆ ಮಂಗಳಾರತಿ ಮಾಡಿದ್ದಾರೆ. 'ಕುರುಕ್ಷೇತ್ರ' ಟ್ರೇಲರ್ ನೋಡಿ ದರ್ಶನ್ ಅಭಿಮಾನಿಗಳು ಮಾಡಿದ ಟ್ವೀಟ್ ಗಳು ಹೀಗಿವೆ. ಮುಂದೆ ಓದಿ...

ಎರಡು ಟೀಸರ್ ಗಳನ್ನು ಸೇರಿಸಿ ಒಂದು ಟ್ರೇಲರ್

ಎರಡು ಟೀಸರ್ ಗಳನ್ನು ಸೇರಿಸಿ ಒಂದು ಟ್ರೇಲರ್

''ದಯವಿಟ್ಟು ಈ ಟ್ರೇಲರ್ ಡಿಲೀಟ್ ಮಾಡಿ. ಹೊಸ ಟ್ರೇಲರ್ ಎಡಿಟ್ ಮಾಡಿ ರಿಲೀಸ್ ಮಾಡಿ. ನಮ್ಮ ನಿರೀಕ್ಷೆ ತುಂಬ ದೊಡ್ಡದಾಗಿ ಇದೆ. ಟ್ರೇಲರ್ ನೋಡಿದ ಮೇಲೆ ಸಿನಿಮಾಗೆ ಆಸಕ್ತಿಯೇ ನಮಗೆ ಹೋಗಿದೆ. ಇದೇ ಮೊದಲ ಬಾರಿಗೆ ಭಾರತೀಯ ಚಿತ್ರರಂಗದಲ್ಲಿಯೇ ಎರಡು ಟೀಸರ್ ಗಳನ್ನು ಸೇರಿಸಿ ಒಂದು ಟ್ರೇಲರ್ ಮಾಡಿರುವುದು.''

ನನ್ನ ಜೀವನದಲ್ಲಿ ನೋಡಿದ ಅತಿ ಕೆಟ್ಟ ಟ್ರೇಲರ್ ಕಟ್

ನನ್ನ ಜೀವನದಲ್ಲಿ ನೋಡಿದ ಅತಿ ಕೆಟ್ಟ ಟ್ರೇಲರ್ ಕಟ್

''ಇದು ಒಂದು ಟ್ರೇಲರಾ.. ದೊಡ್ಡ ನಮಸ್ಕಾರ. ಧಾರಾವಾಹಿ ಇದ್ದ ಹಾಗಿದೆ. ಹಿಂದಿ ಧಾರಾವಾಹಿಗಳಿಗಿಂತ ಕೆಟ್ಟದಾಗಿದೆ ಇದೆ. ನನ್ನ ಜೀವನದಲ್ಲಿ ನೋಡಿದ ಅತಿ ಕೆಟ್ಟ ಟ್ರೇಲರ್ ಕಟ್ ಇದು. ಟ್ರೇಲರ್ ಬಗ್ಗೆ ಟ್ರೋಲ್ ಗಳು ಬಂದ ಮೇಲೆ ನಾನು ಈ ಟ್ರೇಲರ್ ನೋಡಿದೆ. ಪೌರಾಣಿಕ ನಾಟಕದ ರೀತಿ ಕಲಾವಿದರ ಮೇಕಪ್ ಇದೆ.''

ನಾಯಕರ ಗೌರವ ಬಜೆಟ್ ಗಿಂತ ಮುಖ್ಯ

ನಾಯಕರ ಗೌರವ ಬಜೆಟ್ ಗಿಂತ ಮುಖ್ಯ

''ಪೌರಾಣಿಕ ಸಿನಿಮಾಗೆ ಸಂಗೀತ ಬಹಳ ಮುಖ್ಯವಾಗಿರುತ್ತದೆ. ಆದರೆ, ಇಲ್ಲಿ ಮ್ಯೂಸಿಕ್ ಅಷ್ಟೊಂದು ಚೆನ್ನಾಗಿಲ್ಲ. ಟ್ರೇಲರ್ ಚೆನ್ನಾಗಿಲ್ಲ. ಇಲ್ಲಿನ ನಾಯಕರ ಗೌರವ ಬಜೆಟ್ ಗಿಂತ ಮುಖ್ಯ. ಟ್ರೇಲರ್ ಗೆ ಇನ್ನು ಸ್ವಲ್ಪ ದೃಶ್ಯವನ್ನು ಸೇರಿಸಬೇಕಿತ್ತು. ಏನೇ ಇರಲಿ ಸಿನಿಮಾಗೆ ಯಶಸ್ಸು ಸಿಗಲಿ.''

ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಬೇಡಿ

ಬೇರೆ ಭಾಷೆಗಳಲ್ಲಿ ಬಿಡುಗಡೆ ಮಾಡಬೇಡಿ

''ಟೀಸರ್ ಗೂ ಟ್ರೇಲರ್ ಗೂ ವ್ಯತ್ಯಾಸ ತಿಳಿದಿಲ್ವ. ಇದನ್ನು ನೋಡಿದ ತುಂಬ ತುಂಬ ನಿರಾಸೆ ಆಗಿದೆ. ನೂರು ಕೋಟಿ ಸಿನಿಮಾ ಎಂದ ಮೇಲೆ ಎಡಿಟಿಂಗ್ ಚೆನ್ನಾಗಿ ಮಾಡಬೇಕು ತಾನೇ. ದರ್ಶನ್ ಗಾಗಿ ಅಷ್ಟೇ ಈ ಸಿನಿಮಾ ನೋಡುತ್ತೇವೆ. ಬೇರೆ ಭಾಷೆಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಬೇಡಿ.''

ಮುನಿರತ್ನ ಜೊತೆಗೆ ಸಿನಿಮಾ ಮಾಡಬೇಡಿ

ಮುನಿರತ್ನ ಜೊತೆಗೆ ಸಿನಿಮಾ ಮಾಡಬೇಡಿ

''ಸಿನಿಮಾ ಹೆಸರು ಕೇಳಿದಾಗ ಏನೋ ಅನ್ಕೊಂಡಿದ್ದೆ. ಆದ್ರೆ, ಟ್ರೇಲರ್ ನೋಡಿದ ಮೇಲೆ ಏನು ಅನಿಸ್ತಾ ಇಲ್ಲ. ಗ್ರಾಫಿಕ್ಸ್ ಗೆ ರೆಸ್ಪೆಕ್ಟ್ ಇಲ್ಲ. ಕನ್ನಡ ಚಿತ್ರಗಳ ಮಾನ ಮರ್ಯಾದೆ ತಗೀತ್ತೀರಾ ನೀವು. ದರ್ಶನ್ ಸರ್ ನೀವು ನಿರ್ಮಾಪಕ ಮುನಿರತ್ನ ಅವರ ಜೊತೆಗೆ ಮತ್ತೆ ಸಿನಿಮಾ ಮಾಡಬೇಡಿ.''

ಟ್ರೇಲರ್ ತುಂಬ ಮುನಿರತ್ನ ಹೆಸರು

ಟ್ರೇಲರ್ ತುಂಬ ಮುನಿರತ್ನ ಹೆಸರು

''ಇದನ್ನು ಬೇರೆ ಎಲ್ಲೂ ಬಿಡುಗಡೆ ಮಾಡಬೇಡಿ. 1 ನಿಮಿಷ 50 ಸೆಕೆಂಡ್ ಟ್ರೇಲರ್ ನಲ್ಲಿ 1 ನಿಮಿಷ ಬರೀ ಮುನಿರತ್ನ ಹೆಸರು ತುಂಬಿದೆ. ಡಬ್ಬಾ ಕ್ವಾಲಿಟಿ ಟ್ರೇಲರ್. ದರ್ಶನ್ ಸರ್ ಮರ್ಯಾದೆ ಕಳಿಬೇಡಿ. ಕೊನೆಯ ಫೈಟ್ ಅನ್ನು ಮಂಡ್ಯದ ಗದ್ದೆಯಲ್ಲಿ ಶೂಟಿಂಗ್ ಮಾಡಿದ ಹಾಗೆ ಕಾಣಿಸುತ್ತದೆ.''

ಟ್ರೇಲರ್ ಗಿಂತ ಕಾಮೆಂಟ್ಸ್ ಚೆನ್ನಾಗಿದೆ

ಟ್ರೇಲರ್ ಗಿಂತ ಕಾಮೆಂಟ್ಸ್ ಚೆನ್ನಾಗಿದೆ

''ಸಿನಿಮಾದ ಟ್ರೇಲರ್ ಗೆ ಯೂ ಟ್ಯೂಬ್ ನಲ್ಲಿ ಸಾಕಷ್ಟು ಕಾಮೆಂಟ್ಸ್ ಗಳು ಬಂದಿವೆ. ಟ್ರೇಲರ್ ಚೆನ್ನಾಗಿರದ ಕಾರಣ ಬಹುಪಾಲು ಕಾಮೆಂಟ್ಸ್ ನೆಗೆಟಿವ್ ಆಗಿವೆ. ಕೆಲವರು ಟ್ರೇಲರ್ ನೋಡುವುದಕ್ಕಿಂತ ಕಾಮೆಂಟ್ಸ್ ಗಳೆ ಎಷ್ಟೋ ಚೆನ್ನಾಗಿದೆ ಎಂದಿದ್ದಾರೆ. ಕಾಮೆಂಟ್ಸ್ ಗಳೆ ಅಭಿಮಾನಿಗಳಿಗೆ ಖುಷಿ ನೀಡುತ್ತಿವೆ.

More from Filmibeat

English summary
Challenging star Darshan's 50 movie 'Kurukshetra' trailer got negative comments. Darshan fans unhappy with Producer Munirathna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X