For Quick Alerts
  ALLOW NOTIFICATIONS  
  For Daily Alerts

  ಅಮೆರಿಕಾದ ಎಷ್ಟು ಚಿತ್ರಮಂದಿರಗಳಲ್ಲಿ 'ಕುರುಕ್ಷೇತ್ರ' ಪ್ರದರ್ಶನ ಆಗುತ್ತಿದೆ

  |

  ಕರ್ನಾಟಕದ ತುಂಬ ದರ್ಶನ್ 'ಕುರುಕ್ಷೇತ್ರ' ಜಾತ್ರೆ ಶುರುವಾಗಿದೆ. ಕರ್ನಾಟಕ ಆಚೆಗೂ ದರ್ಶನ್ ತಮ್ಮ ಪವರ್ ತೋರಿಸಿದ್ದಾರೆ.

  ಅಮೆರಿಕಾದಲ್ಲಿ ಇಂದಿನಿಂದ ಚಿತ್ರದ ಪ್ರದರ್ಶನ ಶುರು ಆಗುತ್ತಿದೆ. ಲಾಸ್ ಎಂಜಲೀಸ್, ಸ್ಯಾನ್ ಜೋಸ್, ಕೇಂಬ್ರಿಡ್ಜ್, ಸಾವೊ ಪೌಲೊ, ನ್ಯೂಯಾರ್ಕ್ ಸೇರಿದಂತೆ ಸಾಕಷ್ಟು ನಗರಗಳಲ್ಲಿ ಸಿನಿಮಾ ಪ್ರದರ್ಶನ ಆಗುತ್ತಿದೆ. ವಿಶೇಷ ಅಂದರೆ, ಬರೀ ಅಮೆರಿಕಾದಲ್ಲಿಯೇ 48ಕ್ಕೂ ಹೆಚ್ಚು ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತಿದೆ.

  ಬರೋಬ್ಬರಿ ಸಾವಿರ ಸ್ಕ್ರೀನ್ ಗಳಲ್ಲಿ ದುರ್ಯೋಧನನ ದರ್ಶನ ಬರೋಬ್ಬರಿ ಸಾವಿರ ಸ್ಕ್ರೀನ್ ಗಳಲ್ಲಿ ದುರ್ಯೋಧನನ ದರ್ಶನ

  ದರ್ಶನ್ ನಟನೆಯ ಸಿನಿಮಾಗಳು ಈ ಹಿಂದೆಯೂ ವಿದೇಶಗಳಲ್ಲಿ ಬಿಡುಗಡೆ ಆಗಿದೆ. ಆದರೆ, 'ಕುರುಕ್ಷೇತ್ರ' ಕ್ರೇಜ್ ಬಹಳ ದೊಡ್ಡದಾಗಿದೆ. ಅಮೆರಿಕಾದಲ್ಲಿಯೇ ಹೀಗಿದ್ದ ಮೇಲೆ ಇನ್ನು ಕರ್ನಾಟಕದಲ್ಲಿ ಕೇಳುವುದೇ ಬೇಡ.

  ಸಾವಿರ ಸ್ಕ್ರೀನ್ ಗಳಲ್ಲಿ 'ಕುರುಕ್ಷೇತ್ರ' ಸಿನಿಮಾ ಪ್ರದರ್ಶನ ಆಗುತ್ತಿದೆ. ನಾಳೆ ಕನ್ನಡ ಮತ್ತು ತೆಲುಗು ಭಾಷೆಗಳಲ್ಲಿ ಮಾತ್ರ ಸಿನಿಮಾ ಬಿಡುಗಡೆ ಮಾಡಲಾಗುತ್ತಿದೆ. ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಇಂದು ಮಧ್ಯರಾತ್ರಿಯಿಂದ ಶೋ ಪ್ರಾರಂಭ ಆಗುತ್ತಿದೆ.

  English summary
  Challenging star Darshan's 'Kurukshetra' movie will be releasing today in America. Here is USA theater list.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X