ಬರೋಬ್ಬರಿ ಸಾವಿರ ಸ್ಕ್ರೀನ್ ಗಳಲ್ಲಿ ದುರ್ಯೋಧನನ ದರ್ಶನ

'ಕುರುಕ್ಷೇತ್ರ' ಸಿನಿಮಾ ನಾಳೆ (ಶುಕ್ರವಾರ) ಬಿಡುಗಡೆ ಆಗುತ್ತಿದೆ. ಇಂದು ರಾತ್ರಿಯಿಂದಲೇ ಕೆಲವು ಕಡೆ ಚಿತ್ರದ ಪ್ರದರ್ಶನ ಶುರು ಆಗುತ್ತಿದೆ.

ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅತಿ ಹೆಚ್ಚು ಚಿತ್ರಮಂದಿರಗಳ ಬಿಡುಗಡೆಯಾದ ಸಿನಿಮಾಗಳ ಪೈಕಿ 'ಕುರುಕ್ಷೇತ್ರ' ಕೂಡ ಒಂದಾಗಲಿದೆ. ಬರೋಬ್ಬರಿ 1 ಸಾವಿರ ಸ್ಕ್ರೀನ್ ಗಳಲ್ಲಿ ಸಿನಿಮಾ ರಿಲೀಸ್ ಆಗುತ್ತದೆ.

ಕನ್ನಡ ಮತ್ತು ತೆಲುಗು ಎರಡು ಭಾಷೆಗಳಲ್ಲಿ ಸಿನಿಮಾ ಬರುತ್ತಿದೆ. ಕರ್ನಾಟಕ, ಆಂಧ್ರ ಹಾಗೂ ತೆಲಂಗಾಣದ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಗೆ ಬರುತ್ತಿದೆ. ಚಿತ್ರ ಪ್ರದರ್ಶಕರ ಕಡೆಯಿಂದ ದೊಡ್ಡ ಬೇಡಿಕೆ ಬಂದ ಕಾರಣ ಇಷ್ಟೊಂದು ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಾಗುತ್ತಿದೆ.

kurukshetra kannada movie will be releasing in more than 1000 screens

2ಡಿ ಮತ್ತು 3ಡಿ ಎರಡು ವರ್ಷನ್ ಗಳಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದ್ದು, ಚಿತ್ರಮಂದಿರಗಳ ಸಂಖ್ಯೆ ಕೂಡ ಜಾಸ್ತಿಯಾಗಿದೆ. ಬೆಂಗಳೂರಿನ ಅನೇಕ ಚಿತ್ರಮಂದಿರಗಳಲ್ಲಿ ಇಂದು ರಾತ್ರಿಯಿಂದಲೇ ಸಿನಿಮಾದ ಪ್ರದರ್ಶನ ಪ್ರಾರಂಭ ಆಗುತ್ತಿದೆ.

ದರ್ಶನ್, ಅಂಬರೀಶ್, ರವಿಚಂದ್ರನ್, ಭಾರತಿ ವಿಷ್ಣುವರ್ಧನ್, ಅರ್ಜುನ್ ಸರ್ಜಾ, ರವಿಶಂಕರ್, ನಿಖಿಲ್ ಕುಮಾರ್, ಸ್ನೇಹ ಸೇರಿದಂತೆ ಅನೇಕ ಕಲಾವಿದರು ಸಿನಿಮಾದಲ್ಲಿ ನಟಿಸಿದ್ದಾರೆ. ನಾಗಣ್ಣ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಮುನಿರತ್ನ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಬಹಳ ವರ್ಷಗಳ ನಂತರ ಒಂದು ಪೌರಾಣಿಕ ಸಿನಿಮಾ ಕನ್ನಡದಲ್ಲಿ ಬರುತ್ತಿದ್ದು, ಚಿತ್ರದ ಮೇಲೆ ದೊಡ್ಡ ನಿರೀಕ್ಷೆ ಇದೆ.

More from Filmibeat

English summary
Challenging star Darshan's 'Kurukshetra' movie will be releasing in more than 1000 screens.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X