ಪಕ್ಕಾ ಆಯ್ತು 'ಕುರುಕ್ಷೇತ್ರ' ಆಡಿಯೋ ಬಿಡುಗಡೆಯ ದಿನಾಂಕ
ಇತ್ತೀಚಿಗಷ್ಟೆ 'ದಿ ವಿಲನ್' ಸಿನಿಮಾದ ಎರಡು ಟೀಸರ್ ಗಳು ಬಿಡುಗಡೆಯಾಗಿ ದೊಡ್ಡ ಸಂಚಲನವನ್ನು ಸೃಷ್ಟಿ ಮಾಡಿದೆ. ಆದರೆ ಈಗ ಅದರ ನಂತರ 'ಕುರುಕ್ಷೇತ್ರ' ಸಿನಿಮಾದ ಸರದಿ ಶುರುವಾಗಿದೆ.
'ಕುರುಕ್ಷೇತ್ರ' ದರ್ಶನ್ ಅವರ 50ನೇ ಸಿನಿಮಾವಾಗಿದ್ದು, ಈ ಚಿತ್ರದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಈ ಚಿತ್ರದ ಆಡಿಯೋಗಾಗಿ ದರ್ಶನ್ ಅಭಿಮಾನಿಗಳು ಕಾಯುತ್ತಿದ್ದಾರೆ. ಅಂದಹಾಗೆ, ಸಿನಿಮಾ ಹಾಡುಗಳು ಜುಲೈ 29ಕ್ಕೆ ಬಿಡುಗಡೆಯಾಗಲಿದೆ. ಅದ್ದೂರಿ ಕಾರ್ಯಕ್ರಮದ ಮೂಲಕ ಆಡಿಯೋ ಲಾಂಚ್ ಮಾಡುವ ಸಾಧ್ಯತೆ ಹೆಚ್ಚಿದೆ.
ಸಿನಿಮಾದಲ್ಲಿ ಒಟ್ಟು 4 ಹಾಡುಗಳು ಇದೆ. ಹರಿಕೃಷ್ಣ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ. ಈ ಮೂಲಕ ದರ್ಶನ್ - ಹರಿಕೃಷ್ಣ ಜೊತೆಗೆ ಮತ್ತೆ ಮುಂದುವರೆದಿದೆ. ಹಾಡುಗಳಿಗೆ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ. ನಾಗಣ್ಣ ನಿರ್ದೇಶನ ಹಾಗೂ ಮುನಿರತ್ನ ಚಿತ್ರದ ನಿರ್ಮಾಣ ಮಾಡಿದ್ದಾರೆ.

ಅಂದಹಾಗೆ, ಚಿತ್ರದಲ್ಲಿ ನಟ ದರ್ಶನ್, ಅಂಬರೀಶ್, ರವಿಚಂದ್ರನ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಸೋನು ಸೂದ್, ಶ್ರೀನಾಥ್, ರವಿಶಂಕರ್, ಹರಿಪ್ರಿಯಾ, ಡ್ಯಾನಿಶ್ ಅಖ್ತರ್, ಶಶಿಕುಮಾರ್ ಸೇರಿದಂತೆ ಅನೇಕರು ನಟಿಸಿದ್ದಾರೆ.


Click it and Unblock the Notifications











