Don't Miss!
- News
ಮನುಷ್ಯನ ಗಡ್ಡದಲ್ಲಿ ಕುಳಿತ ಸಾವಿರಾರು ಅಪಯಕಾರಿ ಜೇನುನೊಣಗಳು! ವಿಡಿಯೋ ವೈರಲ್
- Finance
ಹಿಂಡನ್ಬರ್ಗ್ vs ಅದಾನಿ ನಡುವೆ ಎಲ್ಐಸಿ, ಎಸ್ಬಿಐ ಉಳಿತಾಯ ರಿಸ್ಕ್ನಲ್ಲಿದೆಯೇ?
- Sports
SA Vs Eng 1st ODI: ಚೇಸಿಂಗ್ನಲ್ಲಿ ಎಡವಿದ ಇಂಗ್ಲೆಂಡ್ : ದಕ್ಷಿಣ ಆಫ್ರಿಕಾಗೆ 27 ರನ್ಗಳ ಜಯ
- Automobiles
ವೈರಲ್: ಬೆಂಗಳೂರಿನಲ್ಲಿ ಕಾಣಿಸಿಕೊಂಡಿತು ಹೊಚ್ಚ ಹೊಸ ವಾಹನ... ಇದರ ಬಗ್ಗೆ ಗೊತ್ತಾ?
- Lifestyle
2023ರಲ್ಲಿ ರಾಜಯೋಗದಿಂದಾಗಿ ಈ 4 ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನವಾಗಲಿದೆ
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಸಾಹೋ ಚಿತ್ರವನ್ನ ಹಿಂದಿಕ್ಕಿದ ದರ್ಶನ್ ಕುರುಕ್ಷೇತ್ರ
Recommended Video
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ 25 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಪೌರಾಣಿಕ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದ್ದು, ಬಾಕ್ಸ್ ಆಫೀಸ್ ನಲ್ಲೂ ಭರ್ಜರಿ ಗಳಿಕೆ ಕಂಡಿದೆ.
ಪ್ರಭಾಸ್ ಅಭಿನಯದ ಸಾಹೋ ಸಿನಿಮಾ ಕಳೆದ ವಾರವಷ್ಟೆ ತೆರೆಕಂಡಿದೆ. ಬಾಹುಬಲಿ ಚಿತ್ರದ ನಂತರ ಬಂದ ಈ ಚಿತ್ರದ ಮೇಲೆ ಭಾರಿ ನಿರೀಕ್ಷೆ ಇತ್ತು. ಸಾಹೋ ಆಗಮನ ಕನ್ನಡ ಸಿನಿಮಾಗಳ ಮೇಲೂ ಪರಿಣಾಮ ಬೀರುತ್ತೆ ಎಂಬ ಲೆಕ್ಕಾಚಾರ ಹಾಕಲಾಗಿತ್ತು.
'ಸಾಹೋ'
ಚೆನ್ನಾಗಿಲ್ಲ
ಅಂತಾರೆ:
5
ದಿನದ
ಕಲೆಕ್ಷನ್
ನೋಡಿದ್ರೆ
ಧೂಳೆಬ್ಬಿಸಿದೆ
ಆದರೆ ಸಿನಿಮಾ ಬಿಡುಗಡೆ ಆದ್ಮೇಲೆ ಎಲ್ಲವೂ ಉಲ್ಟಾಪಲ್ಟಾ ಆಗಿದೆ. ಸಾಹೋ ಆಟ ಕರ್ನಾಟಕದಲ್ಲಿ ನಿರೀಕ್ಷೆಯಂತೆ ನಡೆಯಲಿಲ್ಲ. ಇದರ ಪರಿಣಾಮ ಕುರುಕ್ಷೇತ್ರಕ್ಕೆ ಮತ್ತಷ್ಟು ಬಲ ಸಿಕ್ಕಿದೆ. ಅಷ್ಟಕ್ಕೂ, ಸಾಹೋ ಚಿತ್ರವನ್ನ ಕುರುಕ್ಷೇತ್ರ ಹಿಂದಿಕ್ಕಿದ್ದು ಹೇಗೆ? ಮುಂದೆ ಓದಿ....

ಸಾಹೋ ಚಿತ್ರಕ್ಕಿಂತ ಕುರುಕ್ಷೇತ್ರ ಬೆಸ್ಟ್
ಬುಕ್ ಮೈ ಶೋ ರೇಟಿಂಗ್ ನಲ್ಲಿ ಸಾಹೋ ಚಿತ್ರಕ್ಕಿಂತ ಕುರುಕ್ಷೇತ್ರ ಚಿತ್ರಕ್ಕೆ ಹೆಚ್ಚು ಲೈಕ್ಸ್ ಇದೆ. ಸಾಹೋ ಚಿತ್ರಕ್ಕೆ 2 ಲಕ್ಷಕ್ಕಿಂತ ಹೆಚ್ಚು ವೋಟ್ ಬಂದಿದೆ. ಆದರೆ, ಶೇಕಡಾ 72 ರಷ್ಟು ಜನ ಇಷ್ಟಪಟ್ಟಿದ್ದಾರೆ. ಕುರುಕ್ಷೇತ್ರ ಚಿತ್ರಕ್ಕೆ 65 ಸಾವಿರಕ್ಕೂ ಹೆಚ್ಚು ವೋಟ್ ಬಂದಿದೆ. ಶೇಕಡಾ 84 ರಷ್ಟು ಲೈಕ್ಸ್ ಬಂದಿದೆ. ಈ ವ್ಯತ್ಯಾಸ ನೋಡಿದ್ರೆ ಸಾಹೋ ಚಿತ್ರಕ್ಕಿಂತ ಕುರುಕ್ಷೇತ್ರಕ್ಕೆ ಶೇಕಡಾವಾರು ಲೆಕ್ಕದಲ್ಲಿ ಮುನ್ನಡೆ ಸಿಕ್ಕಿದೆ.
100
ಕೋಟಿ
ಕ್ಲಬ್
ಸೇರಿದ
'ಕುರುಕ್ಷೇತ್ರ':
ಸಂಭ್ರಮಿಸಿದ
ಸುಯೋಧನ

ಗಳಿಕೆಯಲ್ಲಿ ಸಾಹೋ ಸಕ್ಸಸ್
ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ಸಿಕ್ಕರೂ ಗಳಿಕೆಯಲ್ಲಿ ಮಾತ್ರ ಸಾಹೋ ಅಬ್ಬರ ನಿಂತಿಲ್ಲ. ಐದು ದಿನದಲ್ಲಿ ಸುಮಾರು 350 ಕೋಟಿ ಗಳಿಸಿದೆ. ಬರಿ ಹಿಂದಿಯಲ್ಲೇ ನೂರು ಕೋಟಿ ಗಳಿಸಿದೆ ಈ ಚಿತ್ರ. ಕರ್ನಾಟಕದಲ್ಲೂ ಉತ್ತಮ ಕಲೆಕ್ಷನ್ ಮಾಡಿದೆ ಎನ್ನಲಾಗಿದೆ.

ಕುರುಕ್ಷೇತ್ರ ಹಿಂದಿಯಲ್ಲಿ ತೆರೆಕಾಣಬೇಕಿದೆ
ದಕ್ಷಿಣ ಭಾರತದ ಭಾಷೆಗಳಲ್ಲಿ ತೆರೆಕಂಡಿರುವ ಕುರುಕ್ಷೇತ್ರ ಸಿನಿಮಾ ಹಿಂದಿಯಲ್ಲಿ ಇನ್ನು ಬಿಡುಗಡೆಯಾಗಿಲ್ಲ. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಯಲ್ಲಿ ಸಿನಿಮಾ ಬಂದಿದೆ. ಬಾಲಿವುಡ್ ನಲ್ಲಿ ತೆರೆಕಂಡ ಮೇಲೆ ಚಿತ್ರಕ್ಕೆ ಮತ್ತಷ್ಟು ಮೈಲೇಜ್ ಸಿಗಬಹುದು.
ಮುನಿರತ್ನ
ಹೀಗೆ
ಮಾಡಿದ್ರೆ
'ಕುರುಕ್ಷೇತ್ರ'
ಇನ್ನೂ
ಎತ್ತರಕ್ಕೆ
ಹೋಗ್ತಿತ್ತು.!

ಸಾಹೋ ಚಿತ್ರಕ್ಕೆ ಸಿಕ್ಕಿದ್ದು ಸೋಲಾ ಅಥವಾ ಗೆಲುವಾ?
ಸಾಹೋ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಗೆದ್ದಿರಬಹುದು. ಆದರೆ ಪ್ರೇಕ್ಷಕರ ಪ್ರಕಾರ ಸಿನಿಮಾ ಸೋತಿದೆ. ಕುರುಕ್ಷೇತ್ರ ಚಿತ್ರಕ್ಕೂ ನೆಗಿಟೀವ್ ಕಾಮೆಂಟ್ ಬಂದಿದೆ. ನೆಗಿಟೀವ್ ಕಾಮೆಂಟ್ ಗೆ ಹೋಲಿಸಿಕೊಂಡರೆ ಸಿನಿಮಾ ಮೆಚ್ಚಿಕೊಂಡವರ ಸಂಖ್ಯೆ ಹೆಚ್ಚಿದೆ. ನಾಲ್ಕು ವಾರದ ಬಳಿಕವೂ ಥಿಯೇಟರ್ ಹೌಸ್ ಫುಲ್ ಪ್ರದರ್ಶನ ಕಾಣುತ್ತಿರುವುದು ಇದಕ್ಕೆ ಸಾಕ್ಷಿ.