ದರ್ಶನ್ 'ಕುರುಕ್ಷೇತ್ರ' ಒಂದು ವಾರದಲ್ಲಿ ಮಾಡಿದ ಕಲೆಕ್ಷನ್ ಎಷ್ಟು?

'ಕೆಜಿಎಫ್' ಸಿನಿಮಾದ ನಂತರ ಅತಿ ದೊಡ್ಡ ಬಜೆಟ್ ನಲ್ಲಿ ನಿರ್ಮಾಣ ಆದ ಕನ್ನಡ ಸಿನಿಮಾ 'ಕುರುಕ್ಷೇತ್ರ'. ಹೀಗಾಗಿ ಈ ಸಿನಿಮಾದ ಕಲೆಕ್ಷನ್ ಬಗ್ಗೆ ಅಷ್ಟೇ ದೊಡ್ಡ ಕುತೂಹಲ ಇದೆ. ಈ ಸಿನಿಮಾ ನೂರು ಕೋಟಿ ಕ್ಲಬ್ ಸೇರಬೇಕು ಎನ್ನುವ ಆಸೆ ಅನೇಕರದ್ದಾಗಿದೆ.

ದರ್ಶನ್ ಎನ್ನುವ ಬ್ರಾಂಡ್ ಜೊತೆಗೆ ಬಂದ ಈ ಪೌರಾಣಿಕ ಸಿನಿಮಾ ದೊಡ್ಡ ಮಟ್ಟದ ಪ್ರತಿಕ್ರಿಯೆ ಪಡೆದಿದೆ. ಬಂಡವಾಳ ಹಾಕಿದ ಮುನಿರತ್ನ, ವಿತರಣೆ ಮಾಡಿದ ರಾಕ್ ಲೈನ್ ವೆಂಕಟೇಶ್ ಹಾಗೂ ಇಡೀ ಚಿತ್ರತಂಡ ಗೆಲುವಿನ ನಗೆ ಬೀರಿದೆ.

1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಸಿನಿಮಾ ಬಹುತೇಕ ಕಡೆ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಕನ್ನಡಿಗರು ಮಾತ್ರವಲ್ಲದೆ, ತೆಲುಗು ಪ್ರೇಕ್ಷಕರು ಸಹ ಸಿನಿಮಾವನ್ನು ಒಳ್ಳೆಯ ರೀತಿ ಸ್ವಾಗತ ಮಾಡಿದ್ದಾರೆ. ದುರ್ಯೋಧನನ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಸಿದ್ದಾನೆ.

ಒಂದು ವಾರದ ಗಳಿಕೆ ಎಷ್ಟು?

ಒಂದು ವಾರದ ಗಳಿಕೆ ಎಷ್ಟು?

'ಕುರುಕ್ಷೇತ್ರ' ಸಿನಿಮಾ ಮೊದಲ ವಾರ 30 ರಿಂದ 35 ಕೋಟಿ ಗಳಿಕೆ ಮಾಡಿದೆ ಎಂದು ಲೆಕ್ಕ ಹಾಕಲಾಗಿದೆ. ಕಳೆದ ಶುಕ್ರವಾರ ಬಿಡುಗಡೆಯಾದ ಸಿನಿಮಾ ಮೊದಲ ದಿನ 13 ಕೋಟಿ ಗಳಿಸುವ ಮೂಲಕ ಒಳ್ಳೆಯ ಓಪನಿಂಗ್ ಪಡೆದುಕೊಂಡಿತ್ತು. ಎರಡನೇ ದಿನ 10 ಕೋಟಿ ಕಲೆಕ್ಷನ್ ಆಗಿತ್ತು. ವೀಕೆಂಡ್ ಮತ್ತು ಬಕ್ರೀದ್ ಹಬ್ಬದ ರಜೆಗಳು ಸಿನಿಮಾದ ಕಲೆಕ್ಷನ್ ಗೆ ಸಹಾಯ ಮಾಡಿದೆ.

ತೆಲುಗಿನಿಂದಲೂ ಸಿಕ್ಕಿದೆ ಒಳ್ಳೆಯ ರೆಸ್ಪಾನ್ಸ್

ತೆಲುಗಿನಿಂದಲೂ ಸಿಕ್ಕಿದೆ ಒಳ್ಳೆಯ ರೆಸ್ಪಾನ್ಸ್

'ಕುರುಕ್ಷೇತ್ರ' ಪ್ಯಾನ್ ಇಂಡಿಯಾ ಸಿನಿಮಾ ಆಗಬೇಕು ಎನ್ನುವುದು ನಿರ್ಮಾಪಕ ಆಸೆ ಆಗಿತ್ತು. ಅದೇ ರೀತಿ ಸಿನಿಮಾ ಮೊದಲು ಕನ್ನಡ ಹಾಗೂ ತೆಲುಗಿನಲ್ಲಿ ಭಾಷೆಗಳಲ್ಲಿ ಬಿಡುಗಡೆ ಆಯ್ತು. ತೆಲುಗಿನಲ್ಲಿ ಸಿನಿಮಾ 1 ಕೋಟಿ ಗಡಿ ದಾಟಿ ಮುನ್ನುಗುತ್ತಿದೆ. ಸಿನಿಮಾದ ಕಲೆಕ್ಷನ್ ಮೇಲ್ಮುಖವಾಗಿ ಸಾಗುತ್ತಿದೆ. ಕೆನಡಾ ಮತ್ತು ಆಸ್ಟ್ರೇಲಿಯಾದಲ್ಲಿ ಸಿನಿಮಾ ಮೆಚ್ಚುಗೆ ಪಡೆದಿದೆ.

ನಾಳೆ ತಮಿಳಿನಲ್ಲಿ ಬಿಡುಗಡೆ

ನಾಳೆ ತಮಿಳಿನಲ್ಲಿ ಬಿಡುಗಡೆ

ಕನ್ನಡ ಮತ್ತು ತೆಲುಗಿನಲ್ಲಿ ಸಿಕ್ಕ ಪ್ರತಿಕ್ರಿಯೆಯಿಂದ ಖುಷಿಯಾಗಿರುವ ಚಿತ್ರತಂಡ ಈಗ ತಮಿಳಿನಲ್ಲಿಯೂ ಸಿನಿಮಾವನ್ನು ತರುತ್ತಿದೆ. ನಾಳೆ (ಆಗಸ್ಟ್ 15) ಸಿನಿಮಾ ತಮಿಳಿನಲ್ಲಿ ಬಿಡುಗಡೆ ಆಗುತ್ತಿದೆ. ನಿನ್ನೆ ತಮಿಳುನಾಡಿನಲ್ಲಿ ಸಿನಿಮಾದ ಪ್ರೆಸ್ ಮೀಟ್ ನಡೆದಿದ್ದು, ನಟ ದರ್ಶನ್ ಹಾಗೂ ಅರ್ಜುನ್ ಸರ್ಜಾ ಭಾಗಿಯಾಗಿದ್ದರು. ಉಳಿದಂತೆ, ಸದ್ಯದಲ್ಲಿಯೇ ಮಲೆಯಾಳಂ ಮತ್ತು ಹಿಂದಿ ಭಾಷೆಗಳಲ್ಲಿಯೂ ರಿಲೀಸ್ ಮಾಡುವ ಪ್ಲಾನ್ ಇದೆ.

ಉತ್ತರ ಕರ್ನಾಟಕ ಮಳೆ ಎಫೆಕ್ಟ್

ಉತ್ತರ ಕರ್ನಾಟಕ ಮಳೆ ಎಫೆಕ್ಟ್

ಉತ್ತರ ಕರ್ನಾಟಕದಲ್ಲಿ ಮಳೆ, ಪ್ರವಾಹ ಕುರುಕ್ಷೇತ್ರ ಸಿನಿಮಾಗೆ ಪರಿಣಾಮ ಬೀರಿದೆ. ಆ ಭಾಗದಲ್ಲಿ ದರ್ಶನ್ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದು, ಯಾವುದೇ ಸಿನಿಮಾ ಆದರೂ ಒಳ್ಳೆಯ ಗಳಿಕೆ ಮಾಡುತ್ತಿತ್ತು. ಆದರೆ, ನೆರೆ ಹಾವಳಿಯ ಸಮಯದಲ್ಲಿ 'ಕುರುಕ್ಷೇತ್ರ' ಬಿಡುಗಡೆ ಆಗಿದ್ದು, ಚಿತ್ರಕ್ಕೆ ಕೊಂಚ ಪೆಟ್ಟು ನೀಡಿದೆ.

More from Filmibeat

English summary
Challenging star Darshan's 'Kurukshetra' kannada movie collects morethan 30 crore in first week.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X