'ಕುರುಕ್ಷೇತ್ರ' ಸಿನಿಮಾದ ಅವಧಿ ಕೇಳಿದ್ರೆ ಆಶ್ಚರ್ಯ ಆಗುತ್ತೆ

Recommended Video

Kurukshetra Kannada Movie : ಕುರುಕ್ಷೇತ್ರ ಸಿನಿಮಾದ ಅವಧಿ ಎಷ್ಟಿರಬಹುದು ಊಹಿಸಿ? | FILMIBEAT KANNADA

ನಟ ದರ್ಶನ್ ಅವರ 'ಕುರುಕ್ಷೇತ್ರ' ಸಿನಿಮಾದ ಬಿಡುಗಡೆಗಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ, ನಿರ್ಮಾಪಕ ಮುನಿರತ್ನ ಅಂಡ್ ಟೀಂ ಮಾತ್ರ ಸಿನಿಮಾವನ್ನು ರಿಲೀಸ್ ಮಾಡಲು ಇನ್ನು ಮುಹೂರ್ತ ನಿಗದಿ ಮಾಡಿಲ್ಲ.

ಹಾಗೆ ನೋಡಿದರೆ, ಈ ವರ್ಷವೇ 'ಕುರುಕ್ಷೇತ್ರ' ಯುದ್ಧ ನಡೆಯಬೇಕಿತ್ತು. ಸಿನಿಮಾದ ಟೀಸರ್ ನಲ್ಲಿಯೂ 2018 ಬಿಡುಗಡೆ ಎಂದು ಘೋಷಣೆ ಮಾಡಲಾಗಿತ್ತು. ಆದರೆ, ಕಾರಣಾಂತರಗಳಿಂದ ಸಿನಿಮಾ ಮುಂದಕ್ಕೆ ಹೊಗುತ್ತಲೇ ಇದೆ. ಮೊದಲು ಸಿನಿಮಾವನ್ನ ನಾನು ನೋಡಿ ಆಮೇಲೆ ಬಿಡುಗಡೆಯ ದಿನ ಹೇಳುತ್ತೇನೆ ಎಂದಿದ್ದ ಮುನಿರತ್ನ ಬಿಡುಗಡೆಯ ಬಗ್ಗೆ ಅಧಿಕೃತವಾಗಿ ಇನ್ನೂ ಮಾತನಾಡಿಲ್ಲ.

ಅಂದಹಾಗೆ, ಇದೀಗ ಈ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಸೆನ್ಸಾರ್ ಆಗಿದೆ. ಇವುಗಳ ನಡುವೆಯೇ 'ಕುರುಕ್ಷೇತ್ರ' ಸಿನಿಮಾದ ಅವಧಿ ಕೇಳಿದರೆ ಆಶ್ಚರ್ಯ ಆಗುತ್ತಿದೆ. ಮುಂದೆ ಓದಿ..

3 ಗಂಟೆ 5 ನಿಮಿಷ

3 ಗಂಟೆ 5 ನಿಮಿಷ

ಹೀಗಿಗಾ.. ಎಲ್ಲ ಸಿನಿಮಾಗಳ ಅವಧಿ ಕಡಿಮೆ ಆಗಿದೆ. ಜನರಿಗೆ ಸಿನಿಮಾ ನೋಡುವ ತಾಳ್ಮೆ ಕಡಿಮೆ ಆದಂತೆ ಸಿನಿಮಾದ ಅವಧಿ ಕೂಡ ಇಳಿದಿದೆ. ಎರಡು ಗಂಟೆಗೆ ಮೇಲೆ ಸಿನಿಮಾ ಇದ್ದರೆ ಸಾಕು ನೋಡುಗರು ಆಕಳಿಸಲು ಶುರು ಮಾಡುತ್ತಾರೆ. ಇಂತಹ ದಿನದಲ್ಲಿಯೂ 'ಕುರುಕ್ಷೇತ್ರ' ಚಿತ್ರ 3 ಗಂಟೆ 5 ನಿಮಿಷ ಅವಧಿ ಹೊಂದಿದೆ.

ಪೌರಾಣಿಕ ಸಿನಿಮಾ

ಪೌರಾಣಿಕ ಸಿನಿಮಾ

'ಕುರುಕ್ಷೇತ್ರ' ಪೌರಾಣಿಕ ಸಿನಿಮಾ ಆಗಿರುವ ಕಾರಣ ಸಿನಿಮಾದ ಅವಧಿ ಹೆಚ್ಚಾಗಿದೆ. ಈ ರೀತಿಯ ಸಿನಿಮಾಗಳ ಅವಧಿ ಕಮರ್ಷಿಯಲ್ ಸಿನಿಮಾಗಳಿಗೆ ಹೋಲಿಕೆ ಮಾಡಿದರೆ ಹೆಚ್ಚು ಇರುತ್ತದೆ. ಸೋ, 'ಕುರುಕ್ಷೇತ್ರ' ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಹೋಗುವ ಮೊದಲೇ ಅದರ ಅವಧಿ ಬಗ್ಗೆ ಗಮನ ಇಟ್ಟುಕೊಳ್ಳುವುದು ಒಳ್ಳೆಯದು.

'ದಿ ವಿಲನ್' ಕೂಡ ಅಚ್ಚರಿ ಮೂಡಿಸಿತ್ತು

'ದಿ ವಿಲನ್' ಕೂಡ ಅಚ್ಚರಿ ಮೂಡಿಸಿತ್ತು

ನಟ ಶಿವರಾಜ್ ಕುಮಾರ್ ಹಾಗೂ ಸುದೀಪ್ ಅಭಿನಯದ 'ದಿ ವಿಲನ್' ಸಿನಿಮಾ ಕೂಡ ಅದರ ಅವಧಿಯ ಕಾರಣಕ್ಕೆ ಅಚ್ಚರಿ ಮೂಡಿಸಿತ್ತು. ಈ ಸಿನಿಮಾ ಬರೋಬ್ಬರಿ 175 ನಿಮಿಷ ಹೊಂದಿತ್ತು. ಕಮರ್ಷಿಯಲ್ ಸಿನಿಮಾ ಆಗಿದ್ದರೂ, ಇಬ್ಬರು ನಟರು ಇರುವ ಕಾರಣ ಚಿತ್ರದ ಅವಧಿ ಹೆಚ್ಚಾಗಿತ್ತು.

ಸೆನ್ಸಾರ್ ಆಗಿದೆ

ಸೆನ್ಸಾರ್ ಆಗಿದೆ

'ಕುರುಕ್ಷೇತ್ರ' ಸಿನಿಮಾ ಇದೀಗ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಯು ಎ ಪ್ರಮಾಣ ಪತ್ರವನ್ನ ನೀಡಲಾಗಿದೆ. 2D ಹಾಗೂ 3D ನಲ್ಲಿ ಸಿನಿಮಾ ಬಿಡುಗಡೆಯಾಗುತ್ತಿದೆ. ನಾಗಣ್ಣ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಹರಿಕೃಷ್ಣ ಸಂಗೀತ ಹಾಗೂ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ಬರೆದಿದ್ದಾರೆ.

ದೊಡ್ಡ ತಾರಾ ಬಳಗ

ದೊಡ್ಡ ತಾರಾ ಬಳಗ

'ಕುರುಕ್ಷೇತ್ರ' ದೊಡ್ಡ ತಾರಾ ಬಳಗವನ್ನ ಹೊಂದಿದೆ. ದರ್ಶನ್, ಅಂಬರೀಶ್, ಭಾರತಿ ವಿಷ್ಣುವರ್ಧನ್, ರವಿಚಂದ್ರನ್, ನಿಖಿಲ್ ಕುಮಾರ್, ಅರ್ಜುನ್ ಸರ್ಜಾ, ಸ್ನೇಹ, ಮೇಘನಾ ರಾಜ್ ಹೀಗೆ ಚಿತ್ರದಲ್ಲಿ ಅನೇಕ ಕಲಾವಿದರು ನಟಿಸಿದ್ದಾರೆ. ಚಿತ್ರದ ಟ್ರೇಲರ್ ಮತ್ತು ಹಾಡುಗಳು ಸದ್ಯದಲ್ಲಿಯೇ ಬರಲಿವೆ.

More from Filmibeat

English summary
Challenging star Darshan's 50th Movie 'Kurukshetra' movie duration is 3 hour 5 minutes.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X