ಕನ್ನಡದ ಬಳಿಕ ಇತರ ಭಾಷೆಗಳಲ್ಲಿ ಬರ್ತಿದೆ 'ಕುರುಕ್ಷೇತ್ರ' ಟ್ರೇಲರ್
'ಕುರುಕ್ಷೇತ್ರ' ಕನ್ನಡ ಸಿನಿಮಾದ ಇತ್ತೀಚಿಗೆ ಬಿಡುಗಡೆಯಾಗಿತ್ತು. ಟ್ರೇಲರ್ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೆಂಡಿಗ್ ನಲ್ಲಿ ಇದ್ದರೂ ಪಾಸಿಟಿವ್ ಗಿಂತ ನೆಗೆಟಿವ್ ಕಾಮೆಂಟ್ಸ್ ಗಳು ಹೆಚ್ಚಾಗಿದ್ದವು.
ಕನ್ನಡದ ಟ್ರೇಲರ್ ನ ಬಳಿಕ ಈಗ ಬೇರೆ ಬೇರೆ ಭಾಷೆಯಲ್ಲಿ ಚಿತ್ರದ ಟ್ರೇಲರ್ ಬಿಡುಗಡೆಯಾಗುತ್ತಿದೆ. ಇದೇ ಶುಕ್ರವಾರ (ಜುಲೈ 12) ಚಿತ್ರದ ಟ್ರೇಲರ್ ಅನ್ನು ರಿಲೀಸ್ ಮಾಡಲಾಗುತ್ತಿದೆ.
ಐದು ಭಾಷೆಗಳಲ್ಲಿ 'ಕುರುಕ್ಷೇತ್ರ' ಸಿನಿಮಾ ನಿರ್ಮಾಣ ಆಗಿದೆ. ಈಗಾಗಲೇ ಕನ್ನಡ ಚಿತ್ರದ ಟ್ರೇಲರ್ ಬಂದಿದ್ದು, ತೆಲುಗು, ತಮಿಳು, ಹಿಂದಿ, ಮಲೆಯಾಳಂ ಭಾಷೆಯ ಟ್ರೇಲರ್ ಹೊರ ಬರುತ್ತಿವೆ. ಟಿ ಸೀರಿಸ್ ಹಾಗೂ ಲಹರಿ ಮ್ಯೂಸಿಕ್ ನಲ್ಲಿ ಟ್ರೇಲರ್ ಅನ್ನು ನೋಡಬಹುದಾಗಿದೆ.

ಅಂದಹಾಗೆ, 'ಕುರುಕ್ಷೇತ್ರ' ಚಿತ್ರವನ್ನು ನಾಗಣ್ಣ ನಿರ್ಮಾಣ ಮಾಡಿದ್ದು, ಮುನಿರತ್ನ ನಿರ್ಮಾಣ ಇದೆ. ಹರಿಕೃಷ್ಣ ಸಂಗೀತ ಹಾಗೂ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯದಲ್ಲಿ ಹಾಡುಗಳು ಮೂಡಿವೆ.
ಇದೊಂದು ಬಹುತಾರಗಣದ ಚಿತ್ರವಾಗಿದ್ದು, ದರ್ಶನ್, ಅಂಬರೀಶ್, ರವಿಚಂದ್ರನ್, ಶಶಿಕುಮಾರ್, ಅರ್ಜುನ್ ಸರ್ಜಾ, ನಿಖಿಲ್ ಕುಮಾರ್, ಹರಿಪ್ರಿಯಾ, ಮೇಘನಾ ರಾಜ್, ಭಾರತಿ ವಿಷ್ಣುವರ್ಧನ್ ಸೇರಿದಂತೆ ಅನೇಕರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











