»   » ದರ್ಶನ್ ಕುರುಕ್ಷೇತ್ರ ಆಗಮನಕ್ಕೆ ಶುರುವಾಯ್ತು ಸಿದ್ದತೆ

ದರ್ಶನ್ ಕುರುಕ್ಷೇತ್ರ ಆಗಮನಕ್ಕೆ ಶುರುವಾಯ್ತು ಸಿದ್ದತೆ

Posted By:
Subscribe to Filmibeat Kannada
ದರ್ಶನ್ ಕುರುಕ್ಷೇತ್ರ ಆಗಮನಕ್ಕೆ ಶುರುವಾಯ್ತು ಸಿದ್ದತೆ | Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50 ನೇ ಸಿನಿಮಾ 'ಕುರುಕ್ಷೇತ್ರ' ತೆರೆಗೆ ಬರಲು ಸಿದ್ದವಾಗಿದೆ. ಸಿನಿಮಾ ಶೂಟಿಂಗ್ ಮುಗಿಸಿ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಬ್ಯುಸಿ ಆಗಿದ್ದಾರೆ. ನಾಗಣ್ಣ ಸಿನಿಮಾವನ್ನ ನಿರ್ದೇಶನ ಮಾಡಿದ್ದು, ಮುನಿರತ್ನ ಚಿತ್ರವನ್ನ ನಿರ್ಮಾಣ ಮಾಡಿದ್ದಾರೆ. ಐತಿಹಾಸಿಕ ಕಥಾಹಂದರವಿರುವ ಕುರುಕ್ಷೇತ್ರ ಕನ್ನಡ ಸಿನಿಮಾರಂಗದ ಹೈ ಬಜೆಟ್ ಚಿತ್ರವಾಗಿದ್ದು ಚಿತ್ರ ಆಗಮನಕ್ಕೆ ಭರದ ಸಿದ್ದತೆಗಳು ಮಾಡಿಕೊಳ್ಳಲಾಗುತ್ತಿದೆ.

ಈಗಾಗಲೇ ಸಿನಿಮಾತಂಡದ ವತಿಯಿಂದ ಆಡಿಯೋ ಬಿಡುಗಡೆ ಶೀಘ್ರದಲ್ಲೇ ಆಗಲಿದೆ ಎಂದು ಪೋಸ್ಟರ್ ಬಿಡುಗಡೆ ಮಾಡಿದ್ದು ಅಭಿಮಾನಿಗಳಲ್ಲಿ ಚಿತ್ರದ ಬಗ್ಗೆ ಮತ್ತಷ್ಟು ಕೌತುಕವನ್ನು ಉಂಟು ಮಾಡಿದೆ. ಇದೇ ತಿಂಗಳು ಕುರುಕ್ಷೇತ್ರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭ ನಡೆಯಲಿದ್ದು ಚಿತ್ರವನ್ನ ರಿಲೀಸ್ ಮಾಡಲು ನಿರ್ಮಾಪಕರು ಸಿದ್ದತೆಗಳನ್ನ ಮಾಡಿಕೊಳ್ಳುತ್ತಿದ್ದಾರೆ.

'ಕುರುಕ್ಷೇತ್ರ'ದಿಂದ ಹೊರಬಿದ್ದಿರುವ ಎಕ್ಸ್ ಕ್ಲೂಸಿವ್ ಫೋಟೋ ಇದು!

Kurukshetra movie poster put in front of theaters before release date scheduled

ಚಿತ್ರ ಬಿಡುಗಡೆ ದಿನಾಂಕ ನಿಗದಿ ಮಾಡುವ ಮುಂಚೆಯೇ ಚಿತ್ರದ ಪೋಸ್ಟರ್ ಗಳು ಥಿಯೇಟರ್ ಅಂಗಳದಲ್ಲಿ ರಾರಾಜಿಸುತ್ತಿವೆ. ಕುರುಕ್ಷೇತ್ರ ಸಿನಿಮಾದ ಪೋಸ್ಟರ್ ಗಳು ಜಾಲಹಳ್ಳಿ ಕ್ರಾಸ್ ನಲ್ಲಿರುವ ರಾಕ್ ಲೈನ್ ಮಾಲ್ ನಲ್ಲಿ ಹಾಕಲಾಗಿದೆ. ಇದರಿಂದ ಖುಷಿಯಾಗಿರುವ ದರ್ಶನ್ ಅಭಿಮಾನಿಗಳು ಚಿತ್ರಮಂದಿರಕ್ಕೆ ಭೇಟಿ ಕೊಟ್ಟು ದರ್ಶನ್ ಅವರ ಪೋಸ್ಟರ್ ಜೊತೆಯಲ್ಲಿ ಫೋಟೋಗಳನ್ನ ತೆಗೆದುಕೊಳ್ಳುತ್ತಿದ್ದಾರೆ.

Kurukshetra movie poster put in front of theaters before release date scheduled

ಕುರುಕ್ಷೇತ್ರ ಸಿನಿಮಾದಲ್ಲಿ ಅದ್ಧೂರಿ ತಾರಾಬಳಗವಿದ್ದು ದರ್ಶನ್ ಜೊತೆಯಾಗಿ ಮೇಘನಾ ರಾಜ್ ಅಭಿನಯಿಸಿದ್ದಾರೆ. ಇದೇ ಮೊದಲ ಬಾರಿಗೆ ದರ್ಶನ್ ದುರ್ಯೋಧನನಾಗಿ ಕಾಣಿಸಿಕೊಳ್ಳುತ್ತಿದ್ದು ಈಗಾಗಲೇ ಬಿಡುಗಡೆ ಆಗಿರುವ ಚಿತ್ರದ ಟೀಸರ್ ಹಾಗೂ ಪೋಸ್ಟರ್ ಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಚುನಾವಣೆಗೂ ಮುನ್ನವೇ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಆಗಲಿದೆ.

English summary
Kannada actor Darshan's starrer Kurukshetra movie is ready for release. The cinema poster was put in front of theaters before the cinema release date was scheduled. Kurukshetra is a big budget movie of Kannada industry.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X