Don't Miss!
- Lifestyle
ಫೆ.1ಕ್ಕೆ ಜಯ ಏಕಾದಶಿ: ಈ ರೀತಿ ಮಾಡಿದರೆ ದಾರಿದ್ರ್ಯ ಹೋಗಿ ಸಂಪತ್ತು ವೃದ್ಧಿಸುವುದು
- Automobiles
ಭಾರತದಲ್ಲಿ ಮೊದಲ ಬಾರಿಗೆ 2.5 ಕೋಟಿ ಕಾರುಗಳ ಮಾರಾಟ ಮೈಲಿಗಲ್ಲು ಸಾಧಿಸಿದ ಜನಪ್ರಿಯ ಕಂಪನಿ
- Sports
IND vs NZ: 2ನೇ ಟಿ20 ಪಂದ್ಯದಲ್ಲಿ ಕಳಪೆ ಪಿಚ್ ನಿರ್ಮಾಣ; ಲಕ್ನೋ ಪಿಚ್ ಕ್ಯುರೇಟರ್ ವಜಾ
- Finance
Economic Survey: ಶೇ.6-6.8 ಜಿಡಿಪಿ ಬೆಳವಣಿಗೆ, 3 ವರ್ಷದಲ್ಲೇ ಮಂದಗತಿ
- News
ವಾರಕ್ಕೊಮ್ಮೆ ದೆಹಲಿಗೆ ಓಡುವ ಸಿಎಂಗೆ ಫ್ರೀಡಂ ಪಾರ್ಕ್ಗೆ ಬರುವ ತಾಳ್ಮೆ ಇಲ್ಲವೇ? ಕಾಂಗ್ರೆಸ್ ಪ್ರಶ್ನೆ
- Technology
ಬಿಎಸ್ಎನ್ಎಲ್ನ ಈ ಪೋಸ್ಟ್ಪೇಯ್ಡ್ ಪ್ಲ್ಯಾನ್ ಬೆಲೆ ಅಗ್ಗ; ಆದ್ರೆ, ರೀಚಾರ್ಜ್ ಕಷ್ಟ!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
BIG NEWS: 2020 ಆಸ್ಕರ್ ರೇಸ್ ನಲ್ಲಿ ಕನ್ನಡದ ಏಕೈಕ ಚಿತ್ರ ಕುರುಕ್ಷೇತ್ರ.!
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಕುರುಕ್ಷೇತ್ರ ಸಿನಿಮಾ 2020ನೇ ಸಾಲಿನ ಆಸ್ಕರ್ ಪ್ರಶಸ್ತಿಗಾಗಿ ಭಾಗವಹಿಸಲು ರೇಸ್ ನಲ್ಲಿದೆ. ಭಾರತದ ಪೈಕಿ 28 ಚಿತ್ರಗಳ ಪಟ್ಟಿ ತಯಾರು ಮಾಡಿದ್ದು ಇದರಲ್ಲಿ ಕನ್ನಡದ ಏಕೈಕ ಚಿತ್ರ ಕುರುಕ್ಷೇತ್ರ ಸ್ಥಾನ ಪಡೆದುಕೊಂಡಿದೆ ಎಂಬ ಸುದ್ದಿ ಹೊರಬಿದ್ದಿದೆ.
ಮುನಿರತ್ನ
ಹೀಗೆ
ಮಾಡಿದ್ರೆ
'ಕುರುಕ್ಷೇತ್ರ'
ಇನ್ನೂ
ಎತ್ತರಕ್ಕೆ
ಹೋಗ್ತಿತ್ತು.!
2020ನೇ ಸಾಲಿನಲ್ಲಿ ಆಸ್ಕರ್ ಪ್ರಶಸ್ತಿಗೆ ಭಾರತದಿಂದ ಕಳುಹಿಸಬೇಕಾದ ಚಿತ್ರಗಳ ಆಯ್ಕೆ ಪ್ರಕ್ರಿಯೆ ಆರಂಭವಾಗಿದ್ದು, ವಿವಿಧ ಭಾಷೆಗಳ ಭಾರತ ಚಿತ್ರಗಳನ್ನ ಪಟ್ಟಿ ಮಾಡಲಾಗಿದೆ. ಈ ಕುರಿತು ಕೊಲ್ಕತ್ತಾದಲ್ಲಿ ಪ್ರಕ್ರಿಯೆ ಜರುಗುತ್ತಿದ್ದು, ಇದರಲ್ಲಿ ಡಿ ಬಾಸ್ ಸಿನಿಮಾ ಹೆಸರು ಇದೆ ಎಂಬುದು ವಿಶೇಷ. ಮುಂದೆ ಓದಿ....

ಕನ್ನಡದಿಂದ ಕುರುಕ್ಷೇತ್ರ ಮಾತ್ರ
ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ, ಸೇರಿದಂತೆ ವಿವಿಧ ಭಾಷೆಗಳ ಒಟ್ಟು 28 ಚಿತ್ರಗಳನ್ನ 2020ನೇ ಸಾಲಿನ ಆಸ್ಕರ್ ಪ್ರಶಸ್ತಿಗೆ ಕಳುಹಿಸಲು ಶಾರ್ಟ್ ಲಿಸ್ಟ್ ಮಾಡಲಾಗಿದೆ. ವಿಶೇಷ ಅಂದ್ರೆ ಈ 28 ಚಿತ್ರಗಳ ಪೈಕಿಯಲ್ಲಿ ಕನ್ನಡದಿಂದ ಅವಕಾಶ ಪಡೆದುಕೊಂಡಿರುವುದು ಕುರುಕ್ಷೇತ್ರ ಮಾತ್ರ.
ಸಾಹೋ
ಚಿತ್ರವನ್ನ
ಹಿಂದಿಕ್ಕಿದ
ದರ್ಶನ್
ಕುರುಕ್ಷೇತ್ರ

ತಮಿಳು ಮತ್ತು ತೆಲುಗಿನಲ್ಲಿ ಯಾವುದು?
ಕನ್ನಡದಿಂದ ಕುರುಕ್ಷೇತ್ರ ಆಯ್ಕೆಯಾಗಿದ್ದರೆ, ತಮಿಳಿನಲ್ಲಿ ವಡಾ ಚೆನ್ನೈ, ಸೂಪತ್ ಡಿಲೆಕ್ಸ್ ಆಯ್ಕೆಯಾಗಿದೆ. ತೆಲುಗಿನಲ್ಲಿ ಡಿಯರ್ ಕಾಮ್ರೇಡ್ ಮತ್ತು ಒತ್ತಾ ಸೆರುಪು ಸೈಜ್ 7 ಹಾಗೂ ಉಯಿರೆ ಚಿತ್ರಗಳು ಅರ್ಹತಾ ಪಟ್ಟಿಯಲ್ಲಿ ಅವಕಾಶ ಗಿಟ್ಟಿಸಿಕೊಂಡಿದೆ.

ಹಿಂದಿಯಲ್ಲಿ ಹೆಚ್ಚು ಚಿತ್ರಗಳು
ಸೌತ್ ಇಂಡಸ್ಟ್ರಿಯ ಐದಾರು ಚಿತ್ರಗಳು ಬಿಟ್ಟರೇ ಹಿಂದಿಯ ಹೆಚ್ಚು ಸಿನಿಮಾಗಳು ಈ ಪಟ್ಟಿಯಲ್ಲಿದೆ. ರಾಷ್ಟ್ರಪ್ರಶಸ್ತಿ ಪಡೆದ ಅಂಧಾದುನ್, ಕೇಸರಿ, ಗಲ್ಲಿ ಬಾಯ್, ಉರಿ, ಬದ್ಲಾ, ಬದಾಯಿ ಹೋ, ಆರ್ಟಿಕಲ್ 15 ಅಂತಹ ಚಿತ್ರಗಳು ಈ ಪಟ್ಟಿಯಲ್ಲಿದೆ.

ಇದು ಕೇವಲ ಶಾರ್ಟ್ ಲಿಸ್ಟ್ ಅಷ್ಟೇ
ಅಂದ್ಹಾಗೆ, ಇದು 2020ರ ಆಸ್ಕರ್ ಗೆ ಯಾವ ಚಿತ್ರಗಳನ್ನ ಕಳುಹಿಸಬೇಕು ಎಂಬ ಪ್ರಕ್ರಿಯೆ. ಇದರಲ್ಲಿ 28 ಚಿತ್ರಗಳನ್ನ ಕಿರುಪಟ್ಟಿ ಮಾಡಲಾಗಿದೆ. ಇಲ್ಲಿ ಆಯ್ಕೆಯಾದ ಎಲ್ಲ ಚಿತ್ರಗಳು ಆಸ್ಕರ್ ಗಾಗಿ ಆಯ್ಕೆಯಾಗಲ್ಲ. ಇದರಲ್ಲಿ ಕೆಲವೇ ಕೆಲವು ಚಿತ್ರಗಳ ಮಾತ್ರ ನಾಮಿನೇಷನ್ ಗೆ ಕಳುಹಿಸಲಾಗುತ್ತೆ. ಆದರೂ, ಈ ಪಟ್ಟಿಯಲ್ಲಿ ಒಂದು ಕನ್ನಡ ಸಿನಿಮಾ ಇದೆ ಎಂಬುದು ಖುಷಿಯ ವಿಚಾರ.