'ರಾಕ್ ಲೈನ್ ಮಾಲ್'ನಲ್ಲಿ ಮೊದಲ ದಿನ ಪೂರ್ತಿ 'ಕುರುಕ್ಷೇತ್ರ ಜಾತ್ರೆ'

Recommended Video

Kurukshetra Movie: ರಾಕ್ ಲೈನ್ ಮಾಲ್ನಲ್ಲಿ ಮೊದಲ ದಿನ ಪೂರ್ತಿ ಕುರುಕ್ಷೇತ್ರ ಜಾತ್ರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಪೌರಾಣಿಕ ಚಿತ್ರ ಕುರುಕ್ಷೇತ್ರ ಶುಕ್ರವಾರ ರಾಜ್ಯಾದ್ಯಂತ ತೆರೆಕಾಣಲಿದೆ. 2ಡಿ ಮತ್ತು 3ಡಿ ವರ್ಷನ್ ನಲ್ಲಿ ಡಿ ಬಾಸ್ ಸಿನಿಮಾ ಬರ್ತಿದ್ದು, ರಾಜ್ಯದ ಬಹುತೇಕ ಚಿತ್ರಮಂದಿರಗಳು ಮಧ್ಯರಾತ್ರಿ, ಬೆಳ್ಳಂಬೆಳಗ್ಗೆ ಪ್ರದರ್ಶನಕ್ಕೆ ಸಜ್ಜಾಗುತ್ತಿದೆ.

ಈ ಮಧ್ಯೆ ರಾಕ್ ಲೈನ್ ಮಾಲ್ ನಲ್ಲಿ ಕುರುಕ್ಷೇತ್ರ ಸಿನಿಮಾ ಎಷ್ಟು ಗಂಟೆಗೆ ಪ್ರದರ್ಶನವಾಗುತ್ತೆ, ಎಷ್ಟು ಶೋಗಳು ಇರಲಿವೆ, ಟಿಕೆಟ್ ಬೆಲೆ ಎಷ್ಟಿರಬಹುದು ಎಂಬ ಕುತೂಹಲ ಕಾಡುತ್ತಿದೆ. ಯಾಕಂದ್ರೆ, ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರವನ್ನ ರಾಕ್ ಲೈನ್ ವೆಂಕಟೇಶ್ ವಿತರಣೆ ಮಾಡ್ತಿದ್ದಾರೆ.

ರಾಕ್ ಲೈನ್ ಮಾಲ್ ಮಾಲೀಕರಾಗಿರುವ ರಾಕ್ ಲೈನ್ ಅವರು ತಮ್ಮದೇ ಚಿತ್ರವನ್ನ, ತಮ್ಮದೇ ಮಾಲ್ ನಲ್ಲಿ ಬಿಡುಗಡೆ ಮಾಡ್ತಿರುವುದು ಇಂತಹ ಕುತೂಹಲಕ್ಕೆ ಕಾರಣ. ಮುಂದೆ ಓದಿ....

ಮೊದಲ ದಿನ ಎಷ್ಟು ಶೋಗಳು

ಮೊದಲ ದಿನ ಎಷ್ಟು ಶೋಗಳು

ಜಾಲಹಳ್ಳಿ ಕ್ರಾಸ್ ನಲ್ಲಿರುವ ರಾಕ್ ಲೈನ್ ಮಾಲ್ (ಕಾರ್ನಿವಲ್ ಸಿನಿಮಾಸ್) ನಲ್ಲಿ ಕುರುಕ್ಷೇತ್ರ ಸಿನಿಮಾ ರಿಲೀಸ್ ಆಗ್ತಿದ್ದು, ಮೊದಲ ದಿನ ಒಟ್ಟು 16 ಶೋಗಳು ಪ್ರದರ್ಶನವಾಗಲಿದೆ. ಹದಿನಾಲ್ಕು ಸ್ಕ್ರೀನ್ ನಲ್ಲಿ 3ಡಿ, ಎರಡು ಸ್ಕ್ರೀನ್ ನಲ್ಲಿ 2ಡಿ ಸಿನಿಮಾ ಶೋ ಕಾಣಲಿದೆ.

ಕುರುಕ್ಷೇತ್ರ ಜಾತ್ರೆ

ಕುರುಕ್ಷೇತ್ರ ಜಾತ್ರೆ

ಬೆಳಿಗ್ಗೆ 3.30ಕ್ಕೆ ಮೊದಲ ಶೋ 3ಡಿ ವರ್ಷನ್ ನಲ್ಲಿ ಕುರುಕ್ಷೇತ್ರ ಪ್ರದರ್ಶನವಾಗಲಿದೆ. ನಂತರ 3.40ಕ್ಕೆ, 4ಕ್ಕೆ, 7ಕ್ಕೆ (ಎರಡು ಶೋ), 7.30ಕ್ಕೆ, 10.30ಕ್ಕೆ, 11ಕ್ಕೆ, ಮಧ್ಯಾಹ್ನ 2ಕ್ಕೆ, 2.45ಕ್ಕೆ, 5.30ಕ್ಕೆ, 6.30ಕ್ಕೆ, 9.15ಕ್ಕೆ, ರಾತ್ರಿ 10 ಗಂಟೆಗೆ ಕೊನೆಯ ಶೋ ನಡೆಯಲಿದೆ. ಬೆಳಿಗ್ಗೆ 3.50ಕ್ಕೆ ಮತ್ತು 7.15ಕ್ಕೆ 2ಡಿ ವರ್ಷನ್ ನಲ್ಲಿ ಕುರುಕ್ಷೇತ್ರ ಪ್ರದರ್ಶನವಾಗಲಿದೆ.

ಟಿಕೆಟ್ ಸೋಲ್ಡ್ ಔಟ್.!

ಟಿಕೆಟ್ ಸೋಲ್ಡ್ ಔಟ್.!

ರಾಕ್ ಲೈನ್ ಮಾಲ್ ನಲ್ಲಿ ಬಹುತೇಕ ಎಲ್ಲ ಶೋಗಳ ಟಿಕೆಟ್ ಸೋಲ್ಡ್ ಔಟ್ ಆಗಿದೆ. 3ಡಿ ವರ್ಷನ್ ಸ್ಕ್ರೀನ್ ನಲ್ಲಿ ಅಲ್ಲೊಂದು ಇಲ್ಲೊಂದು ಸೀಟ್ ಖಾಲಿ ಇದೆ. ಇನ್ನು 2ಡಿ ವರ್ಷನ್ ನಲ್ಲಿ ಟಿಕೆಟ್ ಖಾಲಿ ಇದೆ. ಬುಕ್ ಮಾಡಬಹುದು.

3ಡಿಗೆ ಹೆಚ್ಚಿದ ಬೇಡಿಕೆ

3ಡಿಗೆ ಹೆಚ್ಚಿದ ಬೇಡಿಕೆ

ಕುರುಕ್ಷೇತ್ರ ಅಂತಹ ಪೌರಾಣಿಕ ಚಿತ್ರವನ್ನ 3ಡಿಯಲ್ಲಿ ನೋಡುವ ಅವಕಾಶ ಸಿಕ್ಕಿರುವುದು ಅಪರೂಪ ಮತ್ತು ಅದೃಷ್ಟ. ಹಾಗಾಗಿ, ಹೆಚ್ಚಿನ ಜನ 3ಡಿ ವರ್ಷನ್ ನಲ್ಲಿ ಸಿನಿಮಾ ನೋಡಲು ಆಸಕ್ತಿ ತೋರುತ್ತಿದ್ದಾರೆ. ಈ ಹಿನ್ನಲೆಯಲ್ಲಿ 2ಡಿ ವರ್ಷನ್ ಗಿಂತ 3ಡಿಗೆ ಬೇಡಿಕೆ ಹೆಚ್ಚಿದೆ.

More from Filmibeat

English summary
Darshan starrer 50th movie kurukshetra will releasing in huge number of screens at rockline mall.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X