ಅಂದುಕೊಂಡದ್ದಕ್ಕಿಂತ ಮುಂಚೆಯೇ ನಡೆಯಲಿದೆ 'ಕುರುಕ್ಷೇತ್ರ' ಯುದ್ಧ

By Pavithra

Recommended Video

ಅಂದುಕೊಂಡದ್ದಕ್ಕಿಂತ ಮುಂಚೆಯೇ ನಡೆಯಲಿದೆ 'ಕುರುಕ್ಷೇತ್ರ' ಯುದ್ಧ | Filmibeat Kannada

ಮುನಿರತ್ನ ನಿರ್ಮಾಣದ 'ಕುರುಕ್ಷೇತ್ರ' ಚಿತ್ರದ ಶೂಟಿಂಗ್ ಭರದಿಂದ ಸಾಗಿದೆ. ಬಹುಕೋಟಿ ವೆಚ್ಚದ ಅದ್ದೂರಿ ಸಿನಿಮಾ ಇದಾಗಿದ್ದು, ಕನ್ನಡ ಚಿತ್ರರಂಗದಲ್ಲೇ ಹೊಸ ಇತಿಹಾಸವನ್ನು ಬರೆಯಲಿದ್ದಾರೆ ನಿರ್ಮಾಪಕರಾದ ರಾಕ್ ಲೈನ್ ವೆಂಕಟೇಶ್ ಹಾಗೂ ಮುನಿರತ್ನ. ಇನ್ನು ಅಂದುಕೊಂಡಂದಕ್ಕಿಂತ ಮುಂಚಿತವಾಗಿಯೇ ಚಿತ್ರೀಕರಣ ಮುಗಿಸಲು ನಿರ್ದೇಶಕ ನಾಗಣ್ಣ ಪ್ಲಾನ್ ಮಾಡಿದ್ದಾರೆ.

ಫೆಬ್ರವರಿಯಲ್ಲಿ ಸಿನಿಮಾ ರಿಲೀಸ್ ಮಾಡಬೇಕೆಂದು ಯೋಚಿಸಿದ ಚಿತ್ರತಂಡ ಅದಕ್ಕೂ ಮುಂಚಿತವಾಗಿಯೇ ಚಿತ್ರವನ್ನು ರಿಲೀಸ್ ಮಾಡುವ ಸಾಧ್ಯತೆಗಳು ಹೆಚ್ಚಾಗಿವೆ. ಮಾಮೂಲಿ ಕಮರ್ಶಿಯಲ್ ಸಿನಿಮಾಗಳಿಗೂ 'ಕುರುಕ್ಷೇತ್ರ' ಚಿತ್ರಕ್ಕೂ ಸಾಕಷ್ಟು ವ್ಯತ್ಯಾಸವಿದ್ದು ನೂರಾರು ತಂತ್ರಜ್ಞರು 'ಕುರುಕ್ಷೇತ್ರ' ಚಿತ್ರಕ್ಕಾಗಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

ಅಂದಹಾಗೆ, 'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಯ್ತಾ? ದರ್ಶನ್ ಇನ್ನೂ ಹೈದ್ರಾಬಾದ್ ನಲ್ಲಿಯೇ ಇದ್ದಾರಾ? ಅಥವಾ ಚಿತ್ರೀಕರಣ ಬಾಕಿ ಉಳಿದಿದ್ಯಾ ಇವೆಲ್ಲವುದರ ಕಂಪ್ಲೀಟ್ ವಿವರ ಮುಂದಿದೆ ಓದಿ..

ಜನವರಿಯಲ್ಲೇ 'ಕುರುಕ್ಷೇತ್ರ' ರಿಲೀಸ್

ಜನವರಿಯಲ್ಲೇ 'ಕುರುಕ್ಷೇತ್ರ' ರಿಲೀಸ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕುರುಕ್ಷೇತ್ರ' ಸಿನಿಮಾ ಫೆಬ್ರವರಿಯಲ್ಲಿ ತೆರೆಗೆ ಬರಲಿದೆ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಮೂಲಗಳ ಪ್ರಕಾರ ವರ್ಷದ ಪ್ರಾರಂಭದಲ್ಲಿ ಅಂದರೆ ಜನವರಿ ಅಂತ್ಯಕ್ಕೆ ಚಿತ್ರ ಬಿಡುಗಡೆಯಾಗುವ ಸಾಧ್ಯತೆಗಳು ಹೆಚ್ಚಾಗಿದೆಯಂತೆ.

ಅದ್ದೂರಿ ಸಾಹಸ ದೃಶ್ಯಗಳ ಚಿತ್ರೀಕರಣ

ಅದ್ದೂರಿ ಸಾಹಸ ದೃಶ್ಯಗಳ ಚಿತ್ರೀಕರಣ

'ಕುರುಕ್ಷೇತ್ರ' ಚಿತ್ರದಲ್ಲಿ ದುರ್ಯೋಧನ ಹಾಗೂ ಭೀಮನ ಮಧ್ಯೆ ನಡೆಯುವ ಯುದ್ಧನ ದೃಶ್ಯಗಳ ಚಿತ್ರೀಕರಣದಲ್ಲಿ ಸಿನಿಮಾ ತಂಡ ಭಾಗಿಯಾಗಿದೆ. ಕಣಲ್ ಕಣ್ಣನ್ ಸಾಹಸ ನಿರ್ದೇಶನ ಮಾಡುತ್ತಿದ್ದಾರೆ.

ಹಾಡಿನ ಚಿತ್ರೀಕರಣ ಮೂಲಕ ಶೂಟಿಂಗ್ ಕಂಪ್ಲೀಟ್

ಹಾಡಿನ ಚಿತ್ರೀಕರಣ ಮೂಲಕ ಶೂಟಿಂಗ್ ಕಂಪ್ಲೀಟ್

ಸದ್ಯ ಸಾಹಸ ದೃಶ್ಯಗಳನ್ನು ಚಿತ್ರೀಕರಣ ಮಾಡುತ್ತಿರುವ 'ಕುರುಕ್ಷೇತ್ರ' ಸಿನಿಮಾ ತಂಡ ಇದಾದ ನಂತರ ಹಾಡಿನ ಚಿತ್ರೀಕರಣ ಶುರು ಮಾಡಲಿದೆ. ಮೇಘನಾ ರಾಜ್ ಹಾಗೂ ದರ್ಶನ್ ಇಬ್ಬರು ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಾಂಗ್ ಶೂಟಿಂಗ್ ಗಾಗಿ ಅದ್ದೂರಿ ಸೆಟ್ ರೆಡಿ ಮಾಡಲಾಗಿದೆ.

ಆದಷ್ಟು ಬೇಗ ಬೆಳ್ಳಿತೆರೆ ಮೇಲೆ ಸಿನಿಮಾ

ಆದಷ್ಟು ಬೇಗ ಬೆಳ್ಳಿತೆರೆ ಮೇಲೆ ಸಿನಿಮಾ

'ಕುರುಕ್ಷೇತ್ರ' ಚಿತ್ರವನ್ನು ಆದಷ್ಟು ಬೇಗ ಕನ್ನಡ ಸಿನಿಮಾ ಪ್ರೇಕ್ಷಕರ ಮುಂದೆ ತರುವ ಹಿನ್ನಲೆಯಲ್ಲಿ ಚಿತ್ರತಂಡ ಹಗಲು-ರಾತ್ರಿ ಲೆಕ್ಕಿಸದೇ ಕೆಲಸ ಮಾಡುತ್ತಿದೆ. ಒಂದೆಡೆ ಡಬ್ಬಿಂಗ್ ಕೆಲಸಗಳು ನಡೆಯುತ್ತಿದ್ದರೆ ಮತ್ತೊಂದೆಡೆ ಸಿ,ಜಿ ಮತ್ತು ಗ್ರಾಫಿಕ್ಸ್ ಕೆಲಸಗಳು ಮುಂದುವರೆಯುತ್ತಿದೆ. ಆನ್ ಲೈನ್ ಎಡಿಟಿಂಗ್ ಆಗುತ್ತಿದ್ದು ಚಿತ್ರೀಕರಣ ಮುಗಿಯುತ್ತಿದ್ದಂತೆ ಕೆಲವೇ ಕೆಲವು ದಿನಗಳಲ್ಲಿ ಪ್ರೇಕ್ಷಕರ ಎದುರು ಸಿನಿಮಾ ಬರಲಿದೆ.

More from Filmibeat

English summary
Challenging star Darshan's Kurukshetra movie is likely to be released by the end of January 2018. The movie is Directed by Naganna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X