ಅಭಿಮಾನಿಗಳ ಒತ್ತಾಯದ ಮೇರೆಗೆ ಸಿಹಿ ಸುದ್ದಿ ನೀಡಿದ ದರ್ಶನ್

ಕನ್ನಡದ ಮೆಗಾ ಸಿನಿಮಾ ಎಂದು ಗುರುತಿಸಿಕೊಂಡಿರುವ ಕುರುಕ್ಷೇತ್ರ ಆಗಸ್ಟ್ 2 ರಂದು ಬಿಡುಗಡೆಯಾಗುತ್ತಿದೆ. ದರ್ಶನ್ ದುರ್ಯೋಧನನಾಗಿ ನಟಿಸಿದ್ದು, ರವಿಚಂದ್ರನ್, ಅರ್ಜುನ್ ಸರ್ಜಾ, ರವಿಶಂಕರ್, ಮೇಘನಾ ರಾಜ್, ಸ್ನೇಹ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿರುವ ಈ ಚಿತ್ರ 2ಡಿ ಹಾಗೂ 3ಡಿಯಲ್ಲಿ ತೆರೆಕಾಣುತ್ತಿದೆ.

ಸಿನಿಮಾ ರಿಲೀಸ್ ಗೂ ಮುಂಚೆ ಹಾಡುಗಳು ಅಬ್ಬರ ಮಾಡುತ್ತಿದ್ದು, ಈ ಮಧ್ಯೆ ಕುರುಕ್ಷೇತ್ರ ಟ್ರೈಲರ್ ವೊಂದನ್ನ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಆದರೆ, ಈ ಟ್ರೈಲರ್ ನ್ನ ಹೊಗಳಿಕೆಗಿಂತ ತೆಗಳಿಕೆಯೇ ಹೆಚ್ಚು.

ಯಾಕಂದ್ರೆ, ಈ ಹಿಂದೆ ಬಂದಿದ್ದ ಟೀಸರ್ ಗಳ ದೃಶ್ಯಕ್ಕೆ ಒಂದೇ ಒಂದು ಹೊಸ ದೃಶ್ಯ ಸೇರಿಸಿ ಟ್ರೈಲರ್ ಎಂದು ಬಿಟ್ಟಿದ್ದರು. ಅದಕ್ಕೆ ತೀವ್ರವಾಗಿ ಬೇಸರ ವ್ಯಕ್ತಪಡಿಸಿದ್ದ ಅಭಿಮಾನಿಗಳು ಹೊಸ ಟ್ರೈಲರ್ ರಿಲೀಸ್ ಮಾಡುವಂತೆ ಒತ್ತಾಯ ಮಾಡಿದ್ದರು.

kurukshetra new trailer release on july 24th

ಇದೀಗ, ಅಭಿಮಾನಿಗಳ ಒತ್ತಾಯಕ್ಕೆ ಮಣಿದ ಡಿ ಬಾಸ್ ದರ್ಶನ್ ಮತ್ತು ಕುರುಕ್ಷೇತ್ರ ಚಿತ್ರತಂಡ, ಹೊಸ ಟ್ರೈಲರ್ ಬಿಡುಗಡೆ ಮಾಡುವುದಾಗಿ ಘೋಷಿಸಿದ್ದಾರೆ. ಜುಲೈ 24 ರಂದು ಮಧ್ಯಾಹ್ನ 2 ಗಂಟೆಗೆ ಅಧಿಕೃತವಾಗಿ ಲಹರಿ ಅಥವಾ ಟಿ-ಸಿರೀಸ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಲಿದೆ.

ಅಂದ್ಹಾಗೆ, ಇಂತಹ ಮಗಾ ಪೌರಾಣಿಕ ಚಿತ್ರವನ್ನ ನಾಗಣ್ಣ ಅವರು ನಿರ್ದೇಶನ ಮಾಡಿದ್ದಾರೆ. ರಾಜರಾಜೇಶ್ವರಿ ನಗರ ಶಾಸಕ ಮುನಿರತ್ನ ಅವರು ನಿರ್ಮಾಣ ಮಾಡಿದ್ದಾರೆ. ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದು. ಡಾ ವಿ.ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದಾರೆ.

More from Filmibeat

English summary
Darshan, arjun sarja, ravichandran, meghana raj, sneha starrer kurukshetra new trailer will release on july 24th. the movie directed by naganna and produced by munirathna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X