twitter
    For Quick Alerts
    ALLOW NOTIFICATIONS  
    For Daily Alerts

    ಚುನಾವಣಾ ಅಕ್ರಮ ಪ್ರಕರಣದಲ್ಲಿ 'ಕುರುಕ್ಷೇತ್ರ' ನಿರ್ಮಾಪಕ ಮುನಿರತ್ನ ಖುಲಾಸೆ

    |

    ವಿಧಾನ ಸಭಾ ಚುನಾವಣೆ ವೇಳೆ ಅಕ್ರಮವೆಸಿಗಿದ್ದ ಪ್ರಕರಣದಿಂದ ರಾಜರಾಜೇಶ್ವರಿನಗರ ಶಾಸಕ ಮುನಿರತ್ನ ಖುಲಾಸೆಗೊಂಡಿದ್ದಾರೆ. ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಚುನಾವಣಾ ಪ್ರಕರಣದಿಂದ ಮುನಿರತ್ನಗೆ ಕ್ಲೀನ್ ಚಿಟ್ ಸಿಕ್ಕಿದೆ.

    ಈ ಪ್ರಕರಣದ ವಿಚಾರಣೆ ನಡೆಸಿದ್ದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಕೇಸ್ ಖುಲಾಸೆಗೊಳಿಸಿ ಆದೇಶ ಪ್ರಕಟಿಸಿದೆ. 2013ರಲ್ಲಿ ಚುನಾವಣಾ ಅಕ್ರಮ ಎಸಗಿ ಅಧಿಕಾರಿ ರವಿಕುಮಾರ್ ಅವರಿಗೆ ಜೀವ ಬೆದರಿಕೆ ಹಾಕಿದ್ದಾರೆ ಎನ್ನುವ ಆರೋಪ ಮುನಿರತ್ನ ಅವರ ಮೇಲೆ ಕೇಳಿ ಬಂದಿತ್ತು.

    ಆರೋಪ ಸಾಬೀತು ಪಡಿಸಲು ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಪ್ರಕರಣದಿಂದ ಮುನಿರತ್ನ ಅವರು ಖುಲಾಸೆಗೊಂಡಿದ್ದಾರೆ. ಇನ್ನು 2018ರ ವಿಧಾನಸಭೆ ಚುನಾವಣೆ ವೇಳೆಯೂ ರಾಜರಾಜೇಶ್ವರಿನಗರದ ಮನೆಯೊಂದರಲ್ಲಿ ಸಾವಿರಾರು ನಕಲು ಮತದಾರರ ಚೀಟಿ ಲಭ್ಯವಾಗಿತ್ತು. ಇದರಲ್ಲಿ ಶಾಸಕ ಮುನಿರತ್ನ ಅವರ ಕೈವಾಡ ಇದೆ ಎಂಬ ಆರೋಪ ಕೇಳಿಬಂದಿತ್ತು.

    Kurukshetra producer muniratna got clean chit in election mall pratice case

    ಮುನಿರತ್ನ ಅವರು ಕನ್ನಡ ಚಿತ್ರರಂಗದ ಹಿರಿಯ ನಿರ್ಮಾಪಕರೂ ಹೌದು. ರಕ್ತ ಕಣ್ಣೀರು, ಕಠಾರವೀರ ಸುರಸುಂದರಾಂಗಿ ಹಾಗೂ ಇತ್ತೀಚಿನ ಕುರುಕ್ಷೇತ್ರ ಅಂತಹ ದೊಡ್ಡ ಸಿನಿಮಾಗಳನ್ನ ನಿರ್ಮಾಣ ಮಾಡಿದ್ದಾರೆ.

    English summary
    Rajarajeshwari nagar MLA and producer muniratna was discharged by lower court in election mall practice case.
    Tuesday, January 29, 2019, 17:48
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X