ಶನಿವಾರ ಸಿಹಿ ಸುದ್ದಿ ನೀಡಲಿದ್ದಾರೆ ಮುನಿರತ್ನ: ಆದ್ರೂ ಒಂದು ಟೆನ್ಷನ್

ಸ್ಯಾಂಡಲ್ ವುಡ್ ಚಿತ್ತ ಶನಿವಾರದತ್ತ ಬಿದ್ದಿದೆ. ಯಾಕಂದ್ರೆ, ಕುರುಕ್ಷೇತ್ರ ಚಿತ್ರಕ್ಕೆ ಸಂಬಂಧಪಟ್ಟಂತೆ ನಿರ್ಮಾಪಕ ಮುನಿರತ್ನ ಸುದ್ದಿಗೋಷ್ಠಿ ಕರೆದಿದ್ದು, ಆ ದಿನ ಮಹತ್ವದ ಮಾಹಿತಿ ನೀಡುವ ಸಾಧ್ಯತೆ ಇದೆ.

ಸಿನಿಮಾ ಶೂಟಿಂಗ್ ಮುಗಿದು ಬಹಳ ದಿನ ಆಗಿದೆ. ಆದರೂ ಚಿತ್ರ ಬಿಡುಗಡೆಯಾಗುತ್ತಿಲ್ಲ. ಇದರಿಂದ ಸಹಜವಾಗಿ ಅಭಿಮಾನಿಗಳಿಗೆ ಬೇಸರವಾಗಿತ್ತು. ಆದ್ರೆ, ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಮುನಿರತ್ನ ಸಿನಿಮಾ 'ನಾನು ಅಂದುಕೊಂಡಂತೆ ಬರಬೇಕು, ಆಮೇಲೆ ಯಾವುದೇ ಚಿತ್ರ ಥಿಯೇಟರ್ ನಲ್ಲಿದ್ರೂ ನನ್ನ ಸಿನಿಮಾವನ್ನ ರಿಲೀಸ್ ಮಾಡುತ್ತೇನೆ' ಅಂದಿದ್ರು.

ಇದೀಗ, ಆ ಸಮಯ ಬಂದಂತೆ ಕಾಣುತ್ತಿದೆ. ಐದು ಭಾಷೆಯಲ್ಲಿ ಮೂಡಿಬರುತ್ತಿರುವ ಕುರುಕ್ಷೇತ್ರ ಸಿನಿಮಾ ಬಿಡುಗಡೆ ಸಜ್ಜಾಗಿದೆ. ಈ ವಾರಾಂತ್ಯದಲ್ಲಿ ಸ್ವತಃ ನಿರ್ಮಾಪಕರೇ ಆ ದಿನವನ್ನ ಅಧಿಕೃತವಾಗಿ ಹೇಳಲಿದ್ದಾರೆ. ಆದ್ರೂ ಇಲ್ಲೊಂದು ಟೆನ್ಷನ್ ಕಾಡ್ತಿದೆ. ಏನದು? ಮುಂದೆ ಓದಿ.....

ರಿಲೀಸ್ ಡೇಟ್ ಪ್ರಕಟ

ರಿಲೀಸ್ ಡೇಟ್ ಪ್ರಕಟ

ಚಿತ್ರದ ಪೋಸ್ಟ್ ಪ್ರಡೊಕ್ಷನ್ ಬಹುತೇಕ ಮುಗಿದಿದೆ. ಕನ್ನಡ ವರ್ಷನ್ ಗೆ ಸೆನ್ಸಾರ್ ಕೂಡ ಆಗಿದೆ. ಹೀಗಾಗಿ, ತೆರೆಮೇಲೆ ಬರಲು ಕುರುಕ್ಷೇತ್ರ ಸಜ್ಜಾಗಿದೆ. ಸೋ, ಕುರುಕ್ಷೇತ್ರ ಯಾವಾಗ ರಿಲೀಸ್ ಎಂಬ ಮಾಹಿತಿಯನ್ನ ಶನಿವಾರ ಸಂಜೆ ಖಾಸಗಿ ಹೋಟೆಲ್ ನಲ್ಲಿ ನಿರ್ಮಾಪಕ ಮುನಿರತ್ನ ಅವರು ಬಹಿರಂಗಪಡಿಸಲಿದ್ದಾರೆ.

ಪ್ರೆಸ್ ಮೀಟ್ ಗೆ ಯಾರು ಬರ್ತಾರೆ, ಯಾರು ಬರಲ್ಲಾ?

ಪ್ರೆಸ್ ಮೀಟ್ ಗೆ ಯಾರು ಬರ್ತಾರೆ, ಯಾರು ಬರಲ್ಲಾ?

ಕುರುಕ್ಷೇತ್ರ ಪ್ರೆಸ್ ಮೀಟ್ ಅಂದಾಕ್ಷಣ ಯಾರು ಬರ್ತಾರೆ ಯಾರೂ ಬರಲ್ಲ ಎನ್ನುವುದೇ ದೊಡ್ಡ ಕುತೂಹಲವಾಗಿದೆ. ಯಾಕಂದ್ರೆ, ಮಂಡ್ಯ ಚುನಾವಣೆಯಲ್ಲಿ ವಿರೋಧಿಗಳಂತೆ ಪ್ರಚಾರ ಮಾಡಿದ್ದವರು ಈಗ ಸುದ್ದಿಗೋಷ್ಠಿಯಲ್ಲಿ ಒಟ್ಟಿಗೆ ವೇದಿಕೆ ಹಂಚಿಕೊಳ್ಳಬೇಕಿದೆ. ಸದ್ಯದವರೆಗೂ ಯಾರೆಲ್ಲಾ ಭಾಗವಹಿಸುತ್ತಾರೆ ಎಂಬುದರ ಸ್ಪಷ್ಟತೆ ಸಿಕ್ಕಿಲ್ಲ.

ವರಮಹಾಲಕ್ಷ್ಮಿ ಹಬ್ಬಕ್ಕೆ ಬಂದ್ರೆ ಟೆನ್ಷನ್ ಶುರು

ವರಮಹಾಲಕ್ಷ್ಮಿ ಹಬ್ಬಕ್ಕೆ ಬಂದ್ರೆ ಟೆನ್ಷನ್ ಶುರು

ಸದ್ಯಕ್ಕೆ ವರಮಹಾಲಕ್ಷ್ಮಿ ಹಬ್ಬಕ್ಕೆ ಕುರುಕ್ಷೇತ್ರ ಸಿನಿಮಾ ರಿಲೀಸ್ ಎನ್ನಲಾಗುತ್ತಿದೆ. ಒಂದು ವೇಳೆ ನಿರ್ಮಾಪಕ ಮುನಿರತ್ನ ಕೂಡ ಅದೇ ದಿನಾಂಕವನ್ನ ಪ್ರಕಟ ಮಾಡಿದ್ರೆ, ಗಾಂಧಿನಗರದಲ್ಲಿ ಟೆನ್ಷನ್ ಶುರುವಾಗುತ್ತೆ.

ಪೈಲ್ವಾನ್ ಗೆ ಎದುರಾಗುತ್ತೆ ಕುರುಕ್ಷೇತ್ರ.!

ಪೈಲ್ವಾನ್ ಗೆ ಎದುರಾಗುತ್ತೆ ಕುರುಕ್ಷೇತ್ರ.!

ವರಮಹಾಲಕ್ಷ್ಮಿ ಹಬ್ಬ ಕುರುಕ್ಷೇತ್ರ ಚಿತ್ರದ ಆಗಮನಕ್ಕೆ ದಿನಾಂಕ ಎಂದು ಘೋಷಣೆಯಾದ್ರೆ, ಸ್ಯಾಂಡಲ್ ವುಡ್ ನಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗುತ್ತೆ. ಯಾಕಂದ್ರೆ, ಅದೇ ದಿನ ಸುದೀಪ್ ಅಭಿನಯದ ಪೈಲ್ವಾನ್ ಸಿನಿಮಾ ಬರುವುದಾಗಿ ಹೇಳಿಕೊಂಡಿದೆ. ಈ ಎರಡು ಚಿತ್ರಗಳು ಒಟ್ಟಿಗೆ ಬಂದ್ರೆ ಬಾಕ್ಸ್ ಆಫೀಸ್ ಲೆಕ್ಕಾಚಾರವೂ ತಲೆಕೆಳಗಾಗುತ್ತೆ. ಹೀಗಾಗಿ, ಶನಿವಾರದ ಸುದ್ದಿಗೋಷ್ಠಿ ಮಹತ್ವ ಪಡೆದುಕೊಂಡಿದೆ.

ದರ್ಶನ್-ನಿಖಿಲ್ ಬಂದ್ರು ಸುದ್ದಿ, ಬರದೇ ಇದ್ದರೂ ಸುದ್ದಿ

ದರ್ಶನ್-ನಿಖಿಲ್ ಬಂದ್ರು ಸುದ್ದಿ, ಬರದೇ ಇದ್ದರೂ ಸುದ್ದಿ

ಹಾಗ್ನೋಡಿದ್ರೆ, ಕುರುಕ್ಷೇತ್ರ ಸುದ್ದಿಗೋಷ್ಠಿಗೆ ದರ್ಶನ್ ಮತ್ತು ನಿಖಿಲ್ ಇಬ್ಬರು ಬಂದ್ರು ಸುದ್ದಿಯಾಗುತ್ತೆ, ಬರದೇ ಇದ್ದರೂ ಸುದ್ದಿಯಾಗುತ್ತೆ. ಯಾರಾದರೂ ಒಬ್ಬರು ಬಂದ್ರೂ ಹೆಡ್ ಲೈನ್ ಆಗಿತ್ತೆ. ಮಂಡ್ಯದಲ್ಲಿ ಎದುರಾಳಿಯಾಗಿದ್ದ ಇಬ್ಬರು ಈ ಚಿತ್ರದಲ್ಲಿ ನಟಿಸಿದ್ದಾರೆ. ಪ್ರಚಾರಕ್ಕೆ ಇಬ್ಬರು ಬರವ ಅಗತ್ಯವಿರುತ್ತೆ.

More from Filmibeat

English summary
Munirathna produced darshan starrer Kurukshetra movie release date to be announced on this Saturday (may 18th).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X