ಮೆಜೆಸ್ಟಿಕ್ ನಲ್ಲೇ ಎರಡು ಚಿತ್ರಮಂದಿರಲ್ಲಿ 'ಕುರುಕ್ಷೇತ್ರ' ರಿಲೀಸ್
ಕನ್ನಡ ಚಿತ್ರರಂಗದಲ್ಲಿ ಒಂದು ಟ್ರೆಂಡ್ ಇದೆ. ಯಾವುದೇ ಸಿನಿಮಾ ರಿಲೀಸ್ ಆದ್ರೂ ಮೆಜಿಸ್ಟಿಕ್ ನಲ್ಲಿ ಅದಕ್ಕೊಂದು ಮುಖ್ಯ ಚಿತ್ರಮಂದಿರ ಇರಲೇಬೇಕು. ಕೆಜಿ ರಸ್ತೆಯಲ್ಲಿ ಥಿಯೇಟರ್ ಸಿಕ್ಕಿಲ್ಲ ಅಂದ್ರೆ ಆ ಚಿತ್ರಕ್ಕೆ ಬೆಲೆ ಇಲ್ಲ.
ಕೆಲವೊಮ್ಮೆ ಮೆಜೆಸ್ಟಿಕ್ ನಲ್ಲಿ ಮೇನ್ ಥಿಯೇಟರ್ ಸಿಕ್ಕಿಲ್ಲ ಎಂದು ಬಿಡುಗಡೆ ದಿನಾಂಕವನ್ನ ಮುಂದಕ್ಕೆ ಹಾಕಿಕೊಂಡಿರುವುದು ಉಂಟು. ಅದೇ ರೀತಿ ಮುಖ್ಯ ಚಿತ್ರಮಂದಿರದ ಕಾನ್ಸೆಪ್ಟ್ ಬ್ರೇಕ್ ಮಾಡಿ, ಸಿನಿಮಾ ರಿಲೀಸ್ ಮಾಡಿರುವುದು ಉಂಟು.
ಹೀಗೆ, ಮೆಜೆಸ್ಟಿಕ್ ನಲ್ಲಿ ಮುಖ್ಯ ಚಿತ್ರಮಂದಿರಕ್ಕೆ ಕಾಯುವ ಪರಿಸ್ಥಿತಿಯಲ್ಲಿ ಒಂದೇ ಚಿತ್ರಕ್ಕೆ ಎರಡು ಚಿತ್ರಮಂದಿರ ಸಿಕ್ಕಿರುವುದು ನಿಜಕ್ಕೂ ವಿಶೇಷ. ಹೌದು, ದರ್ಶನ್ ಅವರ 50ನೇ ಚಿತ್ರ ಕುರುಕ್ಷೇತ್ರ ಕೆಜಿ ರಸ್ತೆಯಲ್ಲಿ ಎರಡು ಥಿಯೇಟರ್ ನಲ್ಲಿ ತೆರೆಕಾಣ್ತಿದೆ.

ನರ್ತಕಿ ಮುಖ್ಯ ಚಿತ್ರಮಂದಿರ ಮತ್ತು ತ್ರಿವೇಣಿ ಚಿತ್ರಮಂದಿರದಲ್ಲೂ ಕುರುಕ್ಷೇತ್ರ ಆಗಮನವಾಗುತ್ತಿದೆ. ಎರಡೂ ಚಿತ್ರಮಂದಿರದಲ್ಲೂ ದಿನಕ್ಕೆ ನಾಲ್ಕು ಶೋಗಳು ಪ್ರದರ್ಶನ ಕಾಣುತ್ತಿದೆ. ಸದ್ಯಕ್ಕೆ ತ್ರಿವೇಣಿ ಚಿತ್ರಮಂದಿರದಲ್ಲಿ ಒಂದು ವಾರದವರೆಗೂ ಮುಂಗಡ ಟಿಕೆಟ್ ಬುಕ್ಕಿಂಗ್ ಗೆ ಅವಕಾಶ ಮಾಡಿಕೊಟ್ಟಿದ್ದು, ಎರಡನೇ ವಾರ ಬೇರೆ ಸಿನಿಮಾ ಹಾಕಬಹುದು.
ಅಂದ್ಹಾಗೆ, ಕೆಜಿ ರಸ್ತೆಯಲ್ಲಿ ಒಂದೇ ಸಿನಿಮಾ ಎರಡು ಚಿತ್ರಮಂದಿರಲ್ಲಿ ತೆರೆಕಂಡಿದ್ದು ಇದೇ ಮೊದಲಲ್ಲ. ಇದಕ್ಕೂ ಮುಂಚೆ ಕೆಲವು ಚಿತ್ರಗಳು ಬಿಡುಗಡೆಯಾಗಿದೆ. ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿನಯಿಸಿದ್ದ 'ದಿ ವಿಲನ್' ಸಿನಿಮಾ ಕೂಡ ಎರಡು ಚಿತ್ರಮಂದಿರಲ್ಲಿ ರಿಲೀಸ್ ಆಗಿತ್ತು.


Click it and Unblock the Notifications











