ಸದ್ದಿಲ್ಲದೇ ಆಂಧ್ರಕ್ಕೆ ಎಂಟ್ರಿ ಕೊಟ್ಟ 'ದುರ್ಯೋಧನ' ದರ್ಶನ್

Recommended Video

Kurukshetra Movie: ಸದ್ದಿಲ್ಲದೇ ಆಂಧ್ರಕ್ಕೆ ಎಂಟ್ರಿ ಕೊಟ್ಟ ದರ್ಶನ್ | FILMIBEAT KANNADA

ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಸಿನಿಮಾದ ಐದು ಭಾಷೆಗಳಲ್ಲಿ ಬರುತ್ತೆ ಎನ್ನಲಾಗಿತ್ತು. ಇದುವರೆಗೂ ಕನ್ನಡದಲ್ಲಿ ಬಿಟ್ಟರೇ ಬೇರೆ ಭಾಷೆಯಲ್ಲೂ ಸಿನಿಮಾ ಪ್ರಚಾರ ಆಗಿಲ್ಲ. ಹೀಗಾಗಿ, ಬಹುಭಾಷೆಯಲ್ಲಿ ಈ ಸಿನಿಮಾ ಬರುತ್ತಾ ಇಲ್ವಾ ಎಂಬುದು ಅನುಮಾನ ಉಂಟು ಮಾಡಿತ್ತು.

ಆದ್ರೀಗ, ಸೈಲೆಂಟ್ ಆಗಿ ಯಾವುದೇ ಸದ್ದು ಸುದ್ದಿಯಿಲ್ಲದೇ ಆಂಧ್ರದಲ್ಲಿ ಕುರುಕ್ಷೇತ್ರಂ ಚಿತ್ರದ ಆಡಿಯೋ ರಿಲೀಸ್ ಮಾಡಿದ್ದಾರೆ ನಿರ್ಮಾಪಕ ಮುನಿರತ್ನ. ತೆಲುಗಿನಲ್ಲಿ ಕುರುಕ್ಷೇತ್ರಂ ಟ್ರೈಲರ್ ಕೂಡ ರಿಲೀಸ್ ಆಗಿದೆ.

ಈ ಮೂಲಕ ಬಹುಭಾಷೆಉಲ್ಲಿ ಕುರುಕ್ಷೇತ್ರ ರಿಲೀಸ್ ಆಗುವುದೇ ಪಕ್ಕಾ ಆಗಿದೆ. ಹಾಗಿದ್ರೆ, ಆಂಧ್ರದಲ್ಲಿ ನಡೆದ ಆಡಿಯೋ ಬಿಡುಗಡೆ ಸಮಾರಂಭದಲ್ಲಿ ಯಾರೆಲ್ಲ ಭಾಗಿಯಾಗಿದ್ದರು? ಮುಂದೆ ಓದಿ....

ಆಂಧ್ರದಲ್ಲಿ ಅಬ್ಬರಿಸಿದ ದುರ್ಯೋಧನ

ಆಂಧ್ರದಲ್ಲಿ ಅಬ್ಬರಿಸಿದ ದುರ್ಯೋಧನ

ಆಂಧ್ರದಲ್ಲಿಂದು ಕುರುಕ್ಷೇತ್ರಂ ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆದಿದ್ದು, ನಿರ್ಮಾಪಕ ಮುನಿರತ್ನ, ನಿರ್ದೇಶಕ ನಾಗಣ್ಣ, ವಿತರಕ ರಾಕ್ ಲೈನ್ ವೆಂಕಟೇಶ್ ಭಾಗಿಯಾಗಿದ್ದರು. ಕನ್ನಡದಲ್ಲಿ ಟ್ರೈಲರ್ ರಿಲೀಸ್ ಆದ ಬೆನ್ನಲ್ಲೇ ಈಗ ತೆಲುಗು ಭಾಷೆಯಲ್ಲಿ ಕುರುಕ್ಷೇತ್ರಂ ಟ್ರೈಲರ್ ಬಿಡುಗಡೆಯಾಗಿದೆ.

ತೆಲುಗುನಾಡಲ್ಲಿ ಡಿ ಬಾಸ್

ತೆಲುಗುನಾಡಲ್ಲಿ ಡಿ ಬಾಸ್

ನಟ ದರ್ಶನ್ ಸಿನಿಮಾ ಇಂಡಸ್ಟ್ರಿಗೆ ಬಂದು ಎರಡು ದಶಕಗಳಾಗಿವೆ. ಇದುವರೆಗೂ ಡಿ-ಬಾಸ್ ಅಭಿನಯದ ಯಾವ ಚಿತ್ರವೂ ಏಕಕಾಲದಲ್ಲಿ ಬೇರೆ ಭಾಷೆಯಲ್ಲಿ ಬಂದಿಲ್ಲ. ಡಬ್ಬಿಂಗ್ ಆಗಿರುವ ಉದಾಹರಣೆಗಳಿವೆ. ಇದೀಗ ಮೊದಲ ಸಲ ದರ್ಶನ್ ಸಿನಿಮಾ ಏಕಕಾಲದಲ್ಲಿ ಐದು ಭಾಷೆಯಲ್ಲಿ ರಿಲೀಸ್ ಆಗ್ತಿದೆ. ಈ ವಿಶೇಷವಾಗಿ ಸ್ವತಃ ದರ್ಶನ್ ಅವರೇ ಆಂಧ್ರಕ್ಕೆ ತೆರಳಿ ವೇದಿಕೆ ಹಂಚಿಕೊಂಡಿದ್ದಾರೆ.

ತಮಿಳು, ಹಿಂದಿಗೂ ಹೋಗ್ತಾರಾ?

ತಮಿಳು, ಹಿಂದಿಗೂ ಹೋಗ್ತಾರಾ?

ಕನ್ನಡದಲ್ಲಿ ಅದ್ಧೂರಿಯಾಗಿ ಆಡಿಯೋ ಲಾಂಚ್ ಆಯಿತು. ಈಗ ತೆಲುಗಿನಲ್ಲೂ ಟ್ರೈಲರ್ ತೋರಿಸಲಾಗಿದೆ. ಮುಂದೆ ತಮಿಳು ಮತ್ತು ಹಿಂದಿ ಕಡೆ ದುರ್ಯೋಧನ ಹೆಜ್ಜೆ ಹಾಕಬಹುದು. ತಮಿಳು ಮತ್ತು ಹಿಂದಿಯಲ್ಲೂ ಕುರುಕ್ಷೇತ್ರ ಟ್ರೈಲರ್ ರಿಲೀಸ್ ಮಾಡುವ ಮೂಲಕ ಇದು ಪ್ಯಾನ್ ಇಂಡಿಯಾ ಸಿನಿಮಾ ಎಂದು ತೋರಿಸಬಹುದು.

ಸರಿಯಾಗಿ ಬಳಸಿಕೊಳ್ಳಬಹುದು.!

ಸರಿಯಾಗಿ ಬಳಸಿಕೊಳ್ಳಬಹುದು.!

ಕುರುಕ್ಷೇತ್ರವನ್ನ ಐದು ಭಾಷೆಯಲ್ಲಿ ರಿಲೀಸ್ ಮಾಡಲು ನಿರ್ಧರಿಸಿರುವ ಚಿತ್ರತಂಡ ಎಲ್ಲ ಭಾಷೆಯಲ್ಲು ಪ್ರಚಾರ ಮಾಡಬೇಕಿದೆ. ಈ ಕಾರಣದಿಂದಾರೂ ದರ್ಶನ್ ಬೇರೆ ಇಂಡಸ್ಟ್ರಿಗಳಿಗೆ ಎಂಟ್ರಿ ಕೊಡಬಹುದು. ಇಷ್ಟು ದಿನ ಸ್ಯಾಂಡಲ್ ವುಡ್ ನಲ್ಲಿ ಬಾಸ್ ಆಗಿದ್ದ ದರ್ಶನ್ ನೆರೆ ರಾಜ್ಯಗಳಲ್ಲೂ ತಮ್ಮ ಸಾಮ್ರಾಜ್ಯ ವಿಸ್ತರಿಸಿಕೊಳ್ಳಬಹುದಾದ ಅವಕಾಶ ಇದೆ. ಆದರೆ, ಈ ಬಗ್ಗೆ ಹೆಚ್ಚು ಪ್ರಚಾರ ಇಲ್ಲದೇ ಸೈಲೆಂಟ್ ಆಗಿ ಪ್ರಮೋಟ್ ಮಾಡ್ತಿದ್ದಾರೆ.

More from Filmibeat

English summary
Kannada actor Darshan, ravichandran, nikhil kumar, arjun sarja starrer kurukshetra telugu trailer release. this trailer looking very fresh and amezing. the movie directed by naganna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X