ಕುರುಕ್ಷೇತ್ರ ಚಿತ್ರದ ಮೂರನೇ ಹಾಡಿನ ಬಿಡುಗಡೆ ದಿನಾಂಕ ಬಹಿರಂಗ

ಮುನಿರತ್ನ ನಿರ್ಮಾಣದ ಪೌರಾಣಿಕ ಚಿತ್ರ ಕುರುಕ್ಷೇತ್ರ ಈಗಾಗಲೇ ಎರಡು ಹಾಡುಗಳು ಬಿಡುಗಡೆಯಾಗಿದೆ. ಈಗ ಮೂರನೇ ಹಾಡಿನ ರಿಲೀಸ್ ದಿನಾಂಕ ಬಹಿರಂಗವಾಗಿದೆ. ಜುಲೈ 19ರಂದು ಸಂಜೆ 6.30ಕ್ಕೆ ಕುರುಕ್ಷೇತ್ರದ 'ಎಲ್ಲಿರುವೇ ಹರಿಯೇ....' ಹಾಡು ಬರಲಿದೆ.

ಮೊದಲನೇ ಹಾಡು ದುರ್ಯೋಧನನ ಕುರಿತು, ಕೌರವನ ವ್ಯಕ್ತಿತ್ವವನ್ನ ವೈಭವಿಕರಿಸುವಂತಿತ್ತು. ಎರಡನೇ ಹಾಡು ದುರ್ಯೋಧನ ಮತ್ತು ಭಾನುಮತಿ ನಡುವಿನ ರೋಮ್ಯಾಂಟಿಕ್ ಗೀತೆಯಾಗಿತ್ತು. ಮೂರನೇ ಹಾಡು ದ್ರೌಪದಿ ವಸ್ತ್ರಾಪಹರಣದ ವೇಳೆ ಶ್ರೀಕೃಷ್ಣನಿಗಾಗಿ ದ್ರೌಪದಿ ಮನವಿ ಮಾಡುವ ಶೋಕಗೀತೆಯಾಗಿದೆ.

ದ್ರೌಪದಿ ಪಾತ್ರದಲ್ಲಿ ಬಹುಭಾಷಾ ನಟಿ ಸ್ನೇಹಾ ನಟಿಸಿದ್ದು, ಪಾಂಡವರಾಗಿ ಶಶಿಕುಮಾರ್ (ಧರ್ಮರಾಯ), ಸೋನು ಸೂದ್ (ಅರ್ಜುನ), ಡ್ಯಾನಿಶ್ ಅಖ್ತರ್ (ಭೀಮ) ನಕುಲ ಮತ್ತು ಸಹದೇವನ ಪಾತ್ರದಲ್ಲಿ ಚಂದನ್ ಕುಮಾರ್ ಮತ್ತು ಯಶಸ್ ಸೂರ್ಯ ನಟಿಸಿದ್ದಾರೆ.

Kurukshetra third song yalliruve hariye will release on friday

ಇನ್ನುಳಿದಂತೆ ಡಾ ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ ರಚಿಸಿದ್ದು, ಹರಿಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಮುನಿರತ್ನ ನಿರ್ಮಾಣ ಮಾಡಿರುವ ಈ ಚಿತ್ರವನ್ನ ನಾಗಣ್ಣ ನಿರ್ದೇಶಿಸಿದ್ದಾರೆ.

ಆಗಸ್ಟ್ 2 ರಂದು ಕನ್ನಡ, ತಮಿಳು, ತೆಲುಗು, ಹಿಂದಿ ಮತ್ತು ಮಲಯಾಳಂ ಭಾಷೆಯಲ್ಲಿ ಕುರುಕ್ಷೇತ್ರ ಸಿನಿಮಾ ಬರ್ತಿದೆ. ದುರ್ಯೋಧನನಾಗಿ ದರ್ಶನ್ ನಟಿಸಿದ್ದು, ಕೃಷ್ಣನ ಪಾತ್ರದಲ್ಲಿ ರವಿಚಂದ್ರನ್, ಕರ್ಣನ ಪಾತ್ರದಲ್ಲಿ ಅರ್ಜುನ್ ಸರ್ಜಾ ಹಾಗೂ ಭೀಷ್ಮನ ಪಾತ್ರದಲ್ಲಿ ಅಂಬರೀಶ್ ಬಣ್ಣ ಹಚ್ಚಿದ್ದಾರೆ.

More from Filmibeat

English summary
Challenging star darshan starrer Kurukshetra's third song yalliruve hariye will release on friday july 19th. the movie directed by naganna and produced by munirathna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X