50ನೇ ಸಿನಿಮಾ ಬಗ್ಗೆ ಕ್ಲಾರಿಟಿ ನೀಡಿದ ದರ್ಶನ್
Recommended Video

ನಟ ದರ್ಶನ್ ಅವರ 50ನೇ ಸಿನಿಮಾ ಯಾವುದು? ಎನ್ನುವ ಪ್ರಶ್ನೆ ಬಹಳ ದಿನದಿಂದ ಇತ್ತು. 'ಕುರುಕ್ಷೇತ್ರ' ಹಾಗೂ 'ಯಜಮಾನ' ಚಿತ್ರಗಳ ಪೈಕಿ ಯಾವುದು ತಮ್ಮ ಹಾಫ್ ಸೆಂಚುರಿ ಸಿನಿಮಾ ಎಂದು ಸ್ವತಃ ದರ್ಶನ್ ಅವರೇ ಹೇಳಿದ್ದಾರೆ.
'ಕುರುಕ್ಷೇತ್ರ' ಸಿನಿಮಾದ ಚಿತ್ರೀಕರಣ ಮೊದಲು ಶುರು ಆಗಿತ್ತು. ಆದರೆ, 'ಯಜಮಾನ' ಸಿನಿಮಾದ ಶೂಟಿಂಗ್ ಮೊದಲು ಮುಗಿದಿದ್ದು, ಬಿಡುಗಡೆಯಾಗುತ್ತಿದೆ. ಈ ಕಾರಣ ಎಲ್ಲರಿಗೂ 50ನೇ ಸಿನಿಮಾ ಯಾವುದು ಎಂಬ ಗೊಂದಲ ಇತ್ತು.
ಈ ಬಗ್ಗೆ ಮಾತನಾಡಿರುವ ದರ್ಶನ್ D 50 'ಕುರುಕ್ಷೇತ್ರ', D 51 'ಯಜಮಾನ' ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಮುನಿರತ್ನ ತುಂಬ ಇಷ್ಟಪಟ್ಟು ಆ ಸಿನಿಮಾ ಮಾಡಿದ್ದಾರೆ. ಗ್ರಾಫಿಕ್ ಕೆಲಸ ಇರುವ ಕಾರಣ ಆ ಸಿನಿಮಾದ ಬಿಡುಗಡೆ ನಿಧಾನ ಆಗಿದೆ. ಮೊದಲು 'ಕುರುಕ್ಷೇತ್ರ' ಶುರು ಆಗಿದ್ದು, ಅದೇ ನನ್ನ 50ನೇ ಸಿನಿಮಾ ಎಂದು ದರ್ಶನ್ ತಿಳಿಸಿದ್ದಾರೆ. ಅದೇ ಕಾರಣಕ್ಕೆ ಯಜಮಾನ ಪೋಸ್ಟರ್ ಗಳಲ್ಲಿಯೂ D 51 ಅಂತ ಹಾಕಲಾಗಿದೆ ಎಂದರು.

ದರ್ಶನ್ 51ನೇ ಸಿನಿಮಾ 'ಯಜಮಾನ' ಮಾರ್ಚ್ 1 ರಂದು ರಾಜ್ಯಾದಂತ್ಯ ಬಿಡುಗಡೆಯಾಗಲಿದೆ. ಹರಿಕೃಷ್ಣ ಹಾಗೂ ಪಿ ಕುಮಾರ್ ಈ ಚಿತ್ರದ ನಿರ್ದೇಶನ ಮಾಡಿದ್ದಾರೆ. ಶೈಲಜಾ ನಾಗ್ ನಿರ್ಮಾಣ ಚಿತ್ರಕ್ಕಿದೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೂಪ್ ಸಿನಿಮಾದ ನಾಯಕಿಯರು.


Click it and Unblock the Notifications











